Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪೌಷ್ಟಿಕತೆಯ ಆಗರ ಸೀತಾಫಲ
ಹಚ್ಚಹಸಿರಿನಿಂದ ಕೂಡಿದ ಸೀತಾಫಲದ ಗಿಡಗಳು ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುತ್ತವೆ. ಇದರ ಹಣ್ಣು ರುಚಿಕರ, ಎಷ್ಟೋ ಪೋಷಕಾಂಶಗಳ ಆಗರ. ಮಕ್ಕಳಿಗೆ ಸೀತಾಫಲದ ಹಣ್ಣನು ಹೆಚ್ಚುಹೆಚ್ಚಿಗೆ ತಿನ್ನಿಸಿ. ಇಷ್ಟಪಡದವರಿಗೆ ಮಿಲ್ಕ್ ಷೇಕ್ ಮಾಡಿ ಕೊಡಿ.
ಸೀತಾಫಲದಲ್ಲಿ ಅನ್ನಾಂಗಗಳು ಸಮೃದ್ಧಿಯಾಗಿದ್ದು ಸ್ವಲ್ಪ ಪ್ರಮಾಣದಲ್ಲಿ ಕೊಬ್ಬಿನ ಅಂಶವೂ ಅಡಕವಾಗಿದೆ. ಅನ್ನಾಂಗಗಳಾದ ಸಿ, ಬಿ6, ಮೆಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠಗಳು ದಂಡಿಯಾಗಿವೆ.
*ದಿನಕ್ಕೊಂದು ಸೀತಾಫಲ ಸೇವಿಸುವುದರಿಂದ ಆ ದಿನಕ್ಕಾಗುವ ಅನ್ನಾಂಗ 'ಸಿ' ದೇಹಕ್ಕೆ ಲಭಿಸುತ್ತದೆ.
*ದಿನವೊಂದಕ್ಕೆ ನಮ್ಮ ದೇಹಕ್ಕೆ ಅವಶ್ಯಕವಾದ ಮೆಗ್ನೀಷಿಯಂ ಸಹ ಪಡೆಯಬಹುದು. ಮೆಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಮೆಗ್ನೀಷಿಯಂ ನೊಂದಿಗೆ ರಾಗಿಯ ಅಂಶ ಸಹ ಸೀತಾಫಲದಲ್ಲಿ ಸಮೃದ್ಧಿಯಾಗಿದೆ. ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು, ಫ್ರೀ ರಾಡಿಕಲ್ಸ್ ನ್ನ್ನು ನಿವಾರಿಸಿ ಕ್ಯಾನ್ಸರ್ ಬಾರದಂತೆ ತಡೆಯುವ ಶಕ್ತಿಯು ಇದೆ. ಚಿಕಿತ್ಸೆಯ ಬಳಿಕ ಗಾಯ ವಾಸಿಯಾಗಲು ಸೀತಾಫಲ ಎಷ್ಟೋ ಸಹಾಯಕಾರಿ.
ಇಷ್ಟೆಲ್ಲ ಸುಗುಣಗಳಿಂದ ತುಂಬಿರುವ ಸೀತಾಫಲವನ್ನು ತಿನ್ನಲು ಮಕ್ಕಳು ಅಷ್ಟಾಗಿ ಇಷ್ಟಪಡುವುದಿಲ್ಲ. ಅಂತಹವರಿಗಾಗಿ ಬಾಯಲ್ಲಿ ನೀರೂರಿಸುವ ಈ ಪೇಯವನ್ನು ಮಾಡಿಕೊಡಿ.
ಈ ಪೇಯ ಮಾಡಲು ದೊಡ್ಡ ಗಾತ್ರದ ಒಂದು ಸೀತಾಫಲ, ಒಂದು ಕಪ್ಪು ಹಾಲು, ಒಂದು ಕೋಳಿ ಮೊಟ್ಟೆ, ಎರಡು ಚಮಚ ಜೇನುತುಪ್ಪವನ್ನು ಸರಿಮಾಡಿಕೊಳ್ಳಿ. ಮೊದಲು ಸೀತಾಫಲದಲ್ಲಿನ ಬೀಜಗಳನ್ನು ಬೇರ್ಪಡಿಸಿ ತಿರುಳನ್ನು 5 ನಿಮಿಷಗಳ ಕಾಲ ಮಿಕ್ಸಿಗೆ ಹಾಕಿ ತಿರುವಿ ನಂತ ಪಕ್ಕಕ್ಕಿಡಿ. ದಪ್ಪತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ. ಮೊಟ್ಟೆಯನ್ನು ಒಡೆದು ಹಾಲಿಗೆ ಹಾಕಿ ಕಲೆಸಿ. ಇದಕ್ಕೆ ಜೇನು ತುಪ್ಪ ಹಾಗೂ ಮಿಕ್ಸಿಯಲ್ಲಿ ರುಬ್ಬಿಕೊಂಡ ಸೀತಾಫಲ ತಿರುಳನ್ನು ಹಾಕಿ. ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಕಲಕುತ್ತಿರಿ. ಸ್ವಲ್ಪ ಸಮಯದ ಬಳಿಕ ಒಲೆ ಮೇಲಿಂದ ಕೆಳಗಿಳಿಸಿ. ಸ್ವಲ್ಪ ಸಮಯ ಬಿಡಿ ತಣ್ಣಗಾಗುತ್ತದೆ ಬಳಿಕ ಫ್ರಿಜ್ ನಲ್ಲಿಟ್ಟು ಮತ್ತಷ್ಟು ತಣ್ಣಗಾದ ನಂತರ ಸೀತಾಫಲ ಪೇಯವನ್ನು ಕೊಡಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
