Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುದ್ದು ಮಗಳಿಗೆ ಇಷ್ಟದ ಚಟ್ನಿಪುಡಿ ಹೀಗೆ ಮಾಡ್ತಿನಿ

ಉದ್ದಿನ ಬೇಳೆ ಚಟ್ನಿ ಪುಡಿ ತಯಾರಿಸುವುದು ಬ್ರಹ್ಮ ವಿದ್ಯೇಯೆನಲ್ಲ. ತಯಾರಿಸುವುದು ತುಂಬಾ ಸುಲಭ. ಇದನ್ನು ಒಮ್ಮೆ ಮಾಡಿಟ್ಟರೆ ತುಂಬಾ ಕಾಲದವರೆಗೆ ಬಳಸಬಹುದಾಗಿದೆ. ಊಟದ ಜೊತೆ ಉಪ್ಪಿನಕಾಯಿ ಮಾತ್ರ ಸಾಲದು ಅದರ ಜೊತೆ ಸ್ವಲ್ಪ ಚಟ್ನಿ ಪುಡಿ ಇದ್ದರೆ ಒಂದು ಹಿಡಿ ಅನ್ನ ಜಾಸ್ತಿನೇ ಸೇರುತ್ತದೆ. ಚಟ್ನಿ ಪುಡಿಯನ್ನು ಅನೇಕ ಬಗೆಯಲ್ಲಿ ತಯಾರಿಸಬಹುದು. ಉದ್ದಿನ ಬೇಲೆ ಚಟ್ನಿಪುಡಿ ಹೀಗೆ ಮಾಡಿರಿ.
ಬೇಕಾಗುವ ಸಾಮಾಗ್ರಿಗಳು:
* 1/4 ಕೆ ಜಿ ಕಡಲೆ ಬೇಳೆ
* 1/4 ಕೆಜಿ ಉದ್ದಿನ ಬೇಳೆ
* 60 ಗ್ರಾಂ ಬ್ಯಾಡಗಿ ಮೆಣಸು
* ಉಪ್ಪು ( ರುಚಿಗೆ ತಕ್ಕಷ್ಟು)
* 1 ಕಟ್ಟು ಕೊತ್ತಂಬರಿ ಸೊಪ್ಪು
* ಸ್ವಲ್ಪ ಕರಿಬೇವಿನ ಸೊಪ್ಪು
* ಇಂಗು, ಸಾಸಿವೆ( ಒಗ್ಗರಣೆ)
* ಬೆಲ್ಲ, ಸಕ್ಕರೆ( ರುಚಿಗೆ)
* ಹುಣಸೆಹಣ್ಣು
ತಯಾರಿಸುವ ವಿಧಾನ:
1. ಮೆಣಸು. ಕಡಲೆ ಬೇಳೆ, ಉದ್ದಿನ ಬೇಳೆಯನ್ನು ಚೆನ್ನಾಗಿ ಎಣ್ಣೆ ಹಾಕದೆ ಹಾಗೇ ಹುರಿಯಬೇಕು.
2. ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಹುರಿಯಿರಿ.
3. ಮೇಲಿನ ಸಾಮಾಗ್ರಿಗಳ ಜೊತೆ ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪುಡಿ ಮಾಡಿ.( ಖಾರ ಬೇಕೆಂದರೆ ಬೆಲ್ಲ ಕಡಿಮೆ ಹಾಕಿ)
4. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಇಂಗು ಮತ್ತು ಸಾಸಿವೆ ಹಾಕಿ ನಂತರ ಪುಡಿ ಬೆರೆಸಿ 1 ನಿಮಿಷ ಸೌಟ್ ನಿಂದ ಅಲುಗಾಡಿಸಿ ನಂತರ ಗ್ಯಾಸ್ ಆಫ್ ಮಾಡಿ ಚಟ್ನಿಪುಡಿ ಆರಲು ಇಡಬೇಕು.
5. ತಯಾರಾದ ಚಟ್ನಿ ಪುಡಿಯನ್ನು ಡಬ್ಬದಲ್ಲಿ ತುಂಬಿಡಿ.



Click it and Unblock the Notifications
