Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಊಟದ ರುಚಿ ದುಪ್ಪಟ್ಟಾಗಿಸುವ ಬದನೆಕಾಯಿ ತವಾ ಫ್ರೈ: ಈ ರುಚಿ ರೋಸ್ಟ್ ಮಾಡಿ ನೋಡಿ!
ಮಧ್ಯಾಹ್ನದ ಊಟ ಹಾಗೆ ರಾತ್ರಿ ಊಟದಲ್ಲಿ ಅನ್ನದೊಂದಿಗೆ ಸವಿಯಲು ಯಾವುದಾದರು ಪಲ್ಯ, ಚಟ್ನಿ, ಸ್ನ್ಯಾಕ್ಸ್ ಮಾಡಿಟ್ಟುಕೊಳ್ಳುವುದು ಸಾಮಾನ್ಯ. ಅದ್ರಲ್ಲೂ ಪಲ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಊಟದ ರುಚಿ ಹೆಚ್ಚಾಗಬೇಕು ಅಂದ್ರೆ ಅಲ್ಲಿ ಪಲ್ಯ, ಚಟ್ನಿ ಹೀಗೆ ಏನಾದರೊಂದು ಇರಲೇಬೇಕು. ಆದ್ರೆ ನಾವಿಂದು ವಿಶೇಷವಾಗಿ ರೋಸ್ಟೆಡ್ ಖಾದ್ಯಗಳ ಸವಿಯೋದು ನೋಡಬಹುದು.
ಹೀಗಾಗಿ ಊಟದೊಂದಿಗೆ ಸವಿಯಲು ನಾವಿಂದು ಬದನೆಕಾಯಿ ತವಾ ಫ್ರೈ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಈ ಬದನೆಕಾಯಿ ತವಾ ಫ್ರೈ ಮಾಡಿ ಸವಿದಿರಬಹುದು. ಅಥವಾ ಊಟದೊಂದಿಗೆ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ಕೆಲವೇ ನಿಮಿಷದಲ್ಲಿ ಇದನ್ನು ಮಾಡಿ ಮುಗಿಸಬಹುದು.

ಬದನೆಕಾಯಿಯಿಂದ ಮಾಡುವ ಹಲವು ಖಾದ್ಯಗಳ ಪೈಕಿ ಈ ಬದನೆಕಾಯಿ ರೋಸ್ಟೆಡ್ ತವಾ ಫ್ರೈ ಬಹಳ ರುಚಿ ನೀಡಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ತವಾ ಫ್ರೈ ಬಹಳ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಈ ಬದನೆಕಾಯಿ ತವಾ ಫ್ರೈ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬದನೆಕಾಯಿ ತವಾ ಫ್ರೈ ಮಾಡಲು ಬೇಕಾಗುವ ವಸ್ತುಗಳು
- ಬದನೆಕಾಯಿ
- ಖಾರದ ಪುಡಿ
- ಧನಿಯಾ ಪುಡಿ
- ಅರಶಿಣ
- ಗರಂ ಮಸಾಲೆ
- ಉಪ್ಪು
- ಎಣ್ಣೆ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕರಿಬೇವು
- ಕೊತ್ತಂಬರಿ ಸೊಪ್ಪು
- ನಿಂಬೆ ರಸ
ಬದನೆಕಾಯಿ ತವಾ ಫ್ರೈ ಮಾಡುವ ವಿಧಾನವೇನು?
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಅರಶಿಣ, ಕತ್ತರಿಸಿದ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ಪುಡಿ ಉಪ್ಪು, ನಿಂಬೆ ರಸ 1 ಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಮಸಾಲೆಯಾಗಿ ಪರಿವರ್ತನೆಯಾಗಬೇಕು.
ಈಗ ಬದನೆಕಾಯಿಯನ್ನು ತೊಳೆದು ತೆಳುವಾಗಿ ಕತ್ತರಿಸಿಕೊಳ್ಳಿ. ವೃತ್ತಾಕಾರವಾಗಿ ಒಂದು ಬೆರಳಿನ ದಪ್ಪಕ್ಕೆ ಕತ್ತರಿಸಿ ಇಟ್ಟುಕೊಳ್ಳಿ. ಈಗ ರೆಡಿ ಮಾಡಿರುವ ಮಸಾಲೆಯನ್ನು ಈ ಬದನೆಕಾಯಿಯ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಬೇಕು. ಬದನೆಕಾಯಿಯ ಎಲ್ಲಾ ಭಾಗಕ್ಕೂ ಈ ಮಸಾಲೆ ಹಿಡಿಯಬೇಕು. ಹೀಗೆ ಎಲ್ಲಾ ಬದನೆಕಾಯಿಯನ್ನು ಸಹ ಇದೇ ರೀತಿ ಮಾಡಿಟ್ಟುಕೊಳ್ಳಿ. ಹಾಗೆ 10 ನಿಮಿಷ ಬಿಡಬೇಕು.
ಈಗ ಒಲೆ ಮೇಲೆ ತವಾ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಎರಡರಿಂದ ಮೂರು ಬದನೆಕಾಯಿ ಸ್ಲೈಸ್ಗಳನ್ನು ತವಾದಲ್ಲಿ ಇಟ್ಟು ಕರಿದುಕೊಳ್ಳಬೇಕು. ಎರಡೂ ಭಾಗವನ್ನು ಸಹ ಚೆನ್ನಾಗಿ ಹುರಿದುಕೊಳ್ಳಬೇಕು. ಇಷ್ಟಾದರೆ ಊಟದೊಂದಿಗೆ ಸವಿಯಲು ರುಚಿ ರುಚಿಯ ಬದನೆಕಾಯಿ ತವಾ ಫ್ರೈ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಊಟದ ಸಮಯಕ್ಕೆ ಇದನ್ನು ಮಾಡಿ ಸವಿದು ನೋಡಿ.
ಹಾಗೆ ಸ್ನ್ಯಾಕ್ಸ್ ಆಗಿಯೂ ಕೂಡ ಇದನ್ನ ಸವಿಯಬಹುದು. ಖಾರ ಖಾರವಾಗಿ ಸವಿಯಲು ಇದ್ದರೆ ಯಾವುದೇ ಚಟ್ನಿ, ಪಲ್ಯ ಯಾವುದೂ ಬೇಡ.



Click it and Unblock the Notifications
