Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಪಾತಿ, ಪೂರಿ, ದೋಸೆಗೆ ಕಡಲೆ ಮಸಾಲೆ ಗ್ರೇವಿ ಮಾಡಿ ನೊಡಿ..!
ನೀವು ಬೆಳಗ್ಗೆ ಮನೆಯಲ್ಲಿ ತಿಂಡಿಗೆ ಚಪಾತಿ, ಪೂರಿ, ದೋಸೆ, ರೊಟ್ಟಿ ಮಾಡಿದರೆ ಅದನ್ನು ಸವಿಯಲು ಕೂಡ ಉತ್ತಮ ಖಾದ್ಯ ಬೇಕಾಗುತ್ತದೆ. ನೀವು ಇದಕ್ಕಾಗಿ ಪಲ್ಯ ಅಥವಾ ಚಟ್ನಿಯನ್ನು ಮಾಡಿರುವುದು ಕಾಮನ್. ಆದರೆ ನಾವಿಂದು ಈ ಎಲ್ಲಾ ತಿಂಡಿಗಳಿಗೂ ರುಚಿ ತರುವಂತಹ ಅದ್ಭುತ ರುಚಿಯಲ್ಲಿ ಮಸಾಲ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ನೀವು ದೋಸೆ ಚಪಾತಿ, ಪೂರಿ ಮಾಡದಾಗಂತು ಈ ರೀತಿ ಮಸಾಲ ಗ್ರೇವಿ ಮಾಡಿದರೆ ಆ ದಿನದ ಅಡುಗೆ ಅದ್ಭುತವಾಗಿರುತ್ತೆ. ಹಾಗೆ ಮಸಾಲ ಗ್ರೇವಿಯನ್ನು ನೀವು ಊಟದ ಜೊತೆಗೂ ಕೂಡ ಬಳಸಬಹುದು. ಆಗಲು ಇದರ ರುಚಿ ಅದ್ಭುತ. ಹಾಗಾದ್ರೆ ನಾವಿಂದು ತಿಂಡಿಯ ಜೊತೆಗೆ ಸವಿಯಲು ರುಚಿ ರುಚಿಯ ಮಸಾಲೆ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಈ ಮಸಾಲೆ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆಕಾಳು -1 ಕಪ್
- ಈರುಳ್ಳಿ - 1
- ಟೊಮೊಟೋ
- ಕೊತ್ತಂಬರಿ ಸೊಪ್ಪು
- ಕಸೂರಿ ಮೇಥಿ
- ಸೋಂಪು ಕಾಳು
- ಶುಂಠಿ
- ಬೆಳ್ಳುಳ್ಳಿ
- ಗೋಡಂಬಿ
- ಅಚ್ಚಕಾರದ ಪುಡಿ
- ದನಿಯಾ ಪುಡಿ
- ಗರಂ ಮಸಾಲ
- ಅರಿಶಿನ ಪುಡಿ
- ಉಪ್ಪು
- ಎಣ್ಣೆ
ಮಸಾಲೆ ಗ್ರೇವಿ ಮಾಡುವ ವಿಧಾನವೇನು?
ಮೊದಲು ಹಿಂದಿನ ದಿನವೇ ಕಡಲೆ ಕಾಳು ತೊಳೆದು ಒಂದು ಬೌಲ್ಗೆ ಹಾಕಿ ನೆನೆಸಿಡಬೇಕು. ಸುಮಾರು 8ರಿಂದ 9 ಗಂಟೆ ನೆನೆಯಬೇಕು. ಮಾರನೆ ದಿನ ಬೆಳಗ್ಗೆ ಈ ಕಡಲೆ ಕಾಳನ್ನು ತೊಳೆದುಕೊಂಡು ಒಂದು ಕುಕ್ಕರ್ಗೆ ಹಾಕಿಕೊಳ್ಳಿ. ನಂತರ ಕಡಲೆ ಮುಚ್ಚುವಷ್ಟು ನೀರು ಹಾಕಿ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
3 ಸೀಟಿ ಆದ ಬಳಿಕ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಒಂದು ಮುಷ್ಟಿ ಬೆಂದಿರುವ ಕಡಲೆ ಕಾಳು ಹಾಕಿ, ಜೊತೆಗೆ ಕತ್ತರಿಸಿಕೊಂಡ ಟೊಮೆಟೋ, ಗೋಡಂಬಿ, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಪೇಸ್ಟ್ ಅನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಇದಕ್ಕೆ ಸೋಂಪು ಕಾಳು, ಕಸೂರಿ ಮೇಥಿ, ಈರುಳ್ಳಿ ಹಾಕಿ 4 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಖಾರದ ಪುಡಿ, ಧನಿಯ ಪುಡಿ, ಗರಂ ಮಸಾಲೆ, ಅರಶಿಣ ಪುಡಿ ಹಾಕಿ ಅರ್ಧ ನಿಮಿಷ ಬೆರೆಸಿಕೊಳ್ಳಿ. ಈಗ ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಂಡಿರುವ ಪೇಸ್ಟ್ ಅನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಹಾಗೆ ಉಪ್ಪು ಹಾಕಿ 2 ನಿಮಿಷ ಮತ್ತೆ ಬೇಯಲು ಬಿಡಿ.
ಈಗ ಕುಕ್ಕರ್ನಲ್ಲಿರುವ ಕಡಲೆಯನ್ನು ನೀರಿನ ಸಮೇತವಾಗಿ ಹಾಕಿಕೊಳ್ಳಿ. ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿಕೊಂಡು ಕುದಿಯಲು ಬಿಡಿ. ಮುಚ್ಚಳ ಮುಚ್ಚಿ 8 ನಿಮಿಷ ಆದರೂ ಕುದಿ ಬರಲು ಬಿಡಿ. ಆಗಾಗ ತಳ ಹಿಡಿಯದಂತೆ ತಿರುಗಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು 2 ನಿಮಿಷ ಕುದಿಬರಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿ ತಿರುಗಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಕಡಲೆ ಮಸಾಲೆ ರೆಡಿಯಾಗುತ್ತದೆ. ದೋಸೆ, ಚಪಾತಿ, ರೊಟ್ಟಿ, ಹೀಗೆ ಯಾವುದೇ ಖಾದ್ಯದ ಜೊತೆಗೂ ಅದ್ಭುತ ರುಚಿ ನೀಡಲಿದೆ.



Click it and Unblock the Notifications
