Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದೇವಾನುದೇವತೆಗಳೆ ‘ತಿಂಡಿಪೋತ’ರಾಗಿರುವಾಗ... (ಭಾಗ 1)
ದೇವರ ಉದಾಹರಣೆಗಳನ್ನು ಮುಂದಿಟ್ಟರೂ, ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟರೂ ಕೇವಲ ನಾನೊಬ್ಬನೆ ತಿಂಡಿಪೋತ ಅಲ್ಲ ಎಂಬುದನ್ನು ನನ್ನ ಹಠಮಾರಿ ಗೆಳೆಯಗೆಳತಿಯರು ಒಪ್ಪುವುದೇ ಇಲ್ಲ. ನನ್ನ ಕರ್ಮ!
ಎಲ್ಲರಿಗೂ ಒಂದಲ್ಲ ಒಂದು ಚಟ ಇರಬೇಕಾದ್ದು ಪ್ರಕೃತಿ ನಿಯಮ. ನನಗಂತೂ ತಿಂಡಿಯನ್ನು ಮೆಲುಕು ಹಾಕುತ್ತ ಇರುವುದೆಂದರೆ ಪಂಚಪ್ರಾಣ. ಈ ಒಳ್ಳೆಯ ಚಟವನ್ನು ಸೊಟ್ಟ ದೃಷ್ಟಿಯಿಂದ ಹಿಯ್ಯಾಳಿಸುತ್ತ ‘ತಿಂಡಿಪೋತ ಹಾಯ್.. ಹಾಯ್’ ಎಂದು ಗೆಳೆಯರೆನ್ನಿಸಿಕೊಂಡಿರುವ ಪಾಪಿಗಳು ಗೇಲಿ ಮಾಡುತ್ತಾರೆ.
ಇಡೀ ಪ್ರಪಂಚದಲ್ಲಿ ನಾನೊಬ್ಬನೇ ತಿಂಡಿಪೋತನೇ? ಬೇರೆ ಯಾರೂ ಈ ಹೆಗ್ಗಳಿಕೆಗೆ ಪಾಲುದಾರರು ಇಲ್ಲವೇ? ‘ದೇವಾನಂ ತಿಂಡಿ ಪ್ರಿಯಂಃ’ ಎಂಬ ಉಕ್ತಿ ಇವರ ಗಮನಕ್ಕೆ ಏಕೆ ಬರುವುದಿಲ್ಲ ಎಂದು ಸಂಕಟವಾಗುತ್ತದೆ ಹಾಗೂ ಈ ತಿಂಡಿ ಪಕ್ಷಪಾತಿಗಳ ಮೇಲೆ ಕಡುಕೋಪ ಬರುತ್ತೆ!
ಪುಟ್ಟ ಬಾಲಕೃಷ್ಣನ ಉದಾಹರಣೆ ತೆಗೆದುಕೊಳ್ಳಿ. ಅವನ ಜನ್ಮದಿನ, ಎಲ್ಲರೂ ಅದೆಷ್ಟು ವಿವಿಧ ತಿಂಡಿ ತಿನಿಸುಗ
ಳನ್ನು ನಿಷ್ಠೆಯಿಂದ ತಯಾರಿಸಿ ಭಕ್ತಿಪೂರ್ವಕವಾಗಿ ನೈವೇದ್ಯ ಮಾಡುತ್ತಾರೆ. ಚಕ್ಕುಲಿ, ತೆಂಗೊಳಲು, ಬೆಣ್ಣೆ ಮುರುಕು, ಕೋಡುಬಳೆ.. ಅಬ್ಬಬ್ಬ...ನಿಪ್ಪಟ್ಟು, ಹಪ್ಪಳ, ಸಂಡಿಗೆ, ಬೇಸಿನ್ ಉಂಡೆ.. ಛೇ ಯಾಕೆ ಇದನ್ನೆಲ್ಲ ಜ್ಞಾಪಿಸಿಕೊಂಡು ಬಾಯಿಯಲ್ಲಿ ನೀರು ತರಿಸಿಕೊಳ್ಳುವುದು.ಆಹಾ ! ಸತ್ಯನಾರಾಯಣನಿಗಂತೂ ಬೆಣ್ಣೆ ಕಾಯಿಸಿದ ತುಪ್ಪ, ಸಕ್ಕರೆ, ಬಾಳೆಹಣ್ಣು, ಪಚ್ಚ ಕರ್ಪೂರ, ಧಂಡಿಯಾಗಿ ದ್ರಾಕ್ಷಿ, ಗೋಡಂಬಿ, ರವೆಯ ಮಿಶ್ರಣದಿಂದ ತಯಾರಿಸಿದ ‘ಸಪಾದ ಭಕ್ಷ್ಯ’. ಈ ಪ್ರಸಾದ ತಿಂದ ಮೇಲೆ ಜಿಡ್ಡಿನ ಕೈಯನ್ನು ಸೀಗೆಪುಡಿಯಿಂದಲೇ ತೊಳೆದುಕೊಳ್ಳಬೇಕು. ಡೆಟಾಲ್ ಲಿಕ್ವಿಡ್ ಸೋಪು ಮಡಿಗೆ ಬರಲ್ಲ.
ತಿರುಪತಿ ತಿಮ್ಮಪ್ಪನಿಗೆ ಹಲ್ಲು ನೋವಿರಬಹುದೇನೋ ಎಂದು ನನಗೆ ಅನುಮಾನ. ಅವನಿಗೆ ಬಲು ಇಷ್ಟವಾಗಿರುವ, ಮೆತ್ತಗಿರುವ, ಘಮಘಮವೆನಿಸುವ ಲಾಡು ಉಂಡೆ- ಅದರಲ್ಲಿ ಒಂಬತ್ತು ಅಂಶ ಉತ್ತುತ್ತೆ, ಗೋಡಂಬಿ, ದ್ರಾಕ್ಷಿ, ಪಚ್ಚ ಕರ್ಪೂರ, ಜೇನು ತುಪ್ಪ, ಲವಂಗ ಮತ್ತು ಒಂದಂಶ ಲಾಡು ಕಾಳಿನ ಮಿಶ್ರಣದ ಉಂಡೆ. ಇನ್ನು ವಡೆ- ಅಯ್ಯಮ್ಮ ಇದನ್ನು ಪುಡಿ ಮಾಡಬೇಕಾದರೆ ಹಲ್ಲು ಪ್ರಯೋಜನಕ್ಕೆ ಬಾರದು. ಏನಿದ್ದರೂ ಎರಡಾದರೂ ಕಬ್ಬಿಣದ ಸುತ್ತಿಗೆ ಬೇಕು! ಈ ಕಟಕಲು ವಡೆಯನ್ನು ಭಕ್ತರಿಗೆ ದಾಟಿಸಿ, ತಾನು ಮಾತ್ರ ಲಘುವಾದ ಘಮ್ಮೆನಿಸುವ ಲಾಡು ಉಂಡೆಯ ರುಚಿಯನ್ನು ಆಸ್ವಾದಿಸುತ್ತಿದ್ದಾನೆ ಈ ನಮ್ಮ ತಿಮ್ಮಪ್ಪ !
ಇನ್ನು ಬುಸ್ಸ್ ನಾಗಪ್ಪ- ಅದೇ ಸುಬ್ರಹ್ಮಣ್ಯನಿಗೆ ಹದವಾಗಿ ಘಮ್ಮೆನಿಸುವ ಚಿಗುಳಿ, ತಂಬಿಟ್ಟು ಜೊತೆಗೆ ದಪ್ಪ ಕೆನೆಗಟ್ಟುವಂತೆ ಕಾಯಿಸಿದ ಹಾಲು- ಏನುಂಟು ಏನಿಲ್ಲ - ಇವುಗಳ ನಿವೇದನೆ. ಇತ್ತೀಚಿನ ಕೆಲವು ಕ್ರಾಂತಿಕಾರಿ ವಿಚಾರವಾದಿಗಳು ಹಾಲನ್ನು ಕೇವಲ ಬಡವರಿಗೆ ಮಾತ್ರ ಮೀಸಲಿಡಿ ಎಂಬ ಕೂಗಿನೊಂದಿಗೆ ನಾಗರಗಳಿಗೆ ಕೇವಲ ಮೊಟ್ಟೆಯನ್ನು ಮಾತ್ರ ನಿವೇದಿಸತಕ್ಕದ್ದೆಂದು ಆದೇಶ ಹೊರಡಿಸಿಬಿಟ್ಟಿದ್ದಾರಂತೆ.



Click it and Unblock the Notifications
