Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಂಗಳೂರು ಶೈಲಿಯ ಸಜ್ಜಿಗೆ ಮಾಡಿ ಸವಿದು ನೋಡಿ! ಇಲ್ಲಿದೆ ಹೊಸ ರೀತಿ ವಿಧಾನ!
ನಿತ್ಯ ಬೆಳಗ್ಗೆ ನೀವು ಒಂದಲ್ಲಾ ಒಂದು ಬಗೆಯಲ್ಲಿ ರುಚಿ ರುಚಿಯ ಖಾದ್ಯ ಮಾಡಿ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ತಿಂಡಿಯ ಸಮಯಕ್ಕೆ ಯಾವುದಾದರು ರುಚಿ ರುಚಿಯಾದ ಹುರಿದು ಮಾಡುವ ತಿಂಡಿ ಯಾವುದಾದರು ಇದ್ದರೆ ಆ ದಿನ ಬಹಳ ಚೆನ್ನಾಗಿರಲಿದೆ. ಅದ್ರಲ್ಲೂ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡುವ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹೀಗಾಗಿ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಎಲ್ಲರಿಗೂ ಇಷ್ಟವಾಗುವ ಮಂಗಳೂರು ಶೈಲಿಯ ಉಪ್ಪಿಟ್ಟು ಅಥವಾ ಸಜ್ಜಿಗೆ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಈ ಮಂಗಳೂರಿನ ಸಜ್ಜಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಅನ್ನೋದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ನೀವು ಹಲವು ಬಗೆಯ ಉಪ್ಪಿಟ್ಟು ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಮಂಗಳೂರಿನಲ್ಲಿ ಮಾಡುವಂತಹ, ಬಾಯಲ್ಲಿ ನೀರು ತರಿಸುವಂತಹ ಸಜ್ಜಿಗೆ ಮಾಡುವ ಕುರಿತು ತಿಳಿದುಕೊಳ್ಳೋಣ. ಸಜ್ಜಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಂಗಳೂರು ಶೈಲು ಸಜ್ಜಿಗೆ ಮಾಡಲು ಬೇಕಾಗುವ ವಸ್ತುಗಳು
ರವೆ
ತೆಂಗಿನಕಾಯಿ ತುರಿ
ಕರಿಬೇವು
ಒಣ ಮೆಣಸು
ಎಣ್ಣೆ
ಉಪ್ಪು
ಈರುಳ್ಳಿ
ಮಂಗಳೂರು ಶೈಲಿಯ ಸಜ್ಜಿಗೆ ಮಾಡುವ ಸರಿಯಾದ ವಿಧಾನ ಇಲ್ಲಿದೆ
ಮೊದಲು ಅಳತೆ ಕಪ್‌ನಲ್ಲಿ ಬನ್ಸಿ ರಬೆ ಅಥವಾ ಉಪ್ಪಿಟ್ಟು ರವೆ ತೆಗೆದುಕೊಳ್ಳಿ. ಒಂದೂವರೆ ಕಪ್ ರವೆ ತೆಗೆದುಕೊಳ್ಳಿ. ಈಗ ಒಂದು ಪಾತ್ರೆಗೆ ಅಳತೆ ಕಪ್‌ನಲ್ಲಿ ಮೂರುವರೆ ಕಪ್ ನೀರು ಹಾಕಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಸಕ್ಕರೆ ಹಾಕಿ ಕರಗಿಸಿಕೊಳ್ಳಿ. ಈಗ ಒಲೆ ಮೇಲೆ ಇಟ್ಟು ಬಿಸಿಯಾಗಲು ಬಿಡಿ. ಈಗ ಮತ್ತೊಂದು ಕಡೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಫ್ರೈ ಆಗಲು ಬಿಡಿ.
ಈಗ ಕತ್ತರಿಸಿದ ಒಂದು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಆಗಬೇಕು. 2 ನಿಮಿಷ ಫ್ರೈ ಮಾಡಿದ ಬಳಿಕ ಒಣ ಮೆಣಸು ಕತ್ತರಿಸಿಕೊಂಡು ಹಾಕಿಕೊಳ್ಳಿ. ಈಗ ಕರಿಬೇವು ಹಾಕಿ ಬಳಿಕ ರವೆಯನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ 5 ನಿಮಿಷ ಫ್ರೈ ಮಾಡಬೇಕು. ರವೆ ಚೆನ್ನಾಗಿ ಅರಳಬೇಕು. ಹಾಗೆ ಇದಕ್ಕೆ ಮುಕ್ಕಾಲು ಕಪ್ ತೆಂಗಿನ ಕಾಯಿ ತುರಿ ಸಹ ಹಾಕಿಕೊಂಡು ಫ್ರೈ ಮಾಡಬೇಕು. 1 ನಿಮಿಷದ ವರೆಗೂ ಫ್ರೈ ಮಾಡಬೇಕು.
ಈಗ ಕುದಿಬರುತ್ತಿರುವ ನೀರನ್ನು ಇದಕ್ಕೆ ನಿಧಾನವಾಗಿ ಹಾಕಿಕೊಳ್ಳುತ್ತಾ ನಿಧಾನಕ್ಕೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ತಿರುಗಿಸಿಕೊಂಡು ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ. ಬಳಿಕ ಗಟ್ಟಿಯಾದಾಗ ಮಿಕ್ಸ್ ಮಾಡುತ್ತಾ ಸ್ವಲ್ಪ ಡ್ರೈ ಆಗಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಮಂಗಳೂರು ಶೈಲಿ ಸಜ್ಜಿಗೆ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಸವಿದು ನೋಡಿ.
ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ಅದ್ರಲ್ಲೂ ಗಡಿಬಿಡಿಯಲ್ಲಿದ್ದಾಗ ಮಾಡಲು ಇದು ಬಹಳ ಬೆಸ್ಟ್ ಆಯ್ಕೆಯಾಗಲಿದೆ. ಹಾಗೆ ಮಾಡೋದು ಕೂಡ ಬಹಳ ಸುಲಭ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಅದ್ರಲ್ಲೂ ನೀವು ತುಪ್ಪ ಬಳಸಿ ಮಾಡಿದರೆ ಅದರ ರುಚಿಗೆ ಮನೆ ಮಂದಿ ಮತ್ತೆ ಮತ್ತೆ ಸವಿಯಲು ಮುಂದಾಗುತ್ತಾರೆ.



Click it and Unblock the Notifications