Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಹತ್ತೇ ನಿಮಿಷದಲ್ಲಿ ಈ ಆಂಬೊಡೆ ಮಾಡಿ ರುಚಿಯೂ ನೋಡಿ..!
ಬೆಳಗ್ಗೆ ತಿಂಡಿಗೆ ಇಲ್ಲವೆ ಸಂಜೆ ಸಮಯದಲ್ಲಿ ಸವಿಯಲು ಸ್ನ್ಯಾಕ್ಸ್ ಆಗಿ ನೀವು ಹಲಗವು ರೀತಿಯ ಕರಿದ ತಿಂಡಿಗಳ ಮೊರೆ ಹೋಗಬಹುದು. ಅದ್ರಲ್ಲೂ ವಿಶೇಷವಾಗಿ ಕರಿದಂತಹ ಬೋಂಡಾ, ಬಜ್ಜಿ, ಚುರುಮುರಿಯಂತಹ ತಿಂಡಿಗಳು ಬಾಯಲ್ಲಿ ನೀರು ತರಿಸುತ್ತವೆ. ಇನ್ನು ಮನೆಯಲ್ಲೇ ಹಲವು ರೀತಿ ಕರಿದ ತಿಂಡಿಗಳ ಮಾಡಿ ಸವಿಯುವುದು ಸಹ ನೋಡಬಹುದು.
ಅದ್ರಲ್ಲೂ ವಡೆಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ವಡೆಗಳಲ್ಲಿನ ಹಲವು ವಿಧಗಳು ಬಾಯಲ್ಲಿ ನೀರು ತರಿಸುತ್ತವೆ. ಹಾಗೆ ವಡೆಯನ್ನು ಬೆಳಗ್ಗೆ ತಿಂಡಿಯ ಸಮಯದಲ್ಲಿ ಹಾಗೆ ಸಂಜೆ ಸ್ನ್ಯಾಕ್ಸ್ ಆಗಿ ಸವಿಯಲು ಎಲ್ಲರಿಗೂ ಇಷ್ಟವಾಗಿತ್ತು. ಮಸಾಲೆ ವಡೆಗಳನ್ನು ಖಾರ ಚಟ್ನಿಗಳ ಜೊತೆಗೆ ಸವಿಯುತ್ತಿದ್ದರೆ ಅದರ ರುಚಿಗೆ ಜನರ ಬಾಯಲ್ಲಿ ನೀರು ಬರುವುದು ಖಚಿತ.

ಹಾಗೆ ನಾವಿಂದು ತಿಂಡಿ, ಊಟ, ಸ್ನ್ಯಾಕ್ಸ್ ಗೂ ಮಾಡಿ ಸವಿಯಬಹುದಾದಂತಹ ಆಂಬೊಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ಕೆಲವು ಹೋಟೆಲ್ಗಳಲ್ಲಿ ಬ್ರೇಕ್ಫಾಸ್ಟ್ ಜೊತೆಗೆ ಹಾಗೂ ಸಂಜೆಯ ಟೀ ಕಾಫಿಯ ಜೊತೆಗೆ ಇದನ್ನು ಸವಿಯಲು ನೀಡುವುದು ನೋಡಿರಬಹುದು. ಅದರ ರುಚಿ ಒಮ್ಮೆ ಸವಿದಿದ್ದರೆ ಮತ್ತೆ ಮತ್ತೆ ಸವಿಯಬೇಕು ಎನಿಸುತ್ತದೆ.
ಹಾಗಾದ್ರೆ ಈ ಆಂಬೊಡೆಯನ್ನು ಮನೆಯಲ್ಲಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದಕೊಳ್ಳೋಣ. ಅದ್ರಲ್ಲೂ ಆಂಬೋಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಬೇಕಾಗುತ್ತದೆ? ಎಂಬ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ಆಂಬೊಡೆ ಮಾಡಲು ಬೇಕಾಗುವ ಪದಾರ್ಥಗಳು
- ಹುರಿಗಡಲೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಶುಂಠಿ
- ಹಸಿ ಮೆಣಸು
- ಈರುಳ್ಳಿ
- ಸಬ್ಬಸಿಗೆ ಸೊಪ್ಪು
- ಒಣ ಮೆಣಸು
- ದನಿಯಾ ಕಾಳು
- ಎಣ್ಣೆ
ಆಂಬೊಡೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಸಬ್ಬಸಿಗೆ ಸೊಪ್ಪು ಈ ಎಲ್ಲಾ ಪದಾರ್ಥಗಳನ್ನು ಎಷ್ಟು ಸಣ್ಣದಾಗಿ ಹೆಚ್ಚಿಕೊಳ್ಳಲು ಸಾಧ್ಯವೋ ಅಷ್ಟು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬದಿಗೆ ಇಟ್ಟುಕೊಳ್ಳಿ.
ಈಗ ಒಂದು ಕಪ್ ತೆಗೆದುಕೊಂಡು ಅದಕ್ಕೆ ಹುರಿಗಡಲೆ ಹಾಕಿ ಬಳಿಕ ಅದನ್ನು ಮಿಕ್ಸಿ ಜಾರ್ಗೆ ಹಾಕಿ ಇದಕ್ಕೆ 2 ಒಣ ಮೆಣಸು, ಅರ್ಧ ಚಮಚ ದನಿಯ ಕಾಳು ಹಾಕಿ ತರಿ ತರಿಯಾಗಿ ಇರುವಂತೆ ಪುಡಿ ಮಾಡಿಕೊಳ್ಳಬೇಕು. ಬಹಳ ನುಣ್ಣಗೆ ಪುಡಿ ಮಾಡಬೇಡಿ. ಈಗ ಈ ಪುಡಿಯನ್ನು ಮೊದಲು ಮಿಕ್ಸ್ ಮಾಡಿದ್ದ ಮಸಾಲೆಗಳ ಜೊತೆಗೆ ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿ. ಉಂಡೆ ಕಟ್ಟಲು ಬರುವಂತೆ ಇಟ್ಟು ಇರಲಿ. ಹಾಗೆ ಹಿಟ್ಟನ್ನು ರೆಡಿ ಮಾಡಿದ ಬಳಿಕ ವಡೆ ರೀತಿಯಲ್ಲಿ ಕೈಯಿಂದ ತಟ್ಟಿಕೊಳ್ಳಿ ಇದು ದಪ್ಪವಾಗಿರಲಿ. ಬಳಿಕ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾದಾಗ ಒಂದು ಬಾರಿಗೆ 4ರಿಂದ 5 ಆಂಬೊಡೆಯನ್ನು ಇದರಲ್ಲಿ ಹಾಕಿ ಚೆನ್ನಾಗಿ ಕರಿದುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಮಸಾಲೆ ಆಂಬೊಡೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಅದರ ರುಚಿ ಒಮ್ಮೆ ಸವಿದರೆ ನೀವು ಮತ್ತೆ ಮತ್ತೆ ಸವಿಯೋದು ಖಚಿತ. ಮಕ್ಕಳಿಗೂ ಕೂಡ ಇದು ಬಹಳ ಇಷ್ಟವಾಗುತ್ತೆ. ತಿಂಡಿಯ ಜೊತೆಗೆ ಸವಿಯೋಕ ಇದು ರುಚಿಯಾಗಿರಲಿದೆ.



Click it and Unblock the Notifications
