ರೆಸಿಪಿ: ಬಿಸಿ ಅನ್ನದ ಜೊತೆ ಸವಿಯಲು ಸೂಪರ್‌ ಈ ಮೊಸರು ಚಟ್ನಿ

Posted By:

ಮೊಸರಿನ ಚಟ್ನಿ ಅನೇಕ ರೀತಿಯಲ್ಲಿ ಮಾಡುತ್ತಾರೆ, ನೀವು ಈ ರೀತಿಯ ಚಟ್ನಿ ಟ್ರೈ ಮಾಡಿಲ್ಲ ಅಂದರೆ ಇಲ್ಲಿದೆ ನೋಡಿ ರೆಸಿಪಿ. ಬಿಸಿ-ಬಿಸಿ ಅನ್ನದ ಜೊತೆ ಸವಿಯಲು ಈ ಚಟ್ನಿ ತುಂಬಾನೇ ಸೂಪರ್ ಆಗಿರುತ್ತೆ, ಇದನ್ನು ಮಾಡಲು 10 ನಿಮಿಷ ಸಾಕು.

Curd Chutney Recipe

ಈ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

Curd Chutney Recipe In Kannada , ಮೊಸರು ಚಟ್ನಿ ರೆಸಿಪಿ
Curd Chutney Recipe In Kannada , ಮೊಸರು ಚಟ್ನಿ ರೆಸಿಪಿ
Prep Time
10 Mins
Cook Time
5M
Total Time
15 Mins

Recipe By: Reena TK

Recipe Type: chutney

Serves: 4

Ingredients
  • ಬೇಕಾಗುವ ಸಾಮಗ್ರಿ

    1 ಕಪ್‌ ಗಟ್ಟಿ ಮೊಸರು

    1 ಚಮಚ ಖಾರದ ಪುಡಿ

    2 ಚಮಚ ಕೊತ್ತಂಬರಿ ಪುಡಿ

    1 ಚಮಚ ಗರಂ ಮಸಾಲ ಪುಡಿ

    1 ಈರುಳ್ಳಿ

    1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    ರುಚಿಗೆ ತಕ್ಕ ಉಪ್ಪು

    1 ಲೋಟ ನೀರು

    ಒಗ್ಗರಣೆಗೆ

    2 ಚಮಚ ಎಣ್ಣೆ

    1/2 ಚಮಚ ಸಾಸಿವೆ

    1/4 ಚಮಚ ಜೀರಿಗೆ

Red Rice Kanda Poha
How to Prepare
  • ಮಾಡುವ ವಿಧಾನ

    * ಒಂದು ಬೌಲ್‌ಗೆ ಮೊಸರು ಹಾಕಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಿ.

    * ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ಅದು ಚಟ್‌ ಪಟ್‌ ಅಂತ ಹೇಳುವಾಗ ಈರುಳ್ಳಿ ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.

    * ಈಗ ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿ ಉರಿ ತುಂಬಾ ಕಡಿಮೆ ಮಾಡಿ. 3-5 ನಿಮಿಷ ಕುದಿಸಿದರೆ ಮೊಸರಿನ ಚಟ್ನಿ ರೆಡಿ.

Instructions
  • ಸಲಹೆ: ನಿಮ್ಮ ಖಾರಕ್ಕೆ ತಕ್ಕಂತೆ ಮಣಸಿನ ಪುಡಿ ಹಾಕಿ ಸ್ವಲ್ಪ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿದರೆ ಕಲರ್ ಸೂಪರ್ ಆಗಿರುತ್ತೆ.
Nutritional Information
[ 4 of 5 - 79 Users]
X
Desktop Bottom Promotion