Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಯಾವುದೇ ತಿಂಡಿ ಇದ್ರೂ ಈ ಆಲೂ ಕುರ್ಮ ಮಾಡಿ: ಬಹಳ ಸುಲಭದ ರೆಸಿಪಿ ಇಲ್ಲಿದೆ!
ಮನೆಯಲ್ಲಿ ಚಪಾತಿ, ರೊಟ್ಟಿ, ದೋಸೆ, ಪೂರಿ, ಪರೋಟ ಸೇರಿದಂತೆ ವಿಶೇಷ ರುಚಿಯ ಖಾದ್ಯಗಳ ಮಾಡಿದಾಗ ಅದರ ಜೊತೆಗೆ ಯಾವುದಾದರು ರುಚಿ ರುಚಿಯ ಖಾದ್ಯವಂತು ಇರಲೇ ಬೇಕು. ಆದ್ರೆ ಇದಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ಚಟ್ನಿ, ಸಾಂಬಾರ್ ಮಾಡಿ ಸವಿಯೋದು ಸಾಮಾನ್ಯ. ಆದ್ರೆ ಈ ಎಲ್ಲಾ ಖಾದ್ಯದ ರುಚಿ ಹೆಚ್ಚಿಸೋದು ಆಲೂ ಕುರ್ಮ. ನೀವು ಹೋಟೆಲ್, ರೆಸ್ಟೋರೆಂಟ್ನಲ್ಲಿ ರುಚಿ ರುಚಿಯಾದ ಆಲೂ ಕುರ್ಮ ಸವಿದಿರುವುದು ನೆನಪಾಗಬಹುದು.
ಹೀಗಾಗಿ ನಾವಿಂದು ಬೆಳಗ್ಗೆ ತಿಂಡಿ ಸಮಯದಲ್ಲಿ ಬ್ರೇಕ್ ಫಾಸ್ಟ್ಗೆ ಸವಿಯಲು ಈ ಆಲೂ ಕುರ್ಮವನ್ನು ಮಾಡುವ ಕುರಿತಾಗಿ ಹೇಳಲಿದ್ದೇವೆ. ನಿಮ್ಮಲ್ಲಿ ಹಲವರಿಗೆ ಆಲೂ ಕುರ್ಮದ ರುಚಿ ಬಹಳ ಇಷ್ಟವಾಗುತ್ತೆ. ಎಲ್ಲಾ ಖಾದ್ಯದೊಂದಿಗೂ ಇದರ ರುಚಿ ದುಪ್ಪಟ್ಟಾಗಲಿದೆ. ಹೀಗಾಗಿ ಮನೆಯಲ್ಲಿ ಬೆಳಗ್ಗೆ ತಿಂಡಿಯೊಂದಿಗೆ ಸವಿಯಲು ಈ ಆಲೂ ಕುರ್ಮಾ ಮಾಡಿ ಸವಿಯುವುದು ನೋಡಬಹುದು.

ಆಲೂಗಡ್ಡೆಯಿಂದ ಮಾಡುವ ಹಲವು ರೆಸಿಪಿಗಳಲ್ಲಿ ಆಲೂ ಕುರ್ಮ ಬಹಳಷ್ಟು ಖಾದ್ಯದೊಂದಿಗೆ ಸವಿಯಬಹುದು. ನಾವಿಂದು ಮನೆಯಲ್ಲೇ ಈ ಹೋಟೆಲ್ ಶೈಲಿಯ ಆಲೂ ಕುರ್ಮ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಆಲೂ ಕುರ್ಮ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಲೂ ಕುರ್ಮ ಮಾಡಲು ಅಗತ್ಯ ವಸ್ತುಗಳು
- ಆಲೂಗಡ್ಡೆ
- ಬಟಾಣಿ
- ಅರಶಿನ
- ಉಪ್ಪು
- ಎಣ್ಣೆ
- ಗೋಡಂಬಿ
- ಗಸೆಗಸೆ
- ತಂಗಿನ ಕಾಯಿತುರಿ
- ಲವಂಗ
- ಚಕ್ಕೆ
- ಬೆಳ್ಳುಳ್ಳಿ
- ಶುಂಠಿ
- ಖಾರದ ಪುಡಿ
- ಧನಿಯಾ
- ಈರುಳ್ಳಿ
- ಟೊಮೆಟೋ
- ಜೀರಿಗೆ
ಆಲೂ ಕುರ್ಮ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿ. ಅನಂತರ ಜೀರಿಗೆ, ಸಣ್ಣದಾಗಿ ಹೆಚ್ಚಿರುವ 2 ಈರುಳ್ಳಿ ಹಾಕಿ 4 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ಈಗ ಒಂದು ಟೊಮೆಟೋ ಸಣ್ಣದಾಗಿ ಹೆಚ್ಚಿ ಹಾಕಿ. 2 ನಿಮಿಷ ಬೇಯಿಸಿಕೊಂಡ ಬಳಿಕ ಇದಕ್ಕೆ ಹಸಿ ಆಲೂಗಡ್ಡೆಯನ್ನು ಸಹ ಹಾಕಿಕೊಳ್ಳಿ. ಸಾಂಬಾರ್ಗಿಂತ ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ.
ಅನಂತರ ಉಪ್ಪು, ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ ಇಲ್ಲದಿದ್ದರೆ ತಳ ಹಿಡಿಯಲಿದೆ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಗೋಡಂಬಿ, ಗಸೆಗಸೆ, ಹಸಿ ತೆಂಗಿನ ತುರಿ, ಲವಂಗ, ಚಕ್ಕೆ, ಬೆಳ್ಳುಳ್ಳಿ, ಶುಂಠಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ರುಬ್ಬಿದ ಈ ಮಸಾಲೆಗಳನ್ನು ಒಲೆ ಮೇಲಿನ ಆಲೂ ಪ್ರೈಯೊಂದಿಗೆ ಹಾಕಿಕೊಂಡು ದಪ್ಪವಾಗಿದ್ದರೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ, ಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಉಪ್ಪು ಸಹ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಗೆ ಕುದಿಬರಲು ಬಿಡಬೇಕು. 10ರಿಂದ 12 ನಿಮಿಷ ಕುದಿಯಲು ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಆಲೂ ಕುರ್ಮ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ತಿಂಡಿಗೆ ಈ ಖಾದ್ಯ ಮಾಡಿ ಸವಿದು ನೋಡಿ. ಎಲ್ಲಾ ರೀತಿ ತಿಂಡಿಗೂ ಇದು ಬಹಳ ರುಚಿ ನೀಡಲಿದೆ.



Click it and Unblock the Notifications
