Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪುದೀನಾ ಪನ್ನೀರ್ ರೈಸ್-ಬ್ರೇಕ್ ಫಾಸ್ಟ್ ರೆಸಿಪಿ
ಬೆಳಗಿನ ತಿಂಡಿಗೆ ಸುಲಭದಲ್ಲಿ ಮಾಡಬಹುದಾದ ರುಚಿಕರವಾದ ಅಡುಗೆ ಬಗ್ಗೆ ಯೋಚಿಸುತ್ತಿದ್ದರೆ ಇದೋ ನೋಡಿ ರೆಸಿಪಿ ಇಲ್ಲಿದೆ . ಇದು ಪುದೀನಾ ಪನ್ನೀರ್ ಪಲಾವ್ ರೈಸ್. ಈ ಪಲಾವ್ ಗೆ ಹೆಚ್ಚಿನ ತರಕಾರಿಗಳ ಅಗತ್ಯವಿಲ್ಲ, ಪನ್ನೀರ್ ಮತ್ತು ಪುದೀನಾ ಪ್ರಮುಖ ಸಾಮಾಗ್ರಿಗಳು.
ಪುದೀನಾ ಪನ್ನೀರ್ ಪಲಾವ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು
ಅಕ್ಕಿ 2 ಕಪ್
ಬಟಾಣಿ
ಪನ್ನೀರ್ 200 ಗ್ರಾಂ
ಪುದೀನಾ 1 ಕಟ್ಟು
ಈರುಳ್ಳಿ 2
ಹಸಿ ಮೆಣಸಿನಕಾಯಿ 3-4
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಬೆಳ್ಳುಳ್ಳಿ4
ಲವಂಗ 5
ನೀರು 4 ಕಪ್
ಎಣ್ಣೆ 2 ಚಮಚ
ತಯಾರಿಸುವ ವಿಧಾನ:
* ಬೆಳ್ಳುಳ್ಳಿ, ಶುಂಠಿ, ಪುದೀನಾವನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ ಇಡಿ.
* ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಬಿಸಿ ಅದರಲ್ಲಿ ಚಕ್ಕೆ, ಲವಂಗವನ್ನು ಪುಡಿ ಮಾಡಿ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದರಲ್ಲಿ ಪನ್ನೀರ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ . ಈಗ ಹಸಿ ಮೆಣಸಿನಕಾಯಿ ಹಾಕಿ 2 ನಿಮಿಷ ಹುರಿಯಿರಿ.
* ನಂತರ ಪನ್ನೀರ್ ಹಾಕಿ, ಪನ್ನೀರ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು, ನಂತರ ಬಟಾಣಿ ಹಾಕಿ, ಪುದೀನಾ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಹುರಿಯಿರಿ. ಈಗ ತೊಳೆದ ಅಕ್ಕಿಯನ್ನು ಹಾಕಿ ಸೌಟ್ ನಿಂದ ಎರಡು ನಿಮಿಷ ಆಡಿಸಿ, 4 ಕಪ್ ನೀರು ಸೇರಿಸಿ, ಉಪ್ಪು ಸೇರಿಸಿ ಕುಕ್ಕರ್ ಬಾಯಿ ಮುಚ್ಚಿ 2 ವಿಶಲ್ ಬರುವವರೆಗೆ ಬೇಯಿಸಿದರೆ ಪುದೀನಾ ಪನ್ನೀರ್ ರೈಸ್ ರೆಡಿ.



Click it and Unblock the Notifications
