Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೇಹಕ್ಕೆ ತಂಪು ತರುವ ಜೀರಾ ಸೋಡಾ ಮನೆಯಲ್ಲಿ ಮಾಡಿ ನೋಡಿ: ನಿತ್ಯ ಕುಡಿದರೆ ಆಯಾಸ ಮಾಯ!
ಮಧ್ಯಾಹ್ನದ ಬಿಸಿಲಿನಲ್ಲಿ ನೀವು ಮನೆಯೊಂದ ಹೊರಹೋದರೆ ಅಥವಾ ಬಿಸಿಲಿನಲ್ಲಿ ಕೆಲಸ ಮಾಡಿದರೆ ದೇಹವು ಬಹುಬೇಗ ದಣಿಯಲಿದೆ. ಹಾಗೆ ಮನೆಯೊಳಗೂ ನೀವು ಸೇವಿಸುವ ಆಹಾರ ನಿಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಇನ್ನು ಮನೆಯಲ್ಲಿ ದೇಹವನ್ನು ಸಮತೋಲನದಲ್ಲಿಡಲು ನೀವು ಬಹಳಷ್ಟು ನೀರು ಕುಡಿಯುವುದು ಉತ್ತಮ. ಹಾಗೆ ರುಚಿ ರುಚಿಯಾದ ಪಾನಿಯಗಳ ಮಾಡಿ ಕುಡಿಯುವುದು ಸಹ ನಿಮ್ಮ ದೇಹವನ್ನು ಸಮತೋಲನದಲ್ಲಿಡಲಿದೆ.
ಇನ್ನು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ಪಾನಿಯಗಳು ಸಹ ನೀವು ಸೇವಿಸಿರಬಹುದು. ಆದ್ರೆ ನಾವಿಂದು ಮನೆಯಲ್ಲಿ ಮಾಡಿ ಸವಿಯುವಂತಹ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಜೀರಾ ಸೋಡಾ ಮಾಡುವ ಕುರಿತು ತಿಳಿದುಕೊಳ್ಳೋಣ. ಜೀರಾ ಸೋಡಾ ನೀವು ಅಂಗಡಿಯಲ್ಲಿ ಸವಿದಿರುತ್ತೀರಿ. ಇದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮ ಪಾನಿಯ ಹಾಗೆ ನಿಮ್ಮ ದೇಹಕ್ಕೂ ಬಹಳ ಉತ್ತಮವಾಗಿರಲಿದೆ.

ದೇಹದಲ್ಲಿನ ಕಲ್ಮಶಗಳ ಹೊರಹಾಕಲು ಸಹ ಈ ಜೀರಾ ಸೋಡಾ ಬಹಳ ಉತ್ತಮ. ದೇಹವು ಬಹಳಷ್ಟು ಉಷ್ಣದಿಂದ ಕೂಡಿದ್ದರೆ ಅಥವಾ ಸಮತೋಲನ ಕಾಪಾಡಿಕೊಳ್ಳಲು ಕಷ್ಟಪಡುತ್ತಿದ್ದರೆ ಈ ಜೀರಾ ಸೋಡಾ ಮನೆಯಲ್ಲಿ ಮಾಡಿ ಸವಿದು ನೋಡಿ. ನಿಮ್ಮ ದೇಹಕ್ಕೆ ಬಹಳ ಉತ್ತಮವಾಗಿರಲಿದೆ.
ಹಾಗಾದ್ರೆ ಈ ಜೀರಾ ಸೋಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಜೀರಾ ಸೋಡಾ ಮಾಡಲು ಬೇಕಾಗುವ ವಸ್ತುಗಳು
- ಜೀರಿಗೆ
- ಸೋಂಪು ಕಾಳು
- ಹುಣಸೆ ಹುಳಿ
- ಸಕ್ಕರೆ
- ಬೆಲ್ಲ
- ಒಣ ಶುಂಠಿ ಪುಡಿ
- ಉಪ್ಪು
- ಏಲಕ್ಕಿ
- ಚಾಟ್ ಪುಡಿ
ಜೀರಾ ಸೋಡಾ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರು ಹಾಕಿಕೊಂಡು ಅದಕ್ಕೆ ಪುದಿನ ಎಲೆಗಳನ್ನು ಹಾಕಿಕೊಳ್ಳಿ. ಹಾಗೆ ಮುಕ್ಕಾಲು ಕಪ್ ಸಕ್ಕರೆ ಸೇರಿಸಿಕೊಳ್ಳಿ. ಈಗ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಬರಲು ಬಿಡಿ. ಇದು ನಿಧಾನವಾಗಿ ಕರಗಬೇಕು. 5 ನಿಮಿಷ ಕುದಿಸಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅರ್ಧ ಕಪ್ ಜೀರಿಗೆ ಹಾಕಿಕೊಳ್ಳಿ. ನಂತರ 2 ನಿಮಿಷ ಹುರಿದುಕೊಳ್ಳಬೇಕು. ನಂತರ ಇದಕ್ಕೆ 2 ಸ್ಪೂನ್ ಸೋಂಪು ಕಾಳು ಸಹ ಹಾಕಿ 1 ನಿಮಿಷ ಹುರಿದುಕೊಳ್ಳಿ. ಈಗ ಒಲೆಯಿಂದ ಇಳಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ಜೀರಿಗೆ ಸೋಂಪನ್ನು ಮಿಕ್ಸಿ ಜಾರ್ಗೆ ಹಾಕಿ ಅದಕ್ಕೆ ಚಾಟ್ ಮಸಾಲ ಪುಡಿ, ಒಣ ಶುಂಠಿ ಪುಡಿ, ಉಪ್ಪು, ಅರ್ಧ ಸ್ಪೂನ್ ಸಕ್ಕರೆ, ಏಲಕ್ಕಿ, ಹಾಕಿಕೊಳ್ಳಿ.
ಈಗ ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಮತ್ತೆ ಪಾತ್ರೆ ಇಟ್ಟು ಅದಕ್ಕೆ ಅರ್ಧ ಕಪ್ ಸಕ್ಕರೆ ಹಾಕಿ ನೀರು ಸಹ ಹಾಕಿಕೊಂಡು ಕರಗಲು ಬಿಡಬೇಕು. ಹಾಗೆ ಒಂದು ಉಂಡೆ ಬೆಲ್ಲ ಸಹ ಇದಕ್ಕೆ ಹಾಕಿ ಕರಗಲು ಬಿಡಿ. ಎಲ್ಲಾ ವಸ್ತು ಕರಗಿದ ಬಳಿಕ ಜರಡಿ ಹಿಡಿದು ನೀರನ್ನು ತೆಗೆದುಕೊಳ್ಳಿ.
ಈಗ ಈ ಬೆಲ್ಲ ಸಕ್ಕರೆ ನೀರನ್ನು ಮತ್ತೆ ಬಾಣಲೆಗೆ ಹಾಕಿ, ಬಳಿಕ ರುಬ್ಬಿಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಬರಲು ಬಿಡಿ. ಈಗ ಸಣ್ಣ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿ ಅದರ ನೀರು ಹಾಕಿ. ಇದು ಸಣ್ಣದಾಗಿ ಪಾಕವಾಗಬೇಕು. ಒಂದು ಎಳೆ ಪಾಕದಂತೆ ಬರಬೇಕು.
ನಂತರ ಇದನ್ನು ತಣ್ಣಗಾಗಲು ಬಿಡಿ. ಈಗ ಪುದಿನ ಎಲೆ ಹಾಕಿರುವ ನೀರನ್ನು ಸಹ ಜರಡಿ ಹಿಡಿದು ತೆಗೆದುಕೊಳ್ಳಿ. ಈ ನೀರನ್ನು ಸಕ್ಕರೆ ಬೆಲ್ಲದ ಪಾಕಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಜೀರಿಗೆ ಸೋಡಾ ಸಿದ್ದವಾಗುತ್ತೆ.



Click it and Unblock the Notifications
