Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅದ್ಭುತ ರುಚಿಯ ಕಡಲೆ ಕಾಳಿನ ಸಾರು ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನಮ್ಮ ಆರೋಗ್ಯಕ್ಕೆ ಬೇಳೆ, ಕಾಳುಗಳು ಬಹಳ ಉತ್ತಮ ಜೀವಸತ್ವ ನೀಡಲಿವೆ. ಹೀಗಾಗಿ ಹಿರಿಯರು ಕಾಳು, ಸೊಪ್ಪು ತರಕಾರಿ ಸವಿಯಬೇಕು ಎನ್ನುತ್ತಿರುತ್ತಾರೆ. ಕಾಳುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳ ಉತ್ತಮ, ದೇಹದ ಆರೋಗ್ಯ, ಸಮತೋಲನ ಕಾಪಾಡಿಕೊಳ್ಳಲು ಇವು ಸಹಕಾರಿಯಾಗಿವೆ. ಅದರಲ್ಲೂ ಕಡಲೆ ಕಾಳು ಅತೀ ಹೆಚ್ಚು ಪ್ರೋಟಿನ್ ತನ್ನಲ್ಲಿಟ್ಟುಕೊಂಡಿದೆ.
ಕಡಲೆಕಾಳಿನಲ್ಲಿ ಅತೀ ಹೆಚ್ಚು ಫೈಬರ್ ಹೊಂದಿರುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಆರೋಗ್ಯಕರವಾಗಿ ಇಡುತ್ತದೆ. ಕಬ್ಬಿಣದ ಅಂಶ ಇರುವುದರಿಂದ ದೇಹದಲ್ಲಿ ರಕ್ತರ ಕೊರತೆ ನಿವಾರಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಕಡಲೆ ಕಾಳಿನಿಂದ ನಾವು ಹಲವು ರೀತಿ ಖಾದ್ಯಗಳ ಮಾಡಬಹುದಾಗಿದೆ.

ಕಡಲೆ ಕಾಳಿನ ಹುಸ್ಲಿ, ಮಸಾಲೆ ಕಡ್ಲೆ, ಕಡಲೆ ಚಟ್ನಿ ಹೀಗೆ ಒಂದಲ್ಲಾ ಒಂದು ಖಾದ್ಯದಲ್ಲಿ ಇದನ್ನು ಬಳಸಿರುತ್ತೇವೆ. ಇನ್ನು ಈ ಕಡಲೆ ಕಾಳಿನಿಂದ ಮಾಡಲಾಗುವ ಸಾರು ಅತ್ಯುತ್ತಮ ರುಚಿ ಹೊಂದಿರುತ್ತೆ. ಇದು ಅನ್ನ, ದೋಸೆ, ಇಡ್ಲಿ, ಪೂರಿ ಹೀಗೆ ಎಲ್ಲಾ ಖಾದ್ಯದ ಜೊತೆಗೂ ಸವಿಯಬಹುದು. ಈ ಕಡಲೆ ಕಾಳಿನ ಸಾರು ಮಾಡುವುದು ಹೇಗೆ?
ಕಡಲೆ ಕಾಳಿನ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಕಡಲೆ ಸಾರು ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಕಾಳಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಕಾಳು
- ಬದನೆಕಾಯಿ - 2
- ಆಲೂಗಡ್ಡೆ - 2
- ಟೊಮೆಟೊ- 1
- ಸಾಂಬಾರ್ ಪುಡಿ
- ತೆಂಗಿನಕಾಯಿ ತುರಿ
- ಈರುಳ್ಳಿ- 2
- ಬೆಳ್ಳುಳ್ಳಿ
- ಮೆಣಸಿನಕಾಯಿ
- ಸಾಸಿವೆ
- ಎಣ್ಣೆ
- ಕರಿಬೇವಿನ ಎಲೆ
- ಕೊತ್ತಂಬರಿ ಸೊಪ್ಪು
- ಹುಣಸೆಹಣ್ಣು
- ಉಪ್ಪು
ಕಡಲೆ ಕಾಳಿನ ಸಾರು ಮಾಡುವುದು ಹೇಗೆ?
ಮೊದಲು ಕಡಲೆ ಕಾಳನ್ನು ಹಿಂದಿನ ದಿನ ರಾತ್ರಿ ಚೆನ್ನಾಗಿ ತೊಳೆದು ನೀರು ಹಾಕಿ ನೆನೆಸಿಡಬೇಕು. ಕೆಡಲೆಗಳು ನೆನೆದು ದಪ್ಪವಾಗಬೇಕು. ಮಾರನೆ ದಿನ ಬೆಳಗ್ಗೆ ನೀರನ್ನು ತೆಗೆದು ಕಡಲೆಯನ್ನು ತೆಗೆದಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೋ, ತೆಂಗಿನಕಾಯಿ ತುರಿ, ಖಾರದ ಪುಡಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಹೋಟೆಲ್‌ಗೆ ಹೋದಾಗ ಲೋಟದಲ್ಲಿ ನೀಡುವ ರಸಂ ಮಾಡಿದ್ದೀರಾ? ಆ ರುಚಿ ಹೇಗೆ ಬರುತ್ತೆ ಗೊತ್ತಾ?
ಚಟ್ನಿಯ ಆಕಾರವಾಗಿ ಇದನ್ನು ರುಬ್ಬಿಕೊಂಡು ಬೌಲ್‌ಗೆ ಹಾಕಿಕೊಂಡು ಬದಿಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿ, ನಂತರದಲ್ಲಿ ಸಾಸಿವೆ, ಮೆಣಸಿನ ಕಾಯಿ, ಕರಿಬೇವು ಹಾಕಿ ಬಿಸಿ ಮಾಡಿ. ಇದಾದ ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಈ ಕುಕ್ಕರ್‌ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಇದಕ್ಕೆ ನೆನೆಸಿ ಇಟ್ಟದ್ದ ಕಡಲೆ ಕಾಳನ್ನು ಹಾಕಿಕೊಳ್ಳಿ.
ಕಡಲೆಗಳ ಹಾಕಿದ ಬಳಿಕ ಇದಕ್ಕೆ ಹೆಚ್ಚಿಕೊಂಡಿರುವ ಆಲೂಗಡ್ಡೆ, ಬದನೆಕಾಯಿ ಹಾಕಿಕೊಂಡು ಮಿಕ್ಸ್ ಮಾಡಿ ನೀರು ಸಹ ಹಾಕಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿಬಿಡಿ. ಕುಕ್ಕರ್‌ನಿಂದ 2 ಸೀಟಿ ಹೊಡೆಸಿಕೊಳ್ಳಿ. 2 ಸೀಟಿ ಹೊಡೆದರೆ ತರಕಾರಿ, ಕಡಲೆ ಚೆನ್ನಾಗಿ ಬೇಯುತ್ತದೆ.
ನಂತರ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಸಾರನ್ನು ಒಮ್ಮೆ ತಿರುಗಿಸಿಕೊಳ್ಳಿ. ಇಷ್ಟಾದರೆ ಕಡಲೆ ಕಾಳಿನ ಸಾರು ರೆಡಿಯಾಗುತ್ತದೆ. ಮುದ್ದೆ, ಅನ್ನ, ಪೂರಿ, ಎಲ್ಲದಕ್ಕೂ ಇದು ರುಚಿಕರವಾಗಿರುತ್ತೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications