ಹೊಸ ರುಚಿ: ಬಿಸಿಬಿಸಿ ಕೇರಳ ಶೈಲಿಯ 'ಮಲಬಾರ್ ಪರೋಟ'...

By: Jaya subramanya
Subscribe to Boldsky

ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಎಂದಾದಲ್ಲಿ ಮಲಬಾರ್ ಪರೋಟ ಅಥವಾ ಕೇರಳ ಪರೋಟದ ಸ್ವಾದವನ್ನು ಆಸ್ವಾದಿಸಿದ್ದೀರಾ? ಈ ಪರೋಟವು ಪದರಗಳನ್ನು ಹೊಂದಿದ್ದು ಇತರ ಸಾಮಾನ್ಯ ಪರೋಟಗಿಂತ ಆಕರ್ಷಕ ಮತ್ತು ಸ್ವಾದಭರಿತವಾಗಿರುತ್ತದೆ. ಕೇರಳದಲ್ಲಿ ಕುಡಿಯೊಡೆದಿರುವ ಈ ಪರೋಟವನ್ನು ನಿಮ್ಮ ಮನೆಗಳಲ್ಲಿ ಕೂಡ ನೀವು ತಯಾರಿಸಿ ಮಲಬಾರ್ ಪರೋಟ ಸವಿಯನ್ನು ಸವಿಯಬಹುದು. ಆಲೂ ಪರೋಟ, ಆಹಾ ಎಂಥ ರುಚಿ ಅಂತೀರಾ...

ಪರೋಟ ರೆಸಿಪಿ ಅತಿ ಸರಳ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ನೀವು ಇದಕ್ಕಾಗಿ ಮಾಡುವ ವಿಧಾನವನ್ನು ಸ್ವಲ್ಪ ಕಲಿತುಕೊಂಡರೆ ಸಾಕು, ಚಿಟಿಕೆ ಹೊಡೆದಷ್ಟು ಸರಳವಾಗಿ ಈ ಪರೋಟವನ್ನು ನಿಮ್ಮದೇ ಪಾಕ ವೈವಿಧ್ಯದಲ್ಲಿ ತಯಾರಿಸಬಹುದು. ಹಾಗಿದ್ದರೆ ಇನ್ನೇಕೆ ತಡ ಅಲ್ಲವೆ? ಪರೋಟ ರೆಸಿಪಿಯ ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದು ನಿಮ್ಮ ಕೈಯ ಪರೋಟವನ್ನು ಸವಿದ ನಂತರ ನಿಮಗೆ ಮೆಚ್ಚುಗೆಯ ಮಹಾಪೂರ ಹರಿದು ಬರುವುದು ಗ್ಯಾರಂಟಿ. ಹೆಸರುಕಾಳಿನ ಚಪಾತಿ ಅಥವಾ ಪರೋಟ     

Malabari Paratha
 

ಪ್ರಮಾಣ - 3 

*ಅಡುಗೆಗೆ ಬೇಕಾದ ಸಮಯ - 30 ನಿಮಿಷಗಳು

*ಸಿದ್ಧತಾ ಸಮಯ - 20 ನಿಮಿಷಗಳು 

ಸಾಮಾಗ್ರಿಗಳು

*ಮೈದಾ - 1 ಕಪ್

*ಎಣ್ಣೆ - 3-4 ಚಮಚ

*ಉಪ್ಪು - ರುಚಿಗೆ ತಕ್ಕಷ್ಟು

*ನೀರು - 1 ಕಪ್     ಕೋಸು ಪರಾಟ ಮಾಡೋದು ಹೀಗೆ

ಮಾಡುವ ವಿಧಾನ

*ದೊಡ್ಡ ಮಿಶ್ರ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಮೈದಾವನ್ನು ಹಾಕಿ, ಉಪ್ಪು ಮತ್ತು ಒಂದು ಚಮಚ ಎಣ್ಣೆಯನ್ನು ಸೇರಿಸಿ ಅಂತೆಯೇ ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಂಡು ಹಿಟ್ಟನ್ನು ಸಿದ್ಧಪಡಿಸಿ.

*ಈಗ ಹಿಟ್ಟನ್ನು ನಿಮ್ಮ ಅಡುಗೆ ಮನೆಯ ಫ್ಲೋರ್‌ಗೆ ವರ್ಗಾಯಿಸಿ ಮತ್ತು ಮಾಯಿಶ್ಚರೈಸರ್ ಹಿಟ್ಟನ್ನು ಹೀರಿಕೊಳ್ಳುವವರೆಗೂ ಕೈಯಲ್ಲಿ ನಾದುತ್ತಿರಿ. ಹಿಟ್ಟು ರಬ್ಬರ್‌ನಂತೆ ಮೃದುವಾಗುತ್ತದೆ ಮತ್ತು ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇರಿಸಿ.

*ಈಗ ಹಿಟ್ಟನ್ನು ಸಮಾನ ಭಾಗವನ್ನಾಗಿಸಿ. ಒಂದು ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪ್ಪಟೆಯನ್ನಾಗಿಸಿ ಮತ್ತು ಬ್ರೆಡ್ ರೋಲರ್ ಸಹಾಯದಿಂದ ಅದನ್ನು ವರ್ತುಲ ಆಕಾರಕ್ಕೆ ತನ್ನಿ.

*ನಿಮ್ಮ ಕೈಯಿಂದಲೇ ಇದನ್ನು ತಟ್ಟುತ್ತಾ ಲಟ್ಟಣಿಗೆಯ ಸಹಾಯದಿಂದ ಇದನ್ನು ಚಪಾತಿ ಆಕಾರದಕ್ಕೆ ತಂದುಕೊಂಡು ಪದರ ಪದರವಾಗಿ ಪರೋಟ ಆಕಾರಕ್ಕೆ ತನ್ನಿ.

*ಪರೋಟವನ್ನು ಬಿಸಿಯಾದ ತವಾದ ಮೇಲಿರಿಸಿಕೊಂಡು ಬೇಯಿಸಿ. ಎರಡೂ ಬದಿಯ ಚಿನ್ನದ ಬಣ್ಣಕ್ಕೆ ಬರುವವರೆಗೆ ಇದನ್ನು ಬೇಯಿಸಿ. ನಂತರ ಸ್ವಲ್ಪ ಎಣ್ಣೆಯನ್ನು ಹಾಕಿ ಗರಿಗರಿಯಾಗಿ ಬೇಯಿಸಿಕೊಳ್ಳಿ.

*ಇನ್ನು ಪರೋಟಾವನ್ನು ಕಿಚನ್ ಟವೆಲ್ ಸಹಾಯದಿಂದ ಒತ್ತಿಕೊಂಡು ಪದರ ಬರುವಂತೆ ಮಾಡಿ. ಈಗ ಬಿಸಿ ಬಿಸಿಯಾದ ಪರೋಟಾವನ್ನು ಕೂರ್ಮ ಅಥವಾ ಗ್ರೇವಿಯ ಜೊತೆಗೆ ಸವಿಯಲು ನೀಡಿ.

English summary

How To Prepare The Delicious Malabari Paratha

The Malabari Parantha or Kerala Parotta is a flakey bread with layers. It is made with refined flour and oil as its main ingredients. Though the recipe originated in the state of Kerala, it is loved and relished all over India. Malabari Parantha is probably one of the favourite breads ordered at a restaurant that specializes in South Indian food.
Story first published: Wednesday, March 15, 2017, 23:32 [IST]
Please Wait while comments are loading...
Subscribe Newsletter