Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಆಹಾ, ಸವಿಯಲು ಬಲು ರುಚಿ 'ಆಲೂ ಸಮೋಸಾ'
ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿಬಿಸಿಯಾದ ಚಹಾ ಹಾಗೂ ಅದರೊಟ್ಟಿಗೆ ನಾಲಿಗೆ ಚಪ್ಪರಿಸುವಂತಹ ತಿಂಡಿಯಿದ್ದರೆ ಅದರ ಅದ್ಭುತವೇ ಬೇರೆ. ಇಂತಹ ಸುಂದರ ಅನುಭವಕ್ಕೆ ಆರೋಗ್ಯಕರ ತಿಂಡಿಯಾದರೆ ಇನ್ನಷ್ಟು ದೇಹವು ಉತ್ಸುಕವಾಗಿರುತ್ತದೆ. ನಿಜ, ಸಂಜೆಯ ಲಘು ಉಪಹಾರಕ್ಕೆ ಒಂದು ಉತ್ತಮವಾದ ತಿಂಡಿ ಆಲೂ ಸಮೋಸಾ.
ಇದರಲ್ಲಿ ಪನ್ನೀರ್, ತರಕಾರಿ ಹಾಗೂ ಇನ್ನಿತರ ಆರೋಗ್ಯಕರ ಅಂಶ ಇರುವುದರಿಂದ ರುಚಿಯೊಂದಿಗೆ ಉತ್ತಮವಾದ ಆರೈಕೆಯೂ ಸಿಗುವುದು. ಹಾಗಾದರೆ ಬನ್ನಿ ಈ ರುಚಿಕರ ತಿಂಡಿಯನ್ನು ತಯಾರಿಸುವ ವಿಧಾನವನ್ನು ಅರಿಯೋಣ...

ಬೇಕಾಗುವ ಸಾಮಾಗ್ರಿಗಳು:
* 250 ಗ್ರಾಂ ಮೈದಾ
ಹಿಟ್ಟು
* 2 ಕಪ್ ಬೇಯಿಸಿದ ಆಲೂಗಡ್ಡೆಯ ಚೂರುಗಳು
* ಹಸಿರು ಬಟಾಣಿ ಸ್ವಲ್ಪ
* ಮೆಣಸಿನ ಕಾಯಿ ಸ್ವಲ್ಪ
* ಕಡಲೇಕಾಯಿ/ಶೇಂಗಾ ಸ್ವಲ್ಪ
* ಜೀರಿಗೆ ಸ್ವಲ್ಪ
* ಗರಮ್ ಮಸಾಲ
* ಚಾಟ್ ಮಸಾಲ
* ಹುಳಿ ಪುಡಿ/ಮಾವಿನ ಹುಳಿ ಪುಡಿ
* ಜೀರಿಗೆ ಪುಡಿ
* ಉಪ್ಪು
* ಮೆಣಸಿನ ಪುಡಿ/ಖಾರ ಪುಡಿ
* ಅರಿಶಿನ
* ಓಮ್ ಕಾಳು
* ಹುರಿಯಲು ಎಣ್ಣೆ
* ಬಿಸಿ ನೀರು
* ಸಮೋಸಾ ಮಾಡಲು ತುಪ್ಪ
ವಿಧಾನ:
1. ಬೆಚ್ಚಗಿನ ನೀರಿಗೆ ತುಪ್ಪ, ಉಪ್ಪು, ಓಮ್‍ಕಾಳು ಒಂದು ಚಮಚ ಎಲ್ಲವನ್ನು ಸೇರಿಸಿ
ಮೃದುವಾಗಿ ಹಿಟ್ಟನ್ನು ಕಲಸಿ, 30 ನಿಮಿಷಗಳ ಕಾಲ ಬಿಡಿ.
2. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಜೀರಿಗೆಯನ್ನು ಹುರಿಯಿರಿ.
ನಂತರ ಮೆಣಸಿನ ಕಾಯಿ, ಅರಿಶಿನ, ಜೀರಿಗೆ ಪುಡಿ, ಹುಳಿ ಪುಡಿಯನ್ನು ಸೇರಿಸಿ.
3. ಆಲೂಗಡ್ಡೆ, ಹಸಿರು ಬಟಾಣಿ, ಹಸಿರು ಮೆಣಸಿನ ಕಾಯಿ, ಕಡಲೇ ಬೀಜವನ್ನು ಸೇರಿಸಿ.
ಚೆನ್ನಾಗಿ ಮಿಶ್ರಣಗೊಳಿಸಿ. ನಂತರ ಉಪ್ಪು, ಗರಮ್ ಮಸಾಲೆ, ಚಾಟ್ ಮಸಾಲೆಯನ್ನು
ಸೇರಿಸಿ ಮಿಶ್ರಣಗೊಳಿಸಿ. ಬಳಿಕ ಉರಿಯಿಂದ ಕೆಳಗಿಳಿಸಿ.
4. ಕಲಸಿಟ್ಟುಕೊಂಡ ಹಿಟ್ಟನ್ನು ಚಿಕ್ಕ ತ್ರಿಕೋನ ಆಕಾರದಲ್ಲಿ ಲಟ್ಟಿಸಿಕೊಂಡು
ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.
5. ಹುರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿರಿ. ಕಾದ ತಕ್ಷಣ
ತ್ರಿಭುಜಾಕೃತಿಯ ಸಮೋಸವನ್ನು ಎಣ್ಣೆಯಲ್ಲಿ ಬಿಡಿ.
6. ಎಣ್ಣೆಯಲ್ಲಿ ನೊರೆಯಗುಳ್ಳೆಗಳು ಕಡಿಮೆಯಾದಂತೆ ಕಂದು ಬಣ್ಣಕ್ಕೆ
ತಿರುಗುತ್ತವೆ.
7. ಆಗ ಎಣ್ಣೆಯಿಂದ ತೆಗೆದು ಕಾಗದದ ಮೇಲೆ ಹಾಕಿ.
8. ಈಗ ಬಿಸಿ ಬಿಸಿ ಇರುವಾಗಲೇ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್‍ನೊಂದಿಗೆ
ಸವಿಯಲು ನೀಡಿ.



Click it and Unblock the Notifications
