Latest Updates
-
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ! -
ಬಿಗ್ ಬಾಸ್ ಕನ್ನಡ 13: 10ನೇ ವಾರದ ನಾಮಿನೇಷನ್ ಶುರು, ಈ ಬಾರಿ ಯಾರು ಸೇಫ್? ವೋಟ್ ಮಾಡುವುದು ಹೇಗೆ? -
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು
ಪೋಷಕರೇ, ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಈ ಬಗ್ಗೆ ಜಾಗ್ರತೆವಹಿಸಿ!
ಪ್ರತಿಯೊಬ್ಬ ಪೋಷಕರಿಗೂ ಮಕ್ಕಳ ಮೇಲೆ ಕಾಳಜಿ ಇದ್ದೇ ಇರುತ್ತದೆ. ಅವರಿಗೆ ಒಂದೂರು ನೋವಾದ್ರು ನಮ್ಮ ಮನಸ್ಸು ತಡೆಯೋದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತೆ ಎಂದಿಟ್ಟುಕೊಳ್ಳಿ.
ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ನಿಮ್ಮ ಮಗುವನ್ನೇ ಒಬ್ಬರನ್ನೇ ಬಿಟ್ಟು ಹೋಗುತ್ತೀರಿ. ಬೇರ್ಯಾವುದೇ ಆಯ್ಕೆ ನಿಮ್ಮಲ್ಲಿ ಇರೋದಿಲ್ಲ. ಆದರೆ ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವಾಗ ನಿಮಗೆ ಚಿಂತೆ ಕಾಡುವುದು ಸಹಜ. ಹಾಗಾದ್ರೆ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದರೆ ಯಾವ ರೀತಿ ಸಿದ್ಧತೆ ಮಾಡ್ಕೊಬೇಕು ಅನ್ನೋದನ್ನು ತಿಳಿಯೋಣ.

1. ಮಕ್ಕಳ ಬಳಿ ಮೊಬೈಲ್ ಕೊಟ್ಟು ಹೋಗಿರಿ
ನೀವೇನಾದರೂ ಮನೆಯಲ್ಲಿ ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವುದಾದರೆ ಅವರ ಕೈಗೆ ಒಂದು ಫೋನ್ ಕೊಟ್ಟು ಹೋಗುವುದನ್ನು ಮರೀಬೇಡಿ. ಆ ಫೋನ್ ನಲ್ಲಿ ಪೋಷಕರು, ಸಂಬಂಧಿಕರು ಹಾಗೂ ನಂಬಿಕಸ್ಥ ಮನೆ ಪಕ್ಕದವರ ಪೋನ್ ನಂಬರ್ ಹಾಕಿಡಿ. ಯಾಕಂದ್ರೆ ಏನಾದರೂ ಸಮಸ್ಯೆಯಾದರೆ ತಕ್ಷಣ ಅವರು ನಿಮಗೆ ಕಾಲ್ ಮಾಡುವಂತಿರಬೇಕು. ಅಷ್ಟೇ ಅಲ್ಲದೇ, ಯಾವುದಕ್ಕೂ ನಂಬಿಕಸ್ಥ ಅಕ್ಕ-ಪಕ್ಕದವರಿಗೆ ಮಕ್ಕಳು ಮನೆಯಲ್ಲಿ ಒಬ್ಬರೇ ಇರುವ ವಿಚಾರವನ್ನು ತಿಳಿಸಿದ್ದರೆ ಉತ್ತಮ.
2. ಇಡೀ ಹೊತ್ತು ಟಿವಿ ನೋಡದಂತೆ ಎಚ್ಚರಿಸಿ
ಮನೆಯಲ್ಲಿ ನೀವು ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವ ಸಂದರ್ಭದಲ್ಲಿ ಇಡೀ ಹೊತ್ತು ಟಿವಿ ನೋಡದಂತೆ ಎಚ್ಚರಿಸಿ. ಯಾಕಂದ್ರೆ ಮನೆಯಲ್ಲಿ ಅಪ್ಪ- ಅಮ್ಮ ಇಲ್ಲ ಎನ್ನುವ ಖುಷಿಯಲ್ಲಿ ಮಕ್ಕಳು ಇಡೀ ದಿನ ಟಿವಿ ನೋಡುತ್ತಾ, ವಿಡಿಯೋ ಗೇಮ್ ಆಡುತ್ತಾ ಜೊತೆಗೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಾರೆ. ಹೀಗಾಗಿ ಅವರಿಗೆ ಕೆಲವೊಂದು ಮನೆ ಕೆಲಸಗಳನ್ನು ಕೊಟ್ಟು ಹೋಗಿ. ಚಿಕ್ಕ-ಪುಟ್ಟ ಮನೆ ಕೆಲಸವನ್ನು ನಾವು ಮನೆಗೆ ಬರೋದ್ರ ಒಳಗಾಗಿ ಸಂಪೂರ್ಣ ಗೊಳಿಸುವುದಕ್ಕೆ ತಿಳಿಸಿ. ಆಗ ಅವರನ್ನು ಇಡೀ ಹೊತ್ತು ಟಿವಿಯಲ್ಲಿ ಮುಳುಗುವುದನ್ನು ತಪ್ಪಿಸಬಹುದು.
3. ಸುರಕ್ಷತೆಗೆ ಮೊದಲ ಆದ್ಯತೆ ನೀಡಿ
ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವಾಗ ಅವರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಜಾಗೃತೆ ವಹಿಸಬೇಕು. ಅಡುಗೆ ಮನೆ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸಿ. ಚಾಕು ಅಥವಾ ಬೇರ್ಯಾವುದೇ ಹರಿತವಾದ ವಸ್ತುಗಳು ಅವರ ಕೈಗೆ ಸಿಗದಂತೆ ನೋಡಿಕೊಳ್ಳಿ. ಹೀಗಾಗಿ ನೀವು ಅಡುಗೆ ಮಾಡಿಟ್ಟು ಅದನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ಹೋದರೆ ಉತ್ತಮ. ಸಾಧ್ಯವಾದರೆ ಅಡುಗೆ ಕೋಣೆಗೆ ಬೀಗ ಹಾಕಿ ಮನೆಯಿಂದ ಹೊರಡಿ. ಇನ್ನೂ ಕರೆಂಟ್ ಹೋದ್ರೆ ಹೀಗಾಗಿ ಫ್ಲಾಶ್ ಲೈಟ್ ಅವರ ಕೈಗೆ ಸಿಗುವಂತೆ ಇಟ್ಟು ಹೋಗಿ.
4. ಪೋಷಕಾಂಶಯುಕ್ತ ಆಹಾರವನ್ನು ತಯಾರಿಸಿ ಇಟ್ಟು ಹೋಗಿ
ಮಕ್ಕಳಿಗೆ ಆರೋಗ್ಯಯುತವಾದ ಯಾವುದೇ ಆಹಾರ ಇಷ್ಟ ಆಗೋದಿಲ್ಲ. ಅನಾರೋಗ್ಯಕರ ವಸ್ತುಗಳನ್ನೇ ಅವರು ಇಷ್ಟ ಪಟ್ಟು ತಿನ್ನುತ್ತಾರೆ. ಹೀಗಾಗಿ ನೀವು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಅವರ ಕೈಗೆ ಸಿಗುವ ಹಾಗೆ ಯಾವುದೇ ರೀತಿ ಜ್ಯೂಸ್, ಚಿಪ್ಸ್, ಐಸ್ ಕ್ರೀಮ್ ಇಟ್ಟು ಹೋಗಬೇಡಿ. ಅದರ ಬದಲಾಗಿ ಆರೋಗ್ಯಕರ ಆಹಾರವನ್ನು ತಯಾರಿಸಿ ಅವರ ಕೈಗೆ ಸಿಗೋ ಜಾಗದಲ್ಲಿ ಇಟ್ಟು ಹೋಗಿ. ಮಕ್ಕಳು ಹಸಿವಾದಾಗ ಅದನ್ನೇ ತಿನ್ನಲಿ.
5. ಮನೆ ಬಾಗಿಲು ತೆಗೆಯುವಾಗ ಮುಂಜಾಗೃತೆಯಿಂದ ಇರಲು ಹೇಳಿ
ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಿಡಿಗೇಡಿಗಳು ಮನೆಗೆ ನುಗ್ಗಿ ಅಚಾತುರ್ಯ ನಡೆಯುವ ಸಾಧ್ಯತೆಯಿದೆ. ಹೀಗಾಗಿ ದಿನಪೂರ್ತಿ ಮನೆಯ ಬಾಗಿಲನ್ನು ಹಾಕಿರೋದಕ್ಕೆ ತಿಳಿಸಿ. ಒಂದು ವೇಳೆ ಯಾರಾದರೂ ಬಂದಿರೋದು ಗೊತ್ತಾದರೆ ಕಿಟಕಿ ಮೂಲಕ ನೋಡಿ ಮತ್ತೆ ಬಾಗಿಲು ತೆರೆಯುವಂತೆ ತಿಳಿಸಿ. ಮಕ್ಕಳು ಮನೆಯಲ್ಲಿದ್ದಾಗ ನಮ್ಮ ಜಾಗರೂಕತೆಯಲ್ಲಿ ನಾವಿದ್ದರೆ ಒಳ್ಳೆಯದು.
6. ಪರಿಚಯಸ್ಥರನ್ನು ಮಕ್ಕಳೊಂದಿಗೆ ಬಿಟ್ಟು ಹೋಗಿ
ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದರ ಪರಿಸ್ಥಿತಿ ಬಂದರೆ ನಿಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಲಭ್ಯವಿದ್ದರೆ ಅವರನ್ನು ಮಕ್ಕಳೊಂದಿಗೆ ಬಿಟ್ಟು ಹೋಗುವುದು ಒಳ್ಳೆಯದು. ಆಗ ನಿಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿ ಇರುತ್ತದೆ. ಯಾರಾದರೊಬ್ಬರು ಮಕ್ಕಳ ಜೊತೆಗೆ ಇದ್ದಾರಲ್ಲ ಅನ್ನೋ ಕಾರಣಕ್ಕೆ ನೀವು ಆರಾಮಾಗಿ ಇರಬಹುದು.
ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾದರೆ ಈ ವಿಚಾರದ ಬಗ್ಗೆ ಗಮನ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ. ಅವರನ್ನು ಮೊದಲೇ ಈ ರೀತಿ ಸಿದ್ಧಗೊಳಿಸಿದ್ದರೆ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ.



Click it and Unblock the Notifications


