ಉಳಿದ ಅನ್ನದಿಂದ ಈ ರೀತಿ ಫಟಾಫಟ್ ಆಗಿ, ಕ್ರಿಸ್ಪಿ ದೋಸೆ ಮಾಡಬಹುದು

Posted By:

ಸಾಮಾನ್ಯವಾಗಿ ಉಳಿದ ಅನ್ನದಿಂದ, ಚಿತ್ರಾನ್ನ, ಪುಳಿಯೋಗರೆ ಮಾಡೋದು ರೂಢಿ. ಆದರೆ, ಇದರಿಂದ ಇನ್ಸ್ಟಂಟ್ ಆಗಿ ದೋಸೆ ಯಾವತ್ತಾದರೂ ಟ್ರೈ ಮಾಡಿದ್ದೀರಾ? ಹೌದು, ಉಳಿದ ಅನ್ನದಿಂದ, ಗರಿಗರಿಯಾದ, ರುಚಿಯಾದ ದೋಸೆ ತಯಾರಿಸಬಹುದು. ಇದು ಮಾಡೋಕ್ಕೂ ಸುಲಭ ಜೊತೆಗೆ ಅದೇ, ಚಿತ್ರಾನ್ನ ತಿಂದು ಬೇಜಾರಾದವರಿಗೆ ಇದೊಂದು ಉತ್ತಮ ಪರ್ಯಾಯ ಬ್ರೇಕ್‌ಫಾಸ್ಟ್. ಹಾಗಾದ್ರೆ, ಬನ್ನಿ ಉಳಿದ ಅನ್ನದಿಂದ ದೋಸೆ ಯಾವ ರೀತಿ ಮಾಡೋದು ಅಂತ ನೋಡ್ಕೋಂಡು ಬರೋಣ.

cooked rice dosa recipe in Kannada | leftover rice dosa | dosa with leftover rice
ಉಳಿದ ಅನ್ನದಿಂದ ಈ ರೀತಿ ಫಟಾಫಟ್ ಆಗಿ, ಕ್ರಿಸ್ಪಿ ದೋಸೆ ಮಾಡಬಹುದು
ಉಳಿದ ಅನ್ನದಿಂದ ಈ ರೀತಿ ಫಟಾಫಟ್ ಆಗಿ, ಕ್ರಿಸ್ಪಿ ದೋಸೆ ಮಾಡಬಹುದು
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಪದಾರ್ಥಗಳು:

    ರವೆ - 1 ಕಪ್

    ಉಳಿದ ಅನ್ನ- 1 ½ ಕಪ್

    ಹುಳಿ ಮೊಸರು - 1 ಕಪ್

    ರುಚಿಗೆ ಉಪ್ಪು

    ಅಡುಗೆ ಸೋಡಾ

Red Rice Kanda Poha
How to Prepare
  • ಉಳಿದ ಅನ್ನದಿಂದ ತ್ವರಿತ ದೋಸೆ ಮಾಡುವುದು ಹೇಗೆ?:

    ಬ್ಲೆಂಡರ್ ಜಾರ್‌ನಲ್ಲಿ 1 ಕಪ್ ರವೆ ತೆಗೆದುಕೊಳ್ಳಿ. ಅದನ್ನು ಪುಡಿಮಾಡಿ.

    ಈಗ 1 ½ ಕಪ್ ಉಳಿದ ಅನ್ನವನ್ನು ಗ್ರೈಂಡರ್ ಜಾರ್‌ಗೆ ಸೇರಿಸಿ, ಮತ್ತೆ ರುಬ್ಬಿಕೊಳ್ಳಿ.

    ನಂತರ 1 ಕಪ್ ಮೊಸರು ಸೇರಿಸಿ, ಮತ್ತೆ ಕೆಲವು ಸೆಕೆಂಡುಗಳ ಕಾಲ ಅದನ್ನು ರುಬ್ಬಿಕೊಳ್ಳಿ.

    ಈಗ ¾ ಕಪ್ ನೀರು ಸೇರಿಸಿ, ರುಬ್ಬಿಕೊಳ್ಳಿ.

    ಒಂದು ಬಟ್ಟಲಿಗೆ ಹಿಟ್ಟನ್ನು ಹಾಕಿ, ಬೌಲ್ ಅನ್ನು ಕವರ್ ಮಾಡಿ ಮತ್ತು 10 ನಿಮಿಷಗಳ ಕಾಲ ಬಿಡಿ.

    ಈಗ ಹಿಟ್ಟಿಗೆ ಉಪ್ಪು ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಅಡುಗೆ ಸೋಡಾವನ್ನು ಹೆಚ್ಚು ಸೇರಿಸಬೇಡಿ.

    ಪ್ಯಾನ್ ಅನ್ನು ಬಿಸಿಗಿಟ್ಟು, ಲೋ ಫ್ಲೇಮ್ ಇಡಿ.

    ಈಗ ದೋಸೆ ಹರಡಿ, ಸ್ವಲ್ಪ ತುಪ್ಪ, ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ, ಬೇಯಿಸಿದರೆ, ಸವಿಯಲು ದೋಸೆ ಸಿದ್ಧ.

Instructions
Nutritional Information
  • People - 2
  • ಎನರ್ಜಿ - 133ಕ್ಯಾ
  • ಫೈಬರ್ - 1.1ಗ್ರಾ
  • ಪ್ರೋಟೀನ್ - 2.7ಗ್ರಾ
  • ಕಾರ್ಬೋಹೈಡ್ರೇಟ್ - 18.8ಗ್ರಾ
[ 4.5 of 5 - 94 Users]
Story first published: Saturday, February 12, 2022, 9:00 [IST]
X
Desktop Bottom Promotion