ಆರೋಗ್ಯವಂತ ಮಗುವಿಗಾಗಿ ಯಾವ ವಯಸ್ಸಿನಲ್ಲಿ ಅಪ್ಪನಾಗಬೇಕು?

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ನಮ್ಮೆಲ್ಲರ ಜೀವನ ಶೈಲಿ ಸಾಕಷ್ಟು ಬದಲಾಗಿದೆ, ಆಹಾರಕ್ರಮ ಬದಲಾಗಿವೆ ಅಲ್ಲದೆ ಈಗ ಹೆಣ್ಣಾಗಲಿ, ಗಂಡಾಗಲಿ ಮದುವೆಯಾಗುವಾಗ ಹೆಚ್ಚಿನವರಿಗೆ 25 ವರ್ಷಗಳು. ಓದು, ವೃತ್ತಿ ಬದುಕಿಗೆ ಮೊದಲ ಪ್ರಾಮುಖ್ಯತೆ ನೀಡುವವರು ಮದುವೆ ಜೀವನವನ್ನು ಮುಂದೂಡುತ್ತಾರೆ.

To Get Healthy Baby Which Age Is Best For Men

ಇನ್ನು ಕೆಲವರು ಮದುವೆಯಾಗುವಾಗ ವಯಸ್ಸು ಮೂವತ್ತು ಕಳೆದಿರುತ್ತದೆ. ನಂತರ ಸ್ವಲ್ಪ ವರ್ಷಗಳು ಮಗು ಬೇಡವೆಂಬ ತೀರ್ಮಾನಕ್ಕೆ ಬರುತ್ತಾರೆ, ಇವೆಲ್ಲಾ ಒಂದು ರೀತಿಯಲ್ಲಿ ಬಂಜೆತನ ಸಮಸ್ಯೆ ಹೆಚ್ಚಾಗಲು ಕಾರಣವಾಗಿವೆ. ಇನ್ನು ವಯಸ್ಸು ಅಧಿಕವಾದರೆ ಹುಟ್ಟುವ ಮಕ್ಕಳಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದು ಮಹಿಳೆಯರ ವಯಸ್ಸು ಅಧಿಕವಾದರೆ ಮಾತ್ರವಲ್ಲ, ಪುರುಷರ ವಯಸ್ಸು ಅಧಿಕವಾದರೂ ಹುಟ್ಟುವ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ತೊಂದರೆ ಕಾಣಿಸುವುದು.

ಆರೋಗ್ಯವಂತ ಮಗು ಪಡೆಯಲು ವಯಸ್ಸು ಮುಖ್ಯ

ಆರೋಗ್ಯವಂತ ಮಗು ಪಡೆಯಲು ವಯಸ್ಸು ಮುಖ್ಯ

ಇನ್ನು ಆರೋಗ್ಯವಂತ ಮಕ್ಕಳನ್ನು ಪಡೆಯಲು ವಯಸ್ಸು ಕೂಡ ಮುಖ್ಯವಾಗಿದೆ. ಆದರೆ ವಯಸ್ಸು ವಿಚಾರಕ್ಕೆ ಬಂದಾಗ ಹೆಣ್ಣಿನ ವಯಸ್ಸನ್ನಷ್ಟೇ ನೋಡುತ್ತಾರೆ. ಆದರೆ ಗಂಡಿನ ವಯಸ್ಸು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹೆಣ್ಮಕ್ಕಳಿಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಅಂಡೋತ್ಪತ್ತಿ ಬಿಡುಗಡೆ ಕಡಿಮೆಯಾಗುವುದರಿಂದ ಗರ್ಭಧಾರಣೆಯಾಗುವುದು ಕಷ್ಟ. ಅದೇ ರೀತಿ ಪುರುಷರಲ್ಲಿ ಪ್ರಾಯ ಅಧಿಕವಾಗುತ್ತಿದ್ದಂತೆ ಅವರ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗುವುದು.

ಪುರುಷರ ವಯಸ್ಸು ಕಡಿಮೆಯಾದರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು

ಪುರುಷರ ವಯಸ್ಸು ಕಡಿಮೆಯಾದರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು

ಹಾಗಂತ ವಯಸ್ಸು 30-35 ದಾಟಿದವರಿಗೆ ಎಲ್ಲರಿಗೆ ಆರೋಗ್ಯವಂತ ಮಗುವನ್ನು ಪಡೆಯಲು ತೊಂದರೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ವಯಸ್ಸು 50 ದಾಟಿದವರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿರುವ ಉದಾಹರಣೆಗಳಿವೆ. ಆದರೆ ಚಿಕ್ಕ ಪ್ರಾಯದಲ್ಲಿಯೇ ಪೋಷಕರಾದ ದಂಪತಿಗೆ ಹೋಲಿಸಿದರೆ ಹೋಲಿಸಿದರೆ 40 ಪ್ರಾಯ ದಾಟಿದ ಬಳಿಕ ತಂದೆ-ತಾಯಿಯಾದವರ ಮಕ್ಕಳ ಆರೋಗ್ಯ ಕಡಿಮೆ ಇರುತ್ತದೆ ಎಂಬುವುದು ಅಂಕಿ ಅಂಶಗಳು ಹೇಳುತ್ತವೆ. ಯಾರ ಪುರುಷ ಸಂಗಾತಿಯ ವಯಸ್ಸು 30 ವರ್ಷದೊಳಗೆ ಇರುತ್ತದೆಯೋ ಅವರು 40 ವರ್ಷ ಮೇಲ್ಪಟ್ಟ ಪುರುಷ ಸಂಗಾತಿಯನ್ನು ಹೊಂದಿರುವವರಿಗೆ ಹೋಲಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ 5 ಪಟ್ಟು ಅಧಿಕ ಎಂದು ಅಧ್ಯಯನಗಳು ಹೇಳಿವೆ.

ಪ್ರಾಯ ಹೆಚ್ಚಾದರೆ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಪ್ರಾಯ ಹೆಚ್ಚಾದರೆ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಇನ್ನು ಬಂಜೆತನಕ್ಕೆ ಅಥವಾ ಆರೋಗ್ಯ ಸಮಸ್ಯೆಯಿಂದ ಮಕ್ಕಳು ಹುಟ್ಟಲು ಮಹಿಳೆಯ ವಯಸ್ಸು ಮಾತ್ರವಲ್ಲ, ಗಂಡನ ವಯಸ್ಸು ಕೂಡ ಕಾರಣವಾಗಿರುತ್ತದೆ. ಮಹಿಳೆ ಚಿಕ್ಕ ಪ್ರಾಯದವರಾಗಿದ್ದು ಗಂಡನಿಗೆ ವಯಸ್ಸಾಗಿದ್ದರೆ ಹುಟ್ಟು ಮಕ್ಕಳ ಮಾನಸಿಕ ಸ್ವಾಸ್ಥ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ.

ಉದಾಹರಣೆಗೆ ಸ್ವೀಡನ್‌ನಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಅದರಲ್ಲಿ 1873ರಿಂದ 2001ರ ನಡುವೆ ಹುಟ್ಟಿದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ತಿಳಿದು ಬಂದಿರುವ ಅಂಶವೆಂದರೆ ವಯಸ್ಸು 45 ದಾಟಿದ ತಂದೆಗೆ ಹುಟ್ಟಿದ ಮಕ್ಕಳಲ್ಲಿ ಆಟಿಸಂ, ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ಮತ್ತು ಎಡಿಎಚ್‌ಡಿ ಸಮಸ್ಯೆ ಕಂಡು ಬಂದಿರುವುದು ಈ ಅಧ್ಯಯನದಲ್ಲಿ ತಿಳಿದು ಬಂತು.

ತಂದೆಯ ವಯಸ್ಸು ಹಾಗೂ ಮಕ್ಕಳ ಮಾನಸಿಕ ಆರೋಗ್ಯ

ತಂದೆಯ ವಯಸ್ಸು ಹಾಗೂ ಮಕ್ಕಳ ಮಾನಸಿಕ ಆರೋಗ್ಯ

ವಯಸ್ಸು ಅಧಿಕವಾಗುತ್ತಿದ್ದಂತೆ ಪುರುಷರ ವೀರ್ಯಾಣುಗಳು ಸಾಮಾರ್ಥ್ಯ ಕಡಿಮೆಯಾಗುವುದು. ಅಲ್ಲದೆ ವಯಸ್ಸಾದ ತಂದೆಗೆ ಹುಟ್ಟಿದ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ತೊಂದರೆಯೂ ಕಾಣಿಸಿಕೊಳ್ಳಬಹುದು. ಇಂಥ ಮಕ್ಕಳಿಗೆ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆಯಲು ಸಾಧ್ಯವಾಗುವುದಿಲ್ಲ, ಡ್ರಗ್ಸ್ ಚಟಕ್ಕೆ ಬೀಳುವುದು, ಆತ್ಮಹತ್ಯೆಗೆ ಯತ್ನಿಸುವುದು ಇವೆಲ್ಲಾ ಆ ಮಕ್ಕಳಲ್ಲಿ ಕಂಡು ಬರುತ್ತದೆ ಎಂದು ಆ ಅಧ್ಯಯನ ಹೇಳಿದೆ.

ಪುರುಷರಲ್ಲಿ ವಯಸ್ಸು ಅಧಿಕವಾದರೆ ಹುಟ್ಟು ಮಕ್ಕಳಿಗೆ ತೊಂದರೆ

ಪುರುಷರಲ್ಲಿ ವಯಸ್ಸು ಅಧಿಕವಾದರೆ ಹುಟ್ಟು ಮಕ್ಕಳಿಗೆ ತೊಂದರೆ

ಚಿಕ್ಕ ಪ್ರಾಯದ ಪುರುಷರಿಗೆ ಹೋಲಿಸಿದರೆ ವಯಸ್ಸು 45 ದಾಟಿದ ಪುರುಷರಿಗೆ ಜನಿಸಿದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹಾಗೂ ವಿಜ್ಞಾನಿಗಳು ಹೇಳುತ್ತಾರೆ.

ಆರೋಗ್ಯವಂತ ಮಗುವಿಗಾಗಿ ಫ್ಯಾಮಲಿ ಫ್ಲ್ಯಾನಿಂಗ್

ಆರೋಗ್ಯವಂತ ಮಗುವಿಗಾಗಿ ಫ್ಯಾಮಲಿ ಫ್ಲ್ಯಾನಿಂಗ್

ಫ್ಯಾಮಲಿ ಫ್ಲ್ಯಾನಿಂಗ್ ಮಾಡುವಾಗ ವಯಸ್ಸು ಕೂಡ ಪ್ರಮುಖ ಅಂಶವಾಗಿದೆ ಎಂಬುವುದು ಗಮನದಲ್ಲಿರಲಿ. ಪುರುಷರಾಗಲಿ, ಮಹಿಳೆಯರಾಗಲಿ 35 ವರ್ಷದೊಳಗೆ ಮಗುವಿಗಾಗಿ ಪ್ಲ್ಯಾನಿಂಗ್ ಮಾಡುವುದು ಒಳ್ಳೆಯದು. ಅದರಲ್ಲಿ ಆರೋಗ್ಯವಂತ ಮಗುವನ್ನು ಪಡೆಯಲು 25-30 ವರ್ಷದೊಳಗೆ ಫ್ಯಾಮಲಿ ಫ್ಲ್ಯಾನಿಂಗ್‌ಮಾಡುವುದು ಒಳ್ಳೆಯದು. ಕೆಲವು ವರ್ಷಗಳಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ವಯಸ್ಸು 30-35ರ ಒಳಗೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದರೆ ಮಕ್ಕಳಾಗುವ ಅದರಲ್ಲೂ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು.

English summary

To Get Healthy Baby Which Age Is Best For Men

Men whose age more than 40 took five times longer to conceive than those whose male partners were 25 and younger.
X
Desktop Bottom Promotion