For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಸಿಂಪಲ್‌ ಆಗಿ ತಯಾರಿಸಿ ಶುದ್ಧ ದೇಸಿ ಮರುಳಾದ ತುಪ್ಪ

|

ಸಾಕಷ್ಟು ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳನ್ನು ಹೊಂದಿರುವ ತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ?. ಹಲವರಂತೂ ತುಪ್ಪವಿಲ್ಲದೇ ಊಟ ಸಂಪೂರ್ಣವಾಗುವುದೇ ಇಲ್ಲ. ಆದರೆ ಬಾಯಿಯ ರುಚಿ ಹೆಚ್ಚಿಸುವ ಹಾಗೂ ನಿತ್ಯ ಸೇವಿಸುವ ಈ ತುಪ್ಪವನ್ನು ಯಾವಾಗಲೂ ಅಂಗಡಿಯಿಂದ ತಂದು ಸೇವಿಸುವುದು ಎಷ್ಟು ಸರಿ. ಅಥವಾ ಕೆಲವು ಬ್ರಾಂಡ್‌ ತುಪ್ಪ ಚೆನ್ನಾಗಿದೇ ಎಂದು ಸೇವಿಸುವುದು ಸರಿಯಾದರೂ ಇದರ ಪ್ಯೂರಿಟಿ ಬಗ್ಗೆ ನಮಗೆಷ್ಟು ಗೊತ್ತು ಅಲ್ಲವೇ?.

ತುಪ್ಪ

ಅದಕ್ಕೆ ಈ ಗೊಂದಲವೆಲ್ಲಾ ಏಕೆ ನಾವೆ ಮನೆಯಲ್ಲೇ ತಯಾರಿಸೋಣ ರುಚಿಕರ ಮರಳು, ಮರಳಾದ ತುಪ್ಪ. ಅಯ್ಯೋ ತುಪ್ಪಾ ತಯಾರಿಸುವುದೇ ಎಷ್ಟು ದೊಡ್ಡ ಪ್ರಕ್ರಿಯೇ, ತುಂಬಾ ಕಷ್ಟ, ಚೆನ್ನಾಗಿ ಬರದಿದ್ದರೆ, ರುಚಿ ಆಗದಿದ್ದರೆ ಎಂಬ ಗೊಂದಲ ನಿಮ್ಮನ್ನು ಕಾಡುವುದು ಸಹಜ.
ನಾವಿಂದು ಹೇಳಲಿರುವ ಈ ಸುಲಭ ಹಂತಗಳ ಸಹಕಾಯದಿಂದ ನೀವೇ ಸುಲಭವಾಗಿ ತುಪ್ಪತಯಾರಿಸಬಹುದು ಹೇಗೆ ಮುಂದೆ ನೋಡೋಣ:

* ನಿತ್ಯ ಹಾಲು ಕುದಿಸಿದ ನಂತರ ಹೆಚ್ಚು ಕೆನೆ ಇರುವಾಗ ಅದನ್ನು ತೆಗೆದು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಈ ರೀತಿ ದಿನಕ್ಕೆ 1 ಲೀಟರ್‌ ಹಾಲಿನಂತೆ ಕನಿಷ್ಠ ಒಂದು ತಿಂಗಳು ಸಂಗ್ರಹಿಸಿದರೆ ಒಂದು ಬಟ್ಟಲು ಕೆನೆ ಸಂಗ್ರಹವಾಗುತ್ತದೆ.
* ಸಂಗ್ರಹವಾದ ಕೆನೆಯನ್ನು ತಪ್ಪದೇ ಫ್ರಿಡ್ಜ್‌ನಲ್ಲಿಡಿ
* ಹೀಗೆ ಸಂಗ್ರಹವಾದ ಹಾಲಿನ ಕೆನೆಗೆ ತಣ್ಣಗಿನ ನೀರಿನ್ನು ಹಾಕಿ ಮಿಕ್ಸಿ ಜಾರ್‌ ನಲ್ಲಿ ಕನಿಷ್ಠ 3 ನಿಮಿಷ ಮಿಕ್ಸಿ ಮಾಡಿ.
* ಹೀಗೆ ಮಾಡಿದ ನಂತರ ಕೆನೆಯಿಂದ ಬೆಣ್ಣೆ ರೂಪುಗೊಂಡು ನೀರಿನಲ್ಲಿ ತೇಲುತ್ತದೆ.

Ghee

* ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಬೆಣ್ಣೆಯನ್ನು ಶೋಧಿಸಿ, ನೀರನ್ನು ಸಂಪೂರ್ಣವಾಗಿ ಹಿಂಡಿ.
* ನಂತರ ಗಟ್ಟಿ ಬೆಣ್ಣೆಯನ್ನು ತೆಗೆದುಕೊಡು ಕಾದ ಬಾಣಲೆಗೆ ಹಾಕಿ ಸ್ವಲ್ಪ ಕುದಿ ಶುರುವಾದ ನಂತರ ಒಂದು ಏಲಕ್ಕಿಯನ್ನು ಹಾಕಿ.

Ghee

* ಕನಿಷ್ಠ ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ, ನಡುವೆ ಚಮಚದಿಂದ ತಿರುವುತ್ತಿರಿ.
* 10 ನಿಮಿಷದ ನಂತರ ಘಮ ಘಮ ಎನ್ನುವ ಮರಳಾದ ಶುದ್ಧ ತುಪ್ಪ ಸವಿಯಲು ಸಿದ್ಧ.

Ghee
Home Made Ghee/ದೇಸಿ ತುಪ್ಪ
Home Made Ghee/ದೇಸಿ ತುಪ್ಪ
Prep Time
10 Mins
Cook Time
10M
Total Time
20 Mins

Recipe By: Meghashree Devaraju

Recipe Type: Sides

Serves: 10

Ingredients
  • ಬೇಕಾಗುವ ಸಾಮಾಗ್ರಿಗಳು

    ಹಾಲಿನ ಕೆನೆ: ಒಂದು ಕಪ್‌

    ಏಲಕ್ಕಿ: 1

    ನೀರು : 2 ಲೋಟ

Red Rice Kanda Poha
How to Prepare
  • ಮಾಡುವ ವಿಧಾನ

    * ನಿತ್ಯ ಹಾಲು ಕುದಿಸಿದ ನಂತರ ಹೆಚ್ಚು ಕೆನೆ ಇರುವಾಗ ಅದನ್ನು ತೆಗೆದು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಈ ರೀತಿ ದಿನಕ್ಕೆ 1 ಲೀಟರ್‌ ಹಾಲಿನಂತೆ ಕನಿಷ್ಠ ಒಂದು ತಿಂಗಳು ಸಂಗ್ರಹಿಸಿದರೆ ಒಂದು ಬಟ್ಟಲು ಕೆನೆ ಸಂಗ್ರಹವಾಗುತ್ತದೆ.

    * ಸಂಗ್ರಹವಾದ ಕೆನೆಯನ್ನು ತಪ್ಪದೇ ಫ್ರಿಡ್ಜ್‌ನಲ್ಲಿಡಿ

    * ಹೀಗೆ ಸಂಗ್ರಹವಾದ ಹಾಲಿನ ಕೆನೆಗೆ ತಣ್ಣಗಿನ ನೀರಿನ್ನು ಹಾಕಿ ಮಿಕ್ಸಿ ಜಾರ್‌ ನಲ್ಲಿ ಕನಿಷ್ಠ 3 ನಿಮಿಷ ಮಿಕ್ಸಿ ಮಾಡಿ.

    * ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಬೆಣ್ಣೆಯನ್ನು ಶೋಧಿಸಿ, ನೀರನ್ನು ಸಂಪೂರ್ಣವಾಗಿ ಹಿಂಡಿ.

    * ನಂತರ ಗಟ್ಟಿ ಬೆಣ್ಣೆಯನ್ನು ತೆಗೆದುಕೊಡು ಕಾದ ಬಾಣಲೆಗೆ ಹಾಕಿ ಸ್ವಲ್ಪ ಕುದಿ ಶುರುವಾದ ನಂತರ ಒಂದು ಏಲಕ್ಕಿಯನ್ನು ಹಾಕಿ.

    * ಕನಿಷ್ಠ ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ, ನಡುವೆ ಚಮಚದಿಂದ ತಿರುವುತ್ತಿರಿ.

    * 10 ನಿಮಿಷದ ನಂತರ ಘಮ ಘಮ ಎನ್ನುವ ಮರಳಾದ ಶುದ್ಧ ತುಪ್ಪ ಸವಿಯಲು ಸಿದ್ಧ.

Instructions
  • ನೆನಪಿಡಿ: ಕೆನೆಯನ್ನು ತಪ್ಪದೇ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ * ಕಡಿಮೆ ಉರಿಯಲ್ಲೇ ಬೆಣ್ಣೆ ಕಾಯಿಸಿ * ಏಲಕ್ಕಿ ಬಳಸುವುದು ರುಚಿಗಾಗಿ ನಿಮಗೆ ಅಗತ್ಯವಿದ್ದರೆ ವೀಳ್ಯದೆಲೆಯ ತೊಟ್ಟನ್ನು ಸಹ ಬಳಸಬಹುದು.
Nutritional Information
  • ಕ್ಯಾಲೋರಿ - 123 ಗ್ರಾಂ
  • ಕೊಬ್ಬು - 14 ಗ್ರಾಂ
[ 4 of 5 - 38 Users]
X
Desktop Bottom Promotion