Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬ್ರೇಕ್ಫಾಸ್ಟ್ಗೆ ಸಖತ್ ಟೇಸ್ಟ್ ತರುವ ಗಾರ್ಲಿಕ್ ರೈಸ್; ಆರೋಗ್ಯಕ್ಕೂ ಬೆಸ್ಟ್!
ಬೆಳಗ್ಗೆ ತಿಂಡಿಗೆ ನೀವು ರೈಸ್ನಿಂದ ಮಾಡುವಂತಹ ಖಾದ್ಯಗಳ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಹೀಗಾಗಿ ನಿಮಗೆ ಚಿತ್ರಾನ್ನ, ಪಲಾವ್, ರೈಸ್ ಬಾತ್, ಟಮೆಟೋ ಬಾತ್ ಸೇರಿದಂತೆ ಹಲವು ರೀತಿಯ ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಕೆಲವೊಂದು ರೈಸ್ ರೆಸಿಪಿಗಳು ಬಾಯಲ್ಲಿ ನೀರು ಬರುವುದು ಸಹಜ. ಇನ್ನು ರೈಸ್ನಿಂದ ಮಾಡುವಂತಹ ಫ್ರೈಡ್ ರೈಸ್, ಎಗ್ ರೈಸ್, ಮಸಾಲ ರೈಸ್ಗಳು ಎಲ್ಲರಿಗೂ ಇಷ್ಟವಾಗುತ್ತೆ.
ಹಾಗೆ ಬೆಳಗ್ಗೆ ತಿಂಡಿಯ ಸಮಯಕ್ಕೆ ಸುಲಭವಾಗಿ ಮಾಡುವಂತಹ ರುಚಿ ರುಚಿಯ ಖಾದ್ಯಗಳ ಸವಿಯೋದು ನಿಮಗೂ ಇಷ್ಟವಾಗಬಹುದು. ನಾವಿಂದು ಸುಲಭವಾಗಿ ಮಾಡುವ ಗಾರ್ಲಿಕ್ ರೈಸ್ ಕುರಿತಾಗಿ ತಿಳಿದುಕೊಳ್ಳೋಣ. ಈ ರೈಸ್ ಮಾಡೋದು ಸುಲಭ ಹಾಗೆ ರುಚಿಯಲ್ಲೂ ಅದ್ಭುತವಾಗಿರಲಿದೆ. ಹಾಗಾದ್ರೆ ಮನೆಯಲ್ಲಿ ನಾವಿಂದು ಗಾರ್ಲಿಕ್ ರೈಸ್ ಮಾಡುವ ಕುರಿತು ತಿಳಿಯೋಣ.

ಗಾರ್ಲಿಕ್ ರೈಸ್ ಬಹಳ ಸುಲಭವಾಗಿ ಮಾಡಬಹುದು, ಹಾಗೆ ಇದಕ್ಕೆ ಬೆಳ್ಳುಳ್ಳಿ ಹೆಚ್ಚಾಗಿ ಬಳಸುವ ಕಾರಣದಿಂದಾಗಿ, ಹಲವು ಆರೋಗ್ಯಯುತ ಅಂಶಗಳನ್ನು ಇದರಲ್ಲಿ ಸೇರಿಸುವ ಕಾರಣ ನಿಮಗೆ ಇದು ಉತ್ತಮವಾಗಿರಲಿದೆ. ಹಾಗೆ ಇದನ್ನು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸವಿಯಲು ಇಷ್ಟೊಡುತ್ತಾರೆ. ಇದನ್ನು ಮಾಡುವ ಕುರಿತು ಇಂದು ತಿಳಿಯೋಣ.
ತಿಂಡಿಗೆ ಈ ಗಾರ್ಲಿಕ್ ರೈಸ್ ಮಾಡಲು ಬೇಕಾಗುವ ವಸ್ತುಗಳೇನು? ಮಾಡುವ ವಿಧಾನವೇನು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ಗಾರ್ಲಿಕ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಬೆಳ್ಳುಳ್ಳಿ
- ಈರುಳ್ಳಿ
- ತುಪ್ಪ
- ಸಾಸಿವೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಕಾಳು ಮೆಣಸಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಅಕ್ಕಿ
- ಎಣ್ಣೆ
ಗಾರ್ಲಿಕ್ ರೈಸ್ ಮಾಡುವ ವಿಧಾನವೇನು?
ಗಾರ್ಲಿಕ್ ರೈಸ್ ಮಾಡಲು ಮೊದಲೇ ರೈಸ್ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ 1 ನಿಮಿಷಗಳ ಕಾಳ ಫ್ರೈ ಮಾಡಿಕೊಳ್ಳಿ. ಈಗ ಒಣ ಮೆಣಸು, ಕರಿಬೇವು, ಹಾಕಿ ಬಿಸಿ ಮಾಡಿಕೊಳ್ಳಿ.
ಈಗ ಒಂದು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಇದಕ್ಕೆ ಹಾಕಿ ಬಳಿಕ 1 ನಿಮಿಷ ಫ್ರೈ ಮಾಡಿ. ಇದಕ್ಕೆ ಉಪ್ಪು ಹಾಕಿ ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಈಗ ಇನ್ನೊಂದು ಸಣ್ಣ ಬಾಣಲೆ ಇಟ್ಟು ಅದಕ್ಕೆ 1 ಸ್ಪೂನ್ ತುಪ್ಪ ಹಾಕಿಕೊಂಡು ಅದಕ್ಕೆ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಂಡಿರುವ ಬೆಳ್ಳುಳ್ಳಿಗಳನ್ನು ಹಾಕಿಕೊಂಡು ಹುರಿದುಕೊಳ್ಳಬೇಕು.
4ರಿಂದ 5 ನಿಮಿಷ ಈ ಬೆಳ್ಳುಳ್ಳಿ ಹುರಿದುಕೊಂಡು ಒಲೆ ಆಫ್ ಮಾಡಿ ಇಟ್ಟುಕೊಳ್ಳಿ. ಈಗ ಮೊದಲು ಬಾಣಲೆಯಲ್ಲಿ ಮಾಡಿದ್ದ ಒಗ್ಗರಣೆಗೆ ಅನ್ನವನ್ನು ಹಾಕಿಕೊಳ್ಳಿ. ಹುಡಿ ಹುಡಿಯಾದ ಅನ್ನವನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಂಡು ಈಗ ತುಪ್ಪದಲ್ಲಿ ಹುರಿದು ಕೊಂಡಿದ್ದ ಬೆಳ್ಳುಳ್ಳಿ ಹಾಕಿ. ಹಾಗೆ ಚೂರು ಕರಿಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸಹ ಮೇಲೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಎಲ್ಲಾ ಮಸಾಲೆಗಳು ಹಿಡಿಯುವಂತೆ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಗಾರ್ಲಿಕ್ ರೈಸ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಬಿಸಿ ಬಿಸಿಯಾಗಿ ಮಾಡಿ ಸವಿಯುವ ಈ ಗಾರ್ಲಿಕ್ ರೈಸ್ ಒಮ್ಮೆ ಸವಿದರೆ ಎಲ್ಲರಿಗೂ ಇಷ್ಟವಾಗೋದು ಖಚಿತ.



Click it and Unblock the Notifications
