Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಉಪ್ಪಿಟ್ಟು ಅಂದ್ರೆ ಮೂಗು ಮುರಿಯುವವರಿಗೂ ಇಷ್ಟವಾಗುತ್ತೆ ಈ ಬಟಾಣಿ ಉಪ್ಪಿಟ್ಟು
ಉಪ್ಪಿಟ್ಟಿನ ರುಚಿ ಹೇಗಿರುತ್ತೆ ಎನ್ನುವುದು ಅದಕ್ಕೆ ಬಳಸುವ ಸಾಮಗ್ರಿಗಳನ್ನು ಅವಲಂಬಿಸಿರುತ್ತೆ. ಬರೀ ರವೆ ಹಾಕಿ ಮಾಡಿದರೆ ಆ ಉಪ್ಪಿಟ್ಟು ಅಷ್ಟೇನು ರುಚಿಯಾಗಿರಲ್ಲ, ಅದಕ್ಕೆ ತರಕಾರಿ ಸೇರಿಸಿದರೆ ರುಚಿ ಹೆಚ್ಚುತ್ತೆ, ಅದರಲ್ಲೂ ಬಟಾಣಿ, ಅವರೆಕಾಳು ಹಾಕಿ ಮಾಡಿದರೆ ತುಂಬಾನೇ ರುಚಿಯಾಗಿರುತ್ತೆ, ಸಾಮಾನ್ಯವಾಗಿ ಉಪ್ಪಿಟ್ಟು ಬೇಡ ಎಂದು ಹೇಳುವವರಿಗೂ ಈ ಉಪ್ಪಿಟ್ಟು ಅಂದ್ರೆ ಇಷ್ಟವಾಗುವುದು.

ನಾವಿಲ್ಲಿ ಬಟಾಣಿ ಹಾಕಿ ಮಾಡಿರುವ ಉಪ್ಪಿಟ್ಟು ರೆಸಿಪಿ ನೀಡಿದ್ದೇವೆ, ಈ ಉಪ್ಪಿಟ್ಟು ನಿಮಗೆ ಖಂಡಿತ ಇಷ್ಟವಾಗುವುದು ನೋಡಿ:
Recipe By: Reena TK
Recipe Type: breakfast
Serves: 3
-
ಬೇಕಾಗುವ ಸಾಮಗ್ರಿ
* 1 ಕಪ್ ಸೂಜಿ ರವೆ ( ಬಾಂಬೆ ರವೆ)
* 1 ಕಪ್ ಬಟಾಣಿ
*1 ಟೊಮೆಟೊ
* 1ಈರುಳ್ಳಿ
* 3 ಹಸಿ ಮೆಣಸು
* 1 ಆಲೂಗಡ್ಡೆ (ತೆಳುವಾಗಿ ಕತ್ತರಿಸಿ)
* 1 ಚಮಚ ಎಣ್ಣೆ/ತುಪ್ಪ
* ಕರಿಬೇವು
* 1 ಚಮಚ ಉದ್ದು
* 1/4 ಚಮಚ ಅರಿಶಿಣ ಹುಡಿ
* ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ರವೆಯನ್ನು ಹುರಿದು ಇಟ್ಟುಕೊಳ್ಳಿ.
* ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಉದ್ದಿನ ಬೇಳೆ ಹಾಕಿ (ಬೇಕಿದ್ದರೆ ನೆಲಗಡಲೆಯನ್ನು ಸೇರಿಸಬಹುದು).
* ಈಗ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ಈಗ ಬಟಾಣಿ, ಆಲೂಗಡ್ಡೆ ಹಾಕಿ 2 ನಿಮಿಷ ಫ್ರೈ ಮಾಡಿ.
* ನಂತರ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ.
* ನಂತರ 4 ಕಪ್ ನೀರು ಹಾಕಿ ತರಕಾರಿ ಬೇಯಿಸಿ.
* ತರಕಾರಿ ಬೆಂದ ಮೇಲೆ ರವೆಯನ್ನು ನಿಧಾನಕ್ಕೆ ಉದುರಿಸಿ, ಹೀಗೆ ಉದುರಿಸುವಾಗ ಗಂಟು ಕಟ್ಟಲು ಬಿಡಬೇಡಿ,
* ತಿರುಗುಸುತ್ತಲೇ ಇರಿ.
* ಉಪ್ಪಿಟ್ಟು ಬೆಂದು ಗಟ್ಟಿಯಾಗಿವಾಗ ಉರಿ ಆಫ್ ಮಾಡಿ. ಹೀಗೆ ಮಾಡಿದರೆ ಉಪ್ಪಿಟ್ಟು ರುಚಿಯಾಗಿರುತ್ತೆ.
- ನೀವು ಇದಕ್ಕೆ ಒಣ ಬಟಾಣಿ ಹಾಕುವ ಬದಲಿಗೆ ಹಸಿ ಬಟಾಣಿ ಹಾಕಿ ಮಾಡಿದರೆ ರುಚಿ ಹೆಚ್ಚು
- ಕ್ಯಾಲೋರಿ - 200ಕ್ಯಾ
- ಪ್ರೊಟೀನ್ - 6ಗ್ರಾಂ
- ಕಾರ್ಬ್ಸ್ - 30ಗ್ರಾಂ
- ನಾರಿನಂಶ - 3ಗ್ರಾಂ



Click it and Unblock the Notifications