Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರಾಯರ ಮಠದ ಘಮ ಘಮಿಸುವ ತಿಳಿಸಾರು ಮಾಡಿ! ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಊಟದೊಂದಿಗೆ ಹಲವು ರೀತಿಯ ಸಾಂಬಾರ್, ರಸಂ ಮಾಡಿ ಸವಿದಿರುತ್ತೀರಿ. ಹಾಗೆ ನೀವು ರಸಂ ಇಷ್ಟಪಡುವ ಮಂದಿಯಾಗಿದ್ದರೆ ನೀವು ಯಾವಾಗಲು ಊಟದೊಂದಿಗೆ ರುಚಿ ರುಚಿಯ ರಸಂ ಮಾಡಿ ಸವಿಯುವುದು ನೋಡಬಹುದು. ಹಾಗೆ ನಾವು ದೇವಾಲಯಗಳಲ್ಲಿ ಸವಿಯುವ ರಸಂ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಏಕೆಂದರೆ ದೇವಾಲಯದಲ್ಲಿ ನೀಡುವ ರಸಂ ಅದ್ಭುತ ರುಚಿಯಲ್ಲಿರಲಿದೆ.
ನಾವು ಕೂಡ ದೇವಸ್ಥಾನದ ರುಚಿಯಲ್ಲಿ ಈ ರಸಂ ಸವಿಯಲು ಇಷ್ಟಪಟ್ಟು ಅದನ್ನು ಮನೆಯಲ್ಲೇ ಮಾಡಿ ಸವಿಯಲು ಮುಂದಾಗಿರುತ್ತೇವೆ. ಆದ್ರೆ ನಾವಿಂದು ರಾಯರ ಮಠದಲ್ಲಿ ನೀಡುವಂತಹ ರುಚಿ ರುಚಿಯ ತಿಳಿಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ಯಾವುದೇ ರಾಯರ ಮಠದಲ್ಲಿ ನೀವು ಊಟ ಸವಿದರೆ ಅಲ್ಲಿ ರುಚಿ ರುಚಿಯ ತಿಳಿಸಾರು ಸವಿದಿರುತ್ತೀರಿ.

ಈ ರುಚಿಯಲ್ಲಿ ಮನೆಯಲ್ಲೂ ಕೂಡ ತಿಳಿ ಸಾರು ಮಾಡಿ ಸವಿಯಬಹುದು. ಹಾಗಾದ್ರೆ ಈ ತಿಳಿಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ತಿಳಿಸಾರು ಮಾಡಿದ್ರೆ ಮನೆಮಂದಿ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ರಾಯರ ಮಠದಲ್ಲಿನ ತಿಳಿಸಾರು ಘಮ ಘಮ ಎನ್ನುವ ರುಚಿ ನೀಡುತ್ತೆ.
ಹಾಗಾದ್ರೆ ಈ ಬೇಳೆ ತಿಳಿಸಾರು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದಕೊಳ್ಳೋಣ.
ರಾಯರ ಮಠದ ತಿಳಿ ಸಾರು ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ತೊಗರಿ ಬೇಳೆ
- ಅರಶಿಣ
- ಎಣ್ಣೆ
- ಸಾಸಿವೆ
- ಜೀರಿಗೆ
- ಇಂಗು ಕರಿಬೇವು
- ಒಣ ಮೆಣಸು
- ಕಾಳು ಮೆಣಸು ಮೆಂತ್ಯ
- ಧನಿಯಾ ಕಾಳು
- ಉಪ್ಪು
- ಹುಣಸೆ ಹುಳಿ
- ಬೆಲ್ಲ
ರಾಯರ ಮಠದ ತಿಳಿ ಸಾರು ಮಾಡುವುದು ಹೇಗೆ?
ಮೊದಲು ಅರ್ಧ ಕಪ್ ತೊಗರಿ ಬೇಳೆ ತೆಗೆದುಕೊಂಡು ತೊಳೆದು ಅನ್ನು ಕುಕ್ಕರ್‌ಗೆ ಹಾಕಿ ಬೇಳೆಯ 2 ಪಟ್ಟು ನೀರು, ಅರಶಿಣ, ಎಣ್ಣೆ ಹಾಕಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ನಂತರ ಮತ್ತೆ 3 ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ.
ಈಗ ಬಾಣಲೆಯನ್ನ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಧನಿಯಾ ಕಾಳು, ಜೀರಿಗೆ, ಸಾಸಿವೆ, ಮೆಂತ್ಯ ಕಾಳು ಅರ್ಧ ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 2 ನಿಮಿಷ ಹುರಿದು ಒಲೆ ಆಫ್ ಮಾಡಿ ತಣ್ಣಗಾಲು ಬಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಬೇಳೆಯನ್ನು ಕುದಿ ಬರಲು ಬಿಡಿ. ಅದಕ್ಕೆ ಉಪ್ಪು, ಚಿಕ್ಕ ಬೆಲ್ಲ, ಹುಣಸೆ ಹುಳಿಯ ನೀರು ಅಥವಾ ಪೇಸ್ಟ್ ಸಹ ಹಾಕಿಕೊಳ್ಳಬಹುದು. ಹಾಗೆ ಈಗ ರುಬ್ಬಿಕೊಂಡಿರುವ ಮಸಾಲೆಗಳ ಪುಡಿಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಕುದಿಬಂದ ಬಳಿಕ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಬಿಡಿ.
ಈಗ ಸಣ್ಣದಾಗಿ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ಈ ತಿಳಿಸಾರಿನ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತಿಳಿಸಾರು ರೆಡಿಯಾಗಲಿದೆ. ಇದರ ಘಮ ಘಮ ಎನ್ನುವಂತಹ ರುಚಿಯು ನಿಮಗೆ ರಾಯರ ಮಟದ ತಿಳಿಸಾರನ್ನು ನೆನಪಿಸಲಿದೆ. ಒಮ್ಮೆ ಸವಿದರೆ ನೀವು ಪತ್ತೆ ಮತ್ತೆ ಮಾಡಿ ಸವಿಯೋದು ಖಚಿತ.



Click it and Unblock the Notifications
