Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕ್ಯಾರಟ್ ಹೆಸರು ಬೇಳೆ ಪಾಯಸ
ಹೊಸ ವರ್ಷದ ಮೊದಲದಿನ ಕ್ಯಾರೆಟ್ ಹೆಸರುಬೇಳೆ ಪಾಯಸ ಮಾಡಿ ಗುರುರಾಯರಿಗೆ ನೈವೇದ್ಯ ಮಾಡಿ ಸೇವಿಸಿ. ವರ್ಷಾಚರಣೆಯಲ್ಲಿ ದಣಿದ ದೇಹಕ್ಕೆ ಪಾಯಸ ಆಯಾಸ ಪರಿಹಾರ ಮಾಡಿಸಿದಂತೆಯೂ ಆಗುತ್ತದೆ.
ಕ್ಯಾರಟ್ ಹಲ್ವ, ಕ್ಯಾರಟ್ ಪಲ್ಯ, ಕ್ಯಾರಟ್ ಹುಳಿ ಹಾಗೂ ಕೋಸಂಬರಿ, ಈ ಪದಾರ್ಥಗಳು ಎಲ್ಲರಿಗೂ ಗೊತ್ತು. ಅಂತೆಯೇ ಹೆಸರುಬೇಳೆ ತೊವ್ವೆ, ಹೆಸರುಬೇಳೆ ಪಾಯಸ, ಕೋಸಂಬರಿ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ. ಆದರೆ ಕ್ಯಾರಟ್ ಹಾಗೂ ಹೆಸರುಬೇಳೆಯನ್ನು ಒಟ್ಟಿಗೇ ಸೇರಿಸಿ ಪಾಯಸವನ್ನು ತಯಾರಿಸಬಹುದು. ಇದು ಮತ್ತೂ ಸ್ವಾದಿಷ್ಟವಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಹಿತಕರ.
ಕ್ಯಾರಟ್ ವಿಟಮಿನ್'ಎ'ಯನ್ನು ಒಳಗೊಂಡಿದ್ದು, ಕಣ್ಣಿಗೆ, ರಕ್ತದ ಉತ್ಪತ್ತಿಗೆ ಪೂರಕ. ಹಾಗೆಯೇ ಹೆಸರುಬೇಳೆ ಉಷ್ಣ ಪ್ರಕೃತಿಯವರಿಗೆ ಹೇಳಿಮಾಡಿಸಿದಂತಹ ಧಾನ್ಯ. ಇದು ದೇಹಕ್ಕೆ ಬಲು ತಂಪು. ಇನ್ನೇನು ಹೊಸವರ್ಷದ ಆಗಮನವಾಗುತ್ತಿದೆ. ಡಿ 31ರ ಬುಧವಾರ ರಾತ್ರಿ ವರ್ಷಾಚರಣೆಯ ಗುಂಗಿನಲ್ಲಿದ್ದು ಸುಸ್ತು ಮಾಡಿಕೊಂಡವರಿಗೆ ಮರುದಿನ ಬೆಳಗ್ಗೆ ಈ ಪಾಯಸ ಆಯಾಸಪರಿಹಾರ ಮಾಡಿಸುತ್ತೆ. ಹೊಟ್ಟೆ ತಣ್ಣಗಿಡುತ್ತದೆ.
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ - 1 ಲೋಟ
* ಕ್ಯಾರಟ್ - 2 (ಸಣ್ಣ ಗಾತ್ರದ್ದಾಗಿದ್ದರೆ 3-4)
* ಸಕ್ಕರೆ - 1 1/4 ಲೋಟ
* ತೆಂಗಿನಕಾಯಿ - 1/2 ಭಾಗ (ತೀರಾ ಸಣ್ಣಕಾಯಿಯಾಗಿದ್ದಲ್ಲಿ ಒಂದು ಇಡಿ ಕಾಯಿಯನ್ನು ಹಾಕಿದರೆ ಒಳ್ಳೆಯದು)
* ಉಪ್ಪು - ರುಚಿಗೆ ತಕ್ಕ
* ಏಲಕ್ಕಿ ಪುಡಿ - 1 ಚಮಚ
* ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳು
ವಿಶೇಷ ಸೂಚನೆ : ಈ ಪಾಯಸವನ್ನು ತಯಾರಿಸುವಾಗ ತೆಂಗಿನಕಾಯಿಯ ಜಿಗುಟನ್ನು ಹಾಕುವುದಿಲ್ಲ. ರುಬ್ಬಿದ ಮೇಲೆ ಜಿಗುಟ್ಟನ್ನು ಸೋಸಿ ಅದರ ರಸವನ್ನು ಮಾತ್ರ ಹಾಕುವುದರಿಂದ ಆರೋಗ್ಯಕ್ಕೆ ತೊಂದರೆಯಾಗದು. ಕೊಲೆಸ್ಟ್ರಾಲ್ ಭಯವೂ ಇರದು.
ಮಾಡುವ ವಿಧಾನ:
* ಮೊದಲು ಕ್ಯಾರಟ್ ಹೆಚ್ಚಿಕೊಂಡು ಸ್ವಲ್ಪ ನೀರು ಹಾಕಿ ಮೆದು ಆಗುವಷ್ಟು ಬೇಯಿಸಿಕೊಳ್ಳಬೇಕು.
* ಒಂದು ಲೋಟ ಹೆಸರುಬೇಳೆಗೆ ಮೂರು ಲೋಟ ನೀರು ಹಾಕಿ ಕುಕ್ಕರಿನಲ್ಲಿಟ್ಟು ಒಂದು ವ್ಹಿಸಿಲ್ ತರಿಸಬೇಕು.
* ನಂತರ ಬೇಯಿಸಿಟ್ಟ ಹೆಸರುಬೇಳೆ, ಕ್ಯಾರಟ್, ಉಪ್ಪು, ಸಕ್ಕರೆ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳನ್ನು ಹಾಕಿ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಿ ಚೆನ್ನಾಗಿ ಕುದಿಸಬೇಕು.
* ಕಾಯಿತುರಿಯನ್ನು ನುಣ್ಣನೆ ರುಬ್ಬಿ, ಸ್ವಚ್ಛ ಬಟ್ಟೆಯಲ್ಲಿ ಸೋಸಿ ಜಿಗುಟನ್ನು ತೆಗೆದು, ಬರಿಯ ಹಿಂಡಿದ ಕಾಯಿರಸವನ್ನಷ್ಟೇ ಹಾಕಿ ಮತ್ತೊಮ್ಮೆ ಕುದಿ ತರಿಸಬೇಕು.
* ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಒಮ್ಮೆ ಕಲಕಿಟ್ಟರೆ ರುಚಿಕರವಾದ ಪಾಯಸ ತಯಾರು.
ಘಮಘಮಿಸುವ ಬಿಸಿ ಪಾಯಸಕ್ಕೆ ಬೇಕಿದ್ದರೆ ಎರಡು ಚಮಚ ತುಪ್ಪವನ್ನು ಹಾಕಬಹುದು. ತುಪ್ಪ ಪಾಯಸದ ಸ್ವಾದವನ್ನು ಮತ್ತಷ್ಟು ಹೆಚ್ಚಿಸುವುದಲ್ಲದೇ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ.
ಕ್ಯಾರೆಟ್‌ನ ಹೆಚ್ಚಿನ ಮಾಹಿತಿಗಳಿಗೆ ಹಾಗೂ ಇದರಿಂದ ಇನ್ನಿತರ ಪದಾರ್ಥಗಳ ತಯಾರಿಕೆಯನ್ನು ನೋಡಲು ಆಸಕ್ತರು ಈ ಕೆಳಗಿನ ಲಿಂಕ್‌ಗಳಿಗೆ ಭೇಟಿ ನೀಡಬಹುದಾಗಿದೆ.
http://www.carrotmuseum.co.uk/nutrition3.html
http://www.carrotmuseum.co.uk/recipes.html



Click it and Unblock the Notifications
