Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸ್ಪೆಷಲ್ ಶೈಲಿಯಲ್ಲಿ ಸಿಂಪಲ್ ಪಲಾವ್ ಬೊಂಬಾಟ್ ರುಚಿ.! ಮಾಡಿ ನೋಡಿ..!
ಬೆಳಗ್ಗೆ ತಿಂಡಿಗೆ ನೀವು ಏನು ಮಾಡಲು ಬಯಸುತ್ತೀರಿ ಅಂದ್ರೆ ನೀವು ಹತ್ತಾರು ಲೀಸ್ಟ್ ಮುಂದಿಡಬಹುದು. ಅದ್ರಲ್ಲೂ ರೈಸ್ ಐಟಂನಿಂದ ಏನೆಲ್ಲಾ ಮಾಡಬಹುದು. ರೈಸ್‌ನಲ್ಲಿ ಚಿತ್ರಾನ್ನ, ಪುಳಿಯೋಗರೆ, ರೈಸ್ ಬಾತ್, ಬಿಸಿ ಬೇಳೆ ಬಾತ್, ಪಲಾವ್ ಸಹ ಮಾಡಿ ಸವಿದಿರುತ್ತೀರಿ, ಅದ್ರಲ್ಲೂ ಪಲಾವ್ ಮಾಡುವ ಶೈಲಿ ಮತ್ತು ರುಚಿಯಲ್ಲಿ ಹತ್ತಾರು ವಿಧ ಇದೆ.
ಪಲಾವ್ ಹತ್ತಾರು ತರಕಾರಿ ಹಾಕಿ ಸಿಂಪಲ್ ಆಗಿಯೂ ಮಾಡಬಹುದು ಅದೇ ರೀತಿ ಮಸಾಲೆ ಭರಿತವಾಗಿ ಬೊಂಬಾಟ್ ಶೈಲಿ ರುಚಿಕರ ಪಲಾವ್ ಸಹ ಮಾಡಬಹುದು. ಪಲಾವ್ ಕುಕ್ಕರ್‌ನಲ್ಲಿ ಮಾಡೋದ್ರಂದ ತಯಾರಿಕೆಗೆ ಕಡಿಮೆ ಸಮಯ ಹಿಡಿಯುತ್ತೆ. ಜೊತೆಗೆ ಕೆಲಸವು ಕಡಿಮೆ. ಹೀಗಾಗಿ ಹಲವರ ಮನೆಯಲ್ಲಿ ಬೆಳಗ್ಗೆ ಪಲಾವ್ ರೆಡಿಯಾಗಿರುತ್ತೆ.

ಹಾಗಾದ್ರೆ ನಾವಿಂದು ಸಿಂಪಲ್ ಆಗಿ ಕೆಲವೇ ವಸ್ತುಗಳ ಹಾಕಿ ಬೊಂಬಾಟ್ ರುಚಿಯ ಪಲಾವ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಜೊತೆಗೆ ಈ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಪಲಾವ್ ಎಲೆ - 3
- ಲವಂಗ - 1/4 ಟೀಸ್ಪೂನ್
- ಸೌನ್ಫ್ - 1/4 ಟೀಸ್ಪೂನ್
- ಚಕ್ರ ಮೊಗ್ಗುಗಳು-1
- ಏಲಕ್ಕಿ-4
- ದಾಲ್ಚಿನ್ನಿ - 2 ಪೀಸ್
- ಸ್ಟಾರ್ ಸೋಂಪು-3
- ಕರಿಮೆಣಸು - 1/4 ಟೀಸ್ಪೂನ್
- ಈರುಳ್ಳಿ - 1
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಹಸಿರು ಮೆಣಸಿನಕಾಯಿ - 6
- ಕೊತ್ತಂಬರಿ ಸೊಪ್ಪು 2 tbs
- ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
- ಟೊಮೆಟೋ - 1
- ಬೀನ್ಸ್ - 5
- ಕ್ಯಾರೆಟ್ - 1
- ಬೇಬಿ ಕಾರ್ನ್ -2
- ಹೂಕೋಸು - 1/2 ಕಪ್
- ಕ್ಯಾಪ್ಸಿಕಂ-1/4
- ಪುದೀನ - 2 ಟೀಸ್ಪೂನ್
- ಬಟಾಣಿ - 1/4 ಕಪ್
- ಆಲೂಗಡ್ಡೆ - 1
- ತುಪ್ಪ - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಈ ಸ್ಪೆಷಲ್ ಪಲಾವ್ ಮಾಡುವ ವಿಧಾನ
ಮೊದಲಿಗೆ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪವನ್ನು ಹಾಕಿಕೊಳ್ಳಿ. ತುಪ್ಪ ಇಲ್ಲದೆಯೂ ಈ ರೆಸಿಪಿ ಮಾಡಬಹುದು. ಈಗ ಎಣ್ಣೆಗೆ ಪಾಲವ್ ಎಲೆ, ಲವಂಗ, ಚೆಕ್ಕೆ, ಏಲಕ್ಕಿ, ಚಕ್ರಮೊಗ್ಗು, ಜೀರಿಗೆ, ಮರಾಠಿ ಮೊಗ್ಗು ಹಾಕಿಕೊಳ್ಳಿ. ಇದಾದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ.
ಬಳಿಕ ಇದಕ್ಕೆ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ, ಪುದೀನ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಗರಂ ಮಸಾಲ, ಟೊಮೆಟೋ, ಬಟಾಣಿ, ಕ್ಯಾರೆಡ್, ಕ್ಯಾಪ್ಸಿಕಂ. ಆಲೂಗಡ್ಡೆ, ಬೀನ್ಸ್ ಸೇರಿ ಹೆಚ್ಚಿಕೊಂಡಿರುವ ತರಕಾರಿ ಹಾಕಿಕೊಳ್ಳಿ. ಬಳಿಕ ಮಿಕ್ಸ್ ಮಾಡಿಕೊಳ್ಳಿ.
ಈಗ ಇದಕ್ಕೆ ನೀವು ಎಷ್ಟು ಗ್ಲಾಸ್ ನೀರು ತೆಗೆದುಕೊಂಡಿದ್ದೀರೋ ಅದರ ಎರಡರಷ್ಟು ನೀರನ್ನು ಹಾಕಿಕೊಂಡು ಉಪ್ಪು ಹಾಕಿ ಕುದಿಯಲು ಬಿಡಿ. ಕುಕ್ಕರ್‌ನಲ್ಲಿ ತರಕಾರಿ ನೀರು ಕುದಿಯಲು ಆರಂಭಿಸಿದಾಗ, ಮೊದಲೇ ನೀರಿಗೆ ಹಾಕಿ ನೆನೆಸಿಟ್ಟುಕೊಂಡ ಅಕ್ಕಿಯನ್ನು ತೆಗೆದು ಕುಕ್ಕರ್‌ಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಬಳಿಕ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಬಳಿಕ ಕುಕ್ಕರ್‌ನ ಪೂರ್ತಿ ಗ್ಯಾಸ್ ಹೊರಹೋಗಲು ಬಿಡಿ. ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಉದುರು ಉದುರಾದ ಪಲಾವ್ ರೆಡಿಯಾಗಿರುತ್ತದೆ. ಇದರ ಜೊತೆ ಮೊಸರು ಬಜ್ಜಿ ಮಾಡಿದರೆ ರುಚಿ ರುಚಿಯಾಗಿ ಬಾಯಿ ಚಪ್ಪರಿಸಿ ಸವಿಯಬಹುದು.



Click it and Unblock the Notifications
