For Quick Alerts
ALLOW NOTIFICATIONS  
For Daily Alerts

ಯಮ್ಮಿ ಯಮ್ಮಿ ದಾಸವಾಳ ಸೊಪ್ಪಿನ ಕಡುಬು

Posted By:
|

ನಮ್ಮ ನಡುವೆ ಪ್ರಕೃತಿಯಲ್ಲಿ ಅನೇಕ ರೀತಿಯ ಆಯುರ್ವೇದ ಸಸ್ಯಗಳಿವೆ. ಆದರೆ ಅದರ ಉಪಯೋಗವನ್ನು ನಾವು ತಿಳಿದಿಲ್ಲ ಅಥವಾ ಮರೆತು ಬಿಟ್ಟಿದ್ದೇವೆ. ಕೆಲವು ಸಸ್ಯಗಳಲ್ಲಿ ಅದರ ಹೂವು,ಎಲೆಗಳು ಸೇರಿದಂತೆ ಎಲ್ಲವೂ ಕೂಡ ಬಹುಪಯೋಗಿ.

ಈಗಾಗಲೇ ನಿಮಗೆ ತಿಳಿದಿರುವಂತೆ ದಾಸವಾಳವು ಬಹುಪಯೋಗಿ ಆಯುರ್ವೇದೀಯ ಸಸ್ಯ. ಅದರ ಉಪಯೋಗಗಳು ಹತ್ತುಹಲವು.

Hibiscus Leaf Kadubu

ದಾಸವಾಳವನ್ನು ಸೌಂದರ್ಯವರ್ಧಕವಾಗಿ ಉಪಯೋಗಿಸುವುದರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ದಾಸವಾಳದ ಎಲೆಗಳಿಂದ ಖಾಧ್ಯವನ್ನು ಕೂಡ ತಯಾರಿಸಬಹುದು.
Hibiscus Leaf Kadubu
ದಾಸವಾಳದ ಎಲೆಗಳ ಕಡುಬು ಬಹಳ ರುಚಿಕರವಾಗಿರುತ್ತದೆ. ಹಾಗಂತ ಕೇವಲ ರುಚಿಗೆ ಮಾತ್ರವಲ್ಲ ಬದಲಾಗಿ ಆರೋಗ್ಯಕ್ಕೂ ಹಿತವೆನಿಸುವ ಆಹಾರ ಇದು.
Hibiscus Leaf Kadubu
ಒಂದ್ ಪಾಟ್ ನಲ್ಲಿ ದಾಸವಾಳ ಗಿಡ ಬೆಳೆಸಿಕೊಂಡರೂ ಸಾಕು. ಆಗಾಗ ಕಡುಬಿಗೆ ಅದರ ಎಲೆಗಳನ್ನು‌ ಬಳಸಿಕೊಳ್ಳಬಹುದು.
Hibiscus Leaf Kadubu
ಬಹಳ ಸುಲಭವಾಗಿ ತಯಾರಿಸಬಹುದು. ಹಾಗಾದ್ರೆ ದಾಸವಾಳದ ಕಡುಬು ತಯಾರಿಸುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Hibiscus Leaf Kadubu
Hibiscus Leaf Kadubu/ ದಾಸವಾಳ ಸೊಪ್ಪಿನ ಕಡುಬು
Hibiscus Leaf Kadubu/ ದಾಸವಾಳ ಸೊಪ್ಪಿನ ಕಡುಬು
Prep Time
1 Hours0 Mins
Cook Time
1H0M
Total Time
2 Hours0 Mins

Recipe By: Sushma

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಅಕ್ಕಿ ..3 ಪಾವು

    ಉದ್ದು.. ಅರ್ಧ ಪಾವು

    ದಾಸವಾಳ ಸೊಪ್ಪು.. ಎರಡು ಮುಷ್ಠಿ

    ಬೆಲ್ಲ.. ಒಂದೆರಡು ಗೋಲಿಗಾತ್ರ(optional)

    ಉಪ್ಪು .. ರುಚಿಗೆ ತಕ್ಕಷ್ಟು

Red Rice Kanda Poha
How to Prepare
  • ಮಾಡುವ ವಿಧಾನ..

    *ಕಡುಬು ತಯಾರಿಸುವ ಹಿಂದಿನ ದಿನ ಅಕ್ಕಿಯನ್ನು ಮತ್ತು ಉದ್ದಿನ ಕಾಳುಗಳನ್ನು ನೆನೆಸಿಡಿ. ಎರಡು ಘಂಟೆಗಳ ಕಾಲ ನೆನೆಯಲಿ.

    *ಮೊದಲಿಗೆ ದಾಸವಾಳ ಸೊಪ್ಪುಗಳನ್ನು ಒಂದೆರಡು ಮುಷ್ಠಿ ಅಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿ ಸೇರಿಸುವುದರಿಂದ ಸೊಪ್ಪನ್ನು ಅಧಿಕ ನುಣಿಗೊಳಿಸುವುದಕ್ಕೆ ಸಾಧ್ಯವಾಗುತ್ತದೆ.

    * ಅದಕ್ಕೆ ಉದ್ದು ಸೇರಿಸಿ ನುಣ್ಣಗೆ ರುಬ್ಬಿ.

    * ನಂತರ ಅಕ್ಕಿಯನ್ನು ರವೆರವೆಯಾಗುವಂತೆ ರುಬ್ಬಿ ಮೇಲಿನ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ.

    *ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ಸೇರಿಸಿ ಚೆನ್ನಾಗಿ ಕೈಯಾಡಿ. ( ಸಿಹಿ ಕಡುಬು ಮಾಡುವುದಾದರೆ ಹೆಚ್ಚು ಬೆಲ್ಲವನ್ನು ಸೇರಿಸಿಕೊಳ್ಳಬಹುದು)

    *ಈ ಮಿಶ್ರಣವನ್ನು ಒಂದು ರಾತ್ರಿ ಹುದುಗಲು ಬಿಡಿ.

    *ಹುದುಗಿದ ಮಿಶ್ರಣವನ್ನು ಕಡುಬಿನ ಅಟ್ಟದಲ್ಲಿ ಅಥವಾ ಇಡ್ಲಿ ತಟ್ಟೆಯಲ್ಲಿ ಹಾಕಿ 30 ರಿಂದ ,35 ನಿಮಿಷ ಹಬೆಯಲ್ಲಿ ಬೇಯಿಸಿ.

    *ಬೇಯಿಸಿದ ಕಡುಬನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಚಟ್ನಿಯ ಜೊತೆ, ಸಾಂಬಾರಿನ ಜೊತೆ ಸವಿಯಲು ನೀಡಿ.

    *ಇಡ್ಲಿ ತಟ್ಟೆಯಲ್ಲಿ ಬೇಯಿಸಿದರೆ ಮಾಮೂಲಿ ಇಡ್ಲಿಯಂತೆಯೆ ಹಸಿರು ಬಣ್ಣದಲ್ಲಿ ಆಗುತ್ತದೆ.

Instructions
  • ಇದನ್ನುರುಬ್ಬುವುದಕ್ಕೆ ಗ್ರೈಂಡರ್ ಬಳಸಿದರೆ ಸೊಪ್ಪು ಸಂಪೂರ್ಣ ನುಣಿಯಾಗುವುದಿಲ್ಲ. ಮಿಕ್ಸಿ ಬಳಸಿದರೆ ಸೊಪ್ಪು ಸಂಪೂರ್ಣ ನುಣಿಯಾಗುವುದರಿಂದಾಗಿ ಕಡುಬು ಸಂಪೂರ್ಣ ಹಸಿರಾಗುತ್ತದೆ. ಈ ಕಡುಬು ಬೇಸಿಗೆಗೆ ಹೇಳಿ ಮಾಡಿಸಿದ್ದು. ಯಾಕೆಂದರೆ ದಾಸವಾಳದ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ನಾರಿನಂಶ ದೇಹಕ್ಕೆ ಲಭ್ಯವಾಗುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಇದರಿಂದ ಸರಿಯಾಗುತ್ತದೆ. ದಾಸವಾಳ ಸೊಪ್ಪಿನ ಕಡುಬು ಉರಿಮೂತ್ರ ಸಮಸ್ಯೆ ಆಗಾಗ ಎದುರಿಸುವವರಿಗೆ ಉತ್ತಮ ಆಹಾರವಾಗಿದೆ.
Nutritional Information
  • ಕ್ಯಾಲೋರಿ - 100 ಗ್ರಾಂ
[ 5 of 5 - 56 Users]
X
Desktop Bottom Promotion