Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಾಯ್ತನದ ನಂತರವೂ ಆಲಿಯಾ ಭಟ್ ಹಾಗೆ ಫಿಟ್ ಆಗಿರ್ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!
ನಟಿ ಅಲಿಯಾ ಭಟ್ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ಸಿನಿ ಪ್ರೇಕ್ಷಕರ ಹೃದಯ ಕದ್ದಿದ್ದ ನಟಿ ಆಲಿಯಾ ಭಟ್ ಫಿಟ್ ನೆಸ್ ವಿಚಾರದಲ್ಲಿ ಎಂದಿಗೂ ಕಾಂಪ್ರಮೈಸ್ ಮಾಡಿಕೊಂಡವರೇ ಅಲ್ಲ. ಬಾಲಿವುಡ್ ನಲ್ಲಿ ಒಂದಾದರ ಮೇಲೊಂದಂತೆ ಹಿಟ್ ಸಿನಿಮಾಗಳನ್ನೇ ಕೊಟ್ಟಿದ್ದ ನಟಿ ಆಲಿಯಾ ಭಟ್ ಏಕಾಏಕಿ ಮದುವೆಯಾಗಿಯೂ ಕೂಡ ಸುದ್ದಿಯಾಗಿದ್ರು. ಇದಾದ ಬಳಿಕ ತಯಿಯಾದ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮವನ್ನು ನೀಡ್ತಾರೆ.
ಅಚ್ಚರಿಯ ವಿಚಾರ ಏನಪ್ಪಾ ಅಂದ್ರೆ ಗರ್ಭಿಣಿಯಾಗಿದ್ದ ಸಮಯದಲ್ಲಿ ತೂಕ ಏರಿಸಿಕೊಂಡಿದ್ದಾಗ ಆಲಿಯಾ ಭಟ್ ಮಗುವಾದ ಮೇಲೆ ಕೆಲವೇ ತಿಂಗಳಿನಲ್ಲಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದಾರೆ. ಸಾಮಾನ್ಯವಾಗಿ ಮಕ್ಕಳಾದ ಮೇಲೆ ತೂಕ ಏರಿಸಿಕೊಂಡ್ರೆ ಮತ್ತೆ ಹಿಂದಿನ ಮೈಕಟ್ಟಿಗೆ ಬರೋದು ತುಂಬಾನೇ ಕಷ್ಟ ಅಷ್ಟಕ್ಕು ಆಲಿಯಾ ಭಟ್ ತೂಕ ಇಳಿಸಿಕೊಂಡು ಫಿಟ್ ಆಗಿದ್ದು ಹೇಗೆ? ಆಲಿಯಾ ಫಿಟ್ನೆಸ್ ಸಿಕ್ರೆಟ್ ಏನು ಅನ್ನೋದನ್ನು ತಿಳಿಯೋಣ.

ಮಗಳು ಹುಟ್ಟಿದ ಕೆಲವೇ ವಾರದಗಳಲ್ಲಿ ಜಿಮ್ ಗೆ ವಾಪಾಸ್ಸ್!
ಆಲಿಯಾ ಭಟ್ ಗರ್ಭಿಣಿಯಾದಾಗಿನಿಂದ ನಿರಂತರವಾಗಿ ಸುದ್ದಿಯಲ್ಲಿದ್ರು. ಹಾಗೂ ಎಲ್ಲರ ಗಮನ ಸೆಳೆದಿದ್ರು. ಇನ್ನೂ ಗರ್ಭಧಾರಣೆಯ ನಂತರವೂ ನಟಿ ಆಲಿಯಾ ಭಟ್ ಫಿಟ್‌ನೆಸ್‌ನಿಂದ ಜನರನ್ನು ಆಶ್ಚರ್ಯಗೊಳಿಸಿದರು. ಮಗಳು ರಾಹಾ ಕಪೂರ್ ಹುಟ್ಟಿದ ಕೆಲವು ವಾರಗಳ ನಂತರ ಆಲಿಯಾ ಭಟ್ ತನ್ನ ಫಿಟ್ನೆಸ್ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸುತ್ತಾರೆ. ಇದರ ಮೊದಲ ಭಾಗ ಎನ್ನುವಂತೆ ಅವರು ಯೋಗ ಮಾಡೋದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ರು.
ತೂಕ ನಷ್ಟದ ಬಗ್ಗೆ ಆಲಿಯಾ ಏನು ಹೇಳಿದ್ರು?
ಸೋಶಿಯಲ್ ಮಿಡಿಯಾದಲ್ಲಿ ಆಲಿಯಾ ಪೋಸ್ಟ್ ಪ್ರೆಗ್ನೆನ್ಸಿ ವರ್ಕ್ಔಟ್ ವಿಡಿಯೋಗಳನ್ನು ಹಂಚಿಕೊಳ್ಳಿತ್ತಿರುತ್ತಾರೆ. ಇನ್ನೂ ಈ ಬಗ್ಗೆ ಮಾತನಾಡಿದ್ದ ಆಲಿಯಾ ಹೆರಿಗೆಯಾದ ಒಂದೂವರೆ ತಿಂಗಳ ನಂತರ ಅವರು ಯೋಗವನ್ನು ಅಭ್ಯಾಸ ಮಾಡಲು ಸಮರ್ಥರಾಗಿದ್ದಾರೆ ಎಂದು ಹೇಳಿಕೊಂಡಿದ್ರು. ಇದ್ರ ಜೊತೆಗೆ ಗರ್ಭಧಾರಣೆಯ ನಂತರದ ತೂಕ ನಷ್ಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಮತ್ತು ಗರ್ಭಧಾರಣೆಯ ನಂತರ ಅವರ ದೇಹದಲ್ಲಿನ ಬದಲಾವಣೆಗಳ ಜೊತೆಗೆ ಹೆರಿಗೆಯ ನಂತರ ತೂಕ ಇಳಿಸುವ ಅಗತ್ಯತೆಯ ಬಗ್ಗೆಯೂ ಮಾತನಾಡಿದ್ರು.
ಸಿನಿಮಾಗಳಿಗಾಗಿ ಮತ್ತೆ ತೂಕ ಇಳಿಸಿದ ನಟಿ
ಆಲಿಯಾ ಭಟ್ ಅವರು ಮಗುವಿನ ಜನನದ ನಂತರ ಹೇಗೆ ಕಾಣುತ್ತಾರೆ ಎಂಬ ಭಯ ಅವರಲ್ಲಿ ಖಂಡಿತ ಇತ್ತು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವ ಒತ್ತಡ ಕೂಡ ಅವರ ಮೇಲಿತ್ತಂತೆ. ಇನ್ನೂ ಅವರು ಕೆಲವೊಂದು ಚಿತ್ರಗಳನ್ನು ಒಪ್ಪಿಕೊಂಡಿದ್ರಿಂದ ತೂಕ ಇಳಿಸಿಕೊಳ್ಳೋದು ಅಗತ್ಯವಾಗಿತ್ತು. ಹಾಗೂ ಫಿಟ್ ಆಗಿರಲೇಬೇಕಾದ ಅನಿವಾರ್ಯತೆ ಇತ್ತು ಎಂದು ಹೇಳಿದ್ದಾರೆ. ಗರ್ಭಾವಸ್ಥೆಯ ನಂತರವೂ ಮಹಿಳೆಯರು ಆಕರ್ಷಕವಾಗಿ ಮತ್ತು ಸ್ಲಿಮ್ ಆಗಿ ಕಾಣಬೇಕೆಂದರೆ ವರ್ಕ್ಔಟ್ ಮಾಡಲೇ ಬೇಕು ಅಂತ ಅಲಿಯಾ ಹೇಳುತ್ತಾರೆ.
ಗರ್ಭಾವಸ್ಥೆಯ ನಂತರ ತೂಕ ಇಳಿಸಿಕೊಳ್ಳುವುದು ಸುಲಭದ ವಿಚಾರವಲ್ಲ. ಇದಕ್ಕಾಗಿ ಸಾಕಷ್ಟು ಪರಿಶ್ರಮದ ಅಗತ್ಯವಿದೆ ಎಂದು ಆಲಿಯಾ ಭಟ್ ಹೇಳಿದ್ದಾರೆ. ಅವರು ತಮ್ಮ ದೇಹದ ಆಕಾರವನ್ನು ಮರಳಿ ಪಡೆಯೋದಕ್ಕೆ ತುಂಬಾನೇ ಒತ್ತಡ ಹಾಕಿದ್ದಾರಂತೆ. ಇದಕ್ಕಾಗಿ ಹಗಲು- ರಾತ್ರಿ ಅವರ ಪರಿಶ್ರಮ ಹೆಚ್ಚಾಗಿತ್ತಂತೆ. ಅವರು ನನ್ನಂತೆ ಇರುವ ಮಹಿಳೆಯರ ನೋವಿನ ಬಗ್ಗೆ ಅರ್ಥ ಮಾಡಿಕೊಳ್ಳುತ್ತೇನೆಂದು ಹೇಳಿಕೊಂಡಿದ್ರು.
ಫಿಟ್ ಆಗಿರಲು ತೂಕ ಇಳಿಸಲೇಬೇಕು!
ಇನ್ನೂ ಕೆಲವು ಮಹಿಳೆಯರು ತೂಕ ಹೆಚ್ಚಾಯಿತು ನಾನು ಸುಂದರವಾಗಿ ಕಾಣುತ್ತಿಲ್ಲವೆಂದು ಒಂದು ರೀತಿ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಆಲಿಯಾ ಹೇಳುವ ಪ್ರಕಾರ ಇದಕ್ಕಾಗಿ ಚಿಂತಿಸಬೇಕಾದ ಅವಶ್ಯಕತೆ ಇಲ್ಲ.
ದಿನ ನಿತ್ಯದ ಆಹಾರ ಕ್ರಮ ಹೀಗಿರಲಿ!
ಗರ್ಭಧಾರಣೆಯ ನಂತರ ತೂಕ ಇಳಿಸಿಕೊಳ್ಳೋದಕ್ಕೆ ಆಲಿಯಾ ಭಟ್ ಅವರು ವರ್ಕ್ಔಟ್ ಹಾಗೂ ಯೋಗದ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನೂ ಫಾಲೋ ಮಾಡ್ತಾರೆ.
*ನಿಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ
* ಋತುಮಾನಕ್ಕೆ ಅನುಗುಣವಾಗಿ ಹಸಿರು ತರಕಾರಿಗಳು ಮತ್ತು ಲಭ್ಯವಿರುವ ಎಲ್ಲಾ ತರಕಾರಿಗಳನ್ನು ಸೇವಿಸಿ
* ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಗೆ ಹೋಗಿ
* ಯೋಗ ಆಸನಗಳನ್ನು ಅಭ್ಯಾಸ ಮಾಡಿ
ಮುಂಜಾಗೃತಾ ಕ್ರಮ ಕೈಗೊಳ್ಳಿ
ಗರ್ಭಿಣಿಯಾಗಲಿ ಅಥವಾ ಗರ್ಭಧಾರಣೆಯ ನಂತರ ಯಾವುದೇ ಕಾರಣಕ್ಕೆ ಮಹಿಳೆಯರು ಒತ್ತಾಯ ಪೂರ್ವಕವಾಗಿ ತೂಕ ಕಳೆದುಕೊಳ್ಳೋದಕ್ಕೆ ಹೋಗಬೇಡಿ. ಇದಕ್ಕಾಗಿ ನೀವು ತಿಳಿದಿರುವವರ ಮಾರ್ಗ ದರ್ಶನ ಪಡೆಯಿರಿ. ಅಥವಾ ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಟಿಯರು ಕೂಡ ಮಾರ್ಗದರ್ಶಕರ ಸಲಹೆಯ ಮೇರೆಗೆ ಇದನ್ನೆಲ್ಲಾ ಮಾಡುತ್ತಾರೆ.



Click it and Unblock the Notifications

