Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಣ್ಣಗಾಗಲು ಓಟ್ಸ್ ಮಸಾಲಾ ಇಡ್ಲಿ

ಓಟ್ಸ್ ಮಸಾಲಾ ಇಡ್ಲಿಗೆ ಬೇಕಾಗುವ ಪದಾರ್ಥ:
* 2 ಕಪ್ ಅಕ್ಕಿ
* 3/4 ಕಪ್ ಉದ್ದಿನ ಬೇಳೆ
* 1 ಕಪ್ ಓಟ್ಸ್
* ರುಚಿಗೆ ತಕ್ಕಷ್ಟು ಉಪ್ಪು
* 1 ಕಪ್ ಬೀನ್ ಮೊಳಕೆ
* ಈರುಳ್ಳಿ
* 2-3 ಹಸಿರು ಮೆಣಸಿನಕಾಯಿ
* ಕೊತ್ತಂಬರಿ
* 1 ಚಮಚ ಜೀರಿಗೆ
ಓಟ್ಸ್ ಮಸಾಲಾ ಇಡ್ಲಿ ತಯಾರಿಸುವ ವಿಧಾನ:
* ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕ ಬಟ್ಟಲಿನಲ್ಲಿ 6-8 ಗಂಟೆ ನೆನೆಯಲು ಬಿಡಬೇಕು.
* ಈ ಮಿಶ್ರಣವನ್ನು ರುಬ್ಬುವ ಸಮಯದಲ್ಲಿ ಓಟ್ಸನ್ನು ನೀರಿನಲ್ಲಿ ನೆನೆಹಾಕಿ ತಕ್ಷಣವೇ ನೀರು ಬಸಿಯಬೇಕು.
* ಓಟ್ಸ್, ಉದ್ದಿನ ಬೇಳೆ ಅಕ್ಕಿಯ ಮಿಶ್ರಣವನ್ನು ರುಬ್ಬಿಕೊಳ್ಳಬೇಕು.
* ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ರಾತ್ರಿಯಿಡೀ ಈ ಮಿಶ್ರಣ ಹುಳಿ ಬರಲು ಬಿಡಬೇಕು.
* ಇಡ್ಲಿ ಮಾಡುವಾಗ ಮೇಲೆ ತಿಳಿಸಿರುವ ಮಸಾಲಾ ಪದಾರ್ಥಗಳನ್ನು ಇಡ್ಲಿ ಹಿಟ್ಟಿಗೆ ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ ಆ ತಟ್ಟೆಗಳಿಗೆ ಇಡ್ಲಿ ಹಿಟ್ಟನ್ನು ಹಾಕಿ 10 ನಿಮಿಷ ಬೇಯಲು ಬಿಡಬೇಕು. ಬೆಂದ ನಂತರ ಓಟ್ಸ್ ಮಸಾಲಾ ಇಡ್ಲಿ ತಿನ್ನಲು ರೆಡಿಯಿರುತ್ತೆ. ಇದನ್ನು ಸಾಂಬಾರ್ ಅಥವಾ ಚಟ್ನಿಯೊಂದಿಗೆ ನೆಂಜಿಕೊಂಡು ತಿನ್ನಬಹುದು.



Click it and Unblock the Notifications
