Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹೋಟೆಲ್‌ಗೆ ಹೋದಾಗ ಲೋಟದಲ್ಲಿ ನೀಡುವ ರಸಂ ಮಾಡಿದ್ದೀರಾ? ಆ ರುಚಿ ಹೇಗೆ ಬರುತ್ತೆ ಗೊತ್ತಾ?
ರಸಂ ಅಥವಾ ತಿಳಿಸಾರು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ರಸಂನಿಂದ ಊಟದ ರುಚಿ ದುಪ್ಪಟ್ಟಾಗುತ್ತೆ, ಹಾಗೆ ಊಟ ಕೂಡ ಪೂರ್ಣವಾಗೋದು ಈ ರಸಂನಿಂದಲೇ. ರಸಂ ಅನ್ನು ಕೂಡ ಹಲವು ರೀತಿಯಲ್ಲಿ ಹಲವು ರುಚಿಯಲ್ಲಿ ಮಾಡಲಾಗುತ್ತದೆ. ಅದರಲ್ಲೂ ನಾವು ಹೋಟೆಲ್‌ನಲ್ಲಿ ಮಾಡುವ ಹಾಗೆ ಮದುವೆ ಮನೆಯಲ್ಲಿ ಮಾಡುವಂತಹ ರಸಂ ಎಲ್ಲರಿಗೂ ಇಷ್ಟವಾಗುತ್ತೆ. ಅನ್ನದ ಜೊತೆ ಸವಿಯೋದು ಇರಲಿ ಈ ರಸಂ ಅನ್ನು ಗ್ಲಾಸ್‌ಗೆ ಹಾಕಿಕೊಂಡು ಕುಡಿಯುತ್ತಾರೆ.
ಅದರಲ್ಲೂ ಹೋಟೆಲ್‌ನಲ್ಲಿ ಲೋಟದಲ್ಲಿ ನೀಡುವ ರಸಂ ಅತ್ಯಂತ ರುಚಿಯಾಗಿರುತ್ತೆ. ಅದರ ಸಿವಾಸನೆ ಕೂಡ ಮತ್ತಷ್ಟು ರಸಂ ಕುಡಿಯಬೇಕು ಎನಿಸುತ್ತದೆ. ಹಾಗಾದ್ರೆ ಅವರು ಹೇಗೆ ಈ ರಸಂ ಮಾಡುತ್ತಾರೆ? ನಾವು ಹೋಟೆಲ್‌ಗೆ ಹೋದಾಗ ಅಲ್ಲಿ ನೀಡು ರಸಂ ಎಷ್ಟು ಸುವಾಸನೆಯಿಂದ ಕೂಡಿರುತ್ತೆ, ಹಾಗೆ ರುಚಿಯು ಅಷ್ಟೆ ಚೆನ್ನಾಗಿರುತ್ತೆ.

ಹಾಗಾದ್ರೆ ಈ ರಸಂ ಮಾಡುವುದು ಹೇಗೆ? ಅವರು ರಸಂಗೆ ಏನೆಲ್ಲಾ ಹಾಕುತ್ತಾರೆ? ಈ ಹೋಟೆಲ್ ರುಚಿಯ ರಸಂ ಮಾಡುವ ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು? ಇದರ ಪುಡಿ ಹೇಗೆ ಮಾಡುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೋಟೆಲ್ ರುಚಿಯ ರಸಂ ಮಾಡಲು ಬೇಕಾಗುವ ಪದಾರ್ಥಗಳು:
- ತೊಗರಿಬೇಳೆ- ಕಾಲು ಕಪ್
- ಟೊಮೆಟೋ- 2
- ರಸಂ ಪುಡಿ
- ಸಾಸಿವೆ
- ಇಂಗು
- ಬೆಳ್ಳುಳ್ಳಿ
- ಹಸಿಮೆಣಸಿನಕಾಯಿ
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹುಣಸೆ ಹಣ್ಣು
- ಬೆಲ್ಲ
- ಅರಿಶಿನದ ಪುಡಿ
- ತೆಂಗಿನಕಾಯಿ ತುರಿ
- ಉಪ್ಪು
- ಎಣ್ಣೆ
ಹೋಟೆಲ್ ರುಚಿಯ ರಸಂ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕಾಲು ಕಪ್ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಹಾಕಿಕೊಂಡು ಅದಕ್ಕೆ ಒಂದು ಕಪ್ ನೀರು ಹಾಕಿ, ಅರಶಿನ, ಎಣ್ಣೆ ಹಾಕಿಕೊಂಡು ಮೂರು ಸೀಟಿ ಹೊಡೆಸಿಕೊಳ್ಳಬೇಕು. ಮೂರು ಸೀಟಿ ಹೊಡೆದ ಬಳಿಕ ತಣ್ಣಗಾಗಲು ಬಿಟ್ಟು ನಂತರ ಸ್ಮ್ಯಾಷ್ ಮಾಡಿಕೊಳ್ಳಿ. ಅಂದರೆ ಸ್ವಲ್ಪ ಪುಡಿ ಪುಡಿಯಾಗಿ ಅದನ್ನು ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಇದನ್ನು ಬದಿಗಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಇಂಗು, ಜಜ್ಜಿರುವ ಬೆಳ್ಳುಳ್ಳಿ, ಹಸಿ ಮೆಣಸು, ಒಣ ಮೆಣಸು, ಕರಿಬೇವು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿಕೊಂಡ ಮತ್ತೊಂದು ನಿಮಿಷ ಫ್ರೈ ಮಾಡಿ.
ಅನಂತರ ಕುಕ್ಕರ್‌ನಲ್ಲಿ ಬೇಯಿಸಿಕೊಂಡಿದ್ದ ತೊಗರಿ ಬೇಳೆಯನ್ನು ಹಾಕಿಕೊಳ್ಳಿ. ಈಗಿ ಇದಕ್ಕೆ ಹುಣಸೆ ಹುಳಿಯ ನೀರು, ಅರಶಿನ ಪುಡಿ, ಬೆಲ್ಲ, ಹಾಗೂ ರಸಂ ಪುಡಿ (ಯಾವುದೇ ರಸಂ ಪುಡಿ ಬಳಸಬಹುದು) ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಪದಾರ್ಥ ಬೆರೆತ ಬಳಿಕ ಇದಕ್ಕೆ ಅರ್ಧ ಲೀಟರ್ ನೀರು ಹಾಕಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಚೆನ್ನಾಗಿ ಕುಡಿಯಲು ಬಿಡಿ. ರಸಂ ಕುದಿಯಲು ಆರಂಭಿಸಿದಾಗ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಸುಮಾರು 10 ನಿಮಿಷ ಕುದಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೋಟೆಲ್ ರುಚಿಯ ರಸಂ ರೆಡಿಯಾಗುತ್ತದೆ. ಇದನ್ನು ಅನ್ನದ ಜೊತೆ ಸವಿಯಲು ಬಲು ರುಚಿಯಾಗಿರುತ್ತದೆ. ಹಾಗೆ ಲೋಟಕ್ಕೆ ಹಾಕಿ ಕುಡಿಯಬಹುದು. ನೀವು ಸಹ ಮನೆಯಲ್ಲಿ ಒಮ್ಮೆ ಈ ರೀತಿಯ ರಸಂ ಟ್ರೈ ಮಾಡಿ ನೋಡಿ.



Click it and Unblock the Notifications
