Latest Updates
-
ಕೇರಳದಲ್ಲಿ ಆರೆಂಜ್ ಅಲರ್ಟ್: ಮಳೆಯ ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವ್ಯಾಯಾಮ ಮಾಡಿ -
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಲಿಪ್ಸ್ಟಿಕ್ ಖರೀದಿಸುವಾಗ ಆರೋಗ್ಯಕ್ಕೆ ಹಾನಿ ಮಾಡುವ ಈ ರಾಸಾಯನಿಕ ಅಂಶಗಳಿದೆಯೇ ಪರೀಕ್ಷಿಸಿ
ಲಿಪ್ಸ್ಟಿಕ್.. ಹೆಣ್ಣುಮಕ್ಕಳ ಫೇವರೆಟ್ ಮೇಕಪ್ ವಸ್ತುಗಳಲ್ಲಿ ಒಂದು. ಮಕ್ಕಳಿಂದ ಹಿಡಿದು, ಹಿರಿಯ ಅಜ್ಜಿಯಂದಿರಿಗೂ ಈಗ ಲಿಪ್ಸ್ಟಿಕ್ ಬೇಕೇಬೇಕು. ಯಾವುದೇ ಸಂದರ್ಭ ಇರಲಿ, ಲಿಪ್ಸ್ಟಿಕ್ ಇಲ್ಲದೇ ಹೊರಗೆ ಕಾಲಿಡದೇ ಇರೋರು ಸಾಕಷ್ಟು ಜನ. ಇಷ್ಟು ಇಷ್ಟ ಪಡೋ ಈ ಲಿಪ್ಸ್ಟಿಕ್ ನಿಂದ ನಿಮಗೆ ಅಪಾಯಕಾರಿ ಅಡ್ಡಪರಿಣಾಮಗಳಿವೆ ಎಂದು ಎಂದಾದರೂ ಯೋಚಿಸಿದ್ದಾರಾ?
ಅದರಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನೇರವಾಗಿ ತಲುಪುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಗರ್ಭಿಣಿಯರಂತೂ ಲಿಪ್ಸ್ಟಿಕ್ ಬಳಸುವಾಗ ತುಂಬಾ ಜಾಗರೂಕರಾಗಿಬೇಕು. ಲಿಪ್ಸ್ಟಿಕ್ನಲ್ಲಿ ಕಂಡುಬರುವ ರಾಸಾಯನಿಕಗಳು ಮತ್ತು ಅವುಗಳಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳಿದ್ದೇವೆ.
ಲಿಪ್ಸ್ಟಿಕ್ ನಲ್ಲಿರುವ ರಾಸಾಯನಿಕಗಳು ಹಾಗೂ ಅದರಿಂದ ಉಮಟಾಗುವ ಹಾನಿಯನ್ನು ಈ ಕೆಳಗೆ ನೀಡಲಾಗಿದೆ:

ಈ ಪದಾರ್ಥಗಳನ್ನು ಪರಿಶೀಲಿಸಿ:
ಕೆಲವು ಲಿಪ್ಸ್ಟಿಕ್ ನಲ್ಲಿ ಮ್ಯಾಂಗನೀಸ್, ಕ್ಯಾಡ್ಮಿಯಮ್, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ಎಂಬ ರಾಸಾಯನಿಕಗಳಿರುತ್ತವೆ. ಇವು ನಮ್ಮ ದೇಹದಲ್ಲಿ ಸಂಗ್ರಹವಾದಾಗ ದೊಡ್ಡ ಹಾನಿ ಉಂಟುಮಾಡುತ್ತವೆ. ಲಿಪ್ ಸ್ಟಿಕ್ ಹಚ್ಚಿಕೊಂಡು ಆಹಾರವನ್ನು ತಿನ್ನುವಾಗ, ಅದು ದೇಹಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಲಿಪ್ಸ್ಟಿಕ್ ಖರೀದಿಸುವಾಗ, ಅದರಲ್ಲಿ ಈ ಉತ್ಪನ್ನಗಳು ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಸೀಸ ಮತ್ತು ಪ್ಯಾರಾಬೆನ್:
ಸೀಸವು ಹೆಚ್ಚಿನ ಲಿಪ್ ಸ್ಟಿಕ್ಗಳಲ್ಲಿ ಕಂಡುಬರುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದ್ದು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಲಿಪ್ ಸ್ಟಿಕ್ಗಳಲ್ಲಿ ಅನೇಕ ರೀತಿಯ ಸಂರಕ್ಷಕಗಳನ್ನು ಬಳಸಲಾಗುವುದು. ಒಂದುವೇಳೆ ಅವುಗಳ ಪ್ರಮಾಣ ಹೆಚ್ಚಿದ್ದರೆ ಕ್ಯಾನ್ಸರ್ ಸಮಸ್ಯೆ ಉಂಟಾಗಬಹುದು. ಪ್ಯಾರಾಬೆನ್ ಒಂದು ಸಂರಕ್ಷಕವಾಗಿದ್ದು ಅದು ಕ್ಯಾನ್ಸರ್ಗೆ ಕಾರಣವೆಂದು ಹೇಳಲಾಗುವುದು. ಇದು ವಿಶೇಷವಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಗಳನ್ನು ಉಂಟುಮಾಡಬಹುದು.

ಬಿಸ್ಮತ್ ಆಕ್ಸಿಕ್ಲೋರೈಡ್:
ಬಿಸ್ಮತ್ ಆಕ್ಸಿಕ್ಲೋರೈಡ್ ಅನ್ನು ಲಿಪ್ಸ್ಟಿಕ್ ನಲ್ಲಿ ಸಂರಕ್ಷಕವಾಗಿ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಜೊತೆಗೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ಇದು ವಿವಿಧ ರೀತಿಯ ಅಲರ್ಜಿಯನ್ನು ಸಹ ಉಂಟುಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಲಿಪ್ಸ್ಟಿಕ್ ಬೇಡ:
ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ಮಗುವಿನ ಸುರಕ್ಷತೆಗಾಗಿ ಯಾವಾಗಲೂ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ. ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಯಿದ್ದರೆ ಮಾತ್ರ ಹಚ್ಚಿಕೊಳ್ಳಿ. ಅದು ಕೂಡ, ಕಡಿಮೆ ಬೆಲೆಯ ಲಿಪ್ ಸ್ಟಿಕ್ಗಳನ್ನು ಖರೀದಿಸಬೇಡಿ. ಉತ್ತಮ ಬ್ರಾಂಡ್ ಲಿಪ್ಸ್ಟಿಕ್ ಬಳಸಿ, ಲಭ್ಯವಿದ್ದರೆ ಗಿಡಮೂಲಿಕೆಗಳ ಲಿಪ್ ಸ್ಟಿಕ್ ಆದರೂ ಹಚ್ಚಬಹುದು.

ಈ ಸಲಹೆಗಳನ್ನು ಪಾಲಿಸಿ:
ನಿಮಗೆ ಲಿಪ್ಸ್ಟಿಕ್ ಹಚ್ಚುವುದು ಬಿಡಲು ಸಾಧ್ಯವಿಲ್ಲ ಎಂಬುದು ತಿಳಿದಿದೆ, ಆದರೆ ಜಾಗರೂಕರಾಗಿರಿ. ಹೆಚ್ಚು ರಾಸಾಯನಿಕಗಳು ಡಾರ್ಕ್ ಶೇಡ್ ಲಿಪ್ಸ್ಟಿಕ್ ನಲ್ಲಿ ಹೆಚ್ಚು ಇರುವುದರಿಂದ ಲಿಪ್ಸ್ಟಿಕ್ ಖರೀದಿಸುವಾಗ ಡಾರ್ಕ್ ಶೇಡ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಲಿಪ್ಸ್ಟಿಕ್ ಅನ್ನು ಹಚ್ಚುವ ಮೊದಲು, ತುಪ್ಪವನ್ನು ಲೇಪಿಸಿ. ಇದು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ಬ್ರ್ಯಾಂಡ್ಗಳು ಅಗ್ಗವಾಗಿರಬಹುದು. ಆದರೆ ಅವು ನಿಮಗೆ ಹೆಚ್ಚು ಹಾನಿ ಮಾಡುತ್ತವೆ. ಉತ್ತಮ ಬ್ರಾಂಡ್ಗಳ ಲಿಪ್ ಸ್ಟಿಕ್ ಖರೀದಿಸಿ, ಕೊಳ್ಳುವಾಗ ಅದರ ಪದಾರ್ಥಗಳನ್ನು ಪರಿಶೀಲಿಸಿ.



Click it and Unblock the Notifications
