Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಹಿಳೆಯರ ಆಹಾರ ಕ್ರಮ ಹೀಗಿದ್ದರೆ, ಬಂಜೆತನ ಎಂದೂ ಕಾಡದು....
ಮದುವೆಯಾದ ದಂಪತಿಯ ಮುಂದೆ ಆಗಾಗ ಬರುವ ಪ್ರಶ್ನೆಯೆಂದರೆ ಮಗು ಯಾವಾಗ ಎಂದು? ಸಮಾಜದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವೆನ್ನಬಹುದು. ಮದುವೆಯಾದ ಕೆಲವೇ ತಿಂಗಳಲ್ಲಿ ಮಹಿಳೆ ಗರ್ಭಿಣಿಯಾಗಬೇಕು. ಇಲ್ಲವೆಂದಾದರೆ ಆಕೆಯಲ್ಲಿ ಏನಾದರೂ ಸಮಸ್ಯೆಯಿದೆ ಎನ್ನುವ ಮಾತುಗಳು ಬರುತ್ತದೆ.
ಆದರೆ ಸಮಸ್ಯೆ ಮಹಿಳೆಯಲ್ಲಿ ಮಾತ್ರವಲ್ಲ ಪುರುಷನಲ್ಲೂ ಇರುತ್ತದೆ. ಇದನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ. ದಂಪತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿಯೂ ಅವರಿಗೆ ಮಕ್ಕಳಾಗದೆ ಇದ್ದರೆ ಆಗ ಬಂಜೆತನ ಕಾರಣವೆನ್ನಬಹುದು.
ಇಂದಿನ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಫಲವತ್ತತೆಯ ಕೊರತೆ ಕಂಡುಬರುತ್ತಿದ್ದು ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ ಎಂಬುದಾಗಿ ಅಧ್ಯಯನವೊಂದು ತಿಳಿಸುತ್ತಿದೆ. ಇಂದಿನ ಒತ್ತಡದ ಬದುಕು, ಚಟುವಟಿಕೆ ರಹಿತ ಜೀವನ ಪದ್ಧತಿ, ದುರ್ಬಲ ರೀತಿಯ ಡಯೆಟಿಂಗ್ ಮೊದಲಾದ ಕಾರಣಗಳಿಂದ ಇಂದು ಸ್ತ್ರೀಯರಲ್ಲಿ ಬಂಜೆತನ ಉಂಟಾಗುತ್ತಿದ್ದು, ಅವರಲ್ಲಿ ಸಾಮರ್ಥ್ಯ ಕುಂದುತ್ತಿದೆ.
ಇಂದಿನ ಲೇಖನದಲ್ಲಿ ಗರ್ಭಾವಸ್ಥೆಗೆ ಪೂರಕವಾಗಿರುವ ಪ್ರೊಟೀನ್, ವಿಟಮಿನ್ ಅಂಶಗಳನ್ನು ತನ್ನಲ್ಲಿ ಯಥೇಚ್ಛವಾಗಿ ಹೊಂದಿರುವ ಕೆಲವೊಂದು ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ. ಇವುಗಳು ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಗರ್ಭಾವಸ್ಥೆಗೆ ಸಹಕಾರಿಯಾಗಲಿವೆ. ಇನ್ನು ಪುರುಷರಿಗೂ ಶಕ್ತಿ ಸಾಮರ್ಥ್ಯವನ್ನು ಒದಗಿಸುವಲ್ಲಿ ಈ ಆಹಾರಗಳು ಪ್ರಯೋಜನಕಾರಿಯಾಗಲಿವೆ....

ವಿಟಮಿನ್ ಇ ಯನ್ನು ಒಳಗೊಂಡಿರುವ ಆಹಾರಗಳು
ಸೂರ್ಯಕಾಂತಿ ಎಣ್ಣೆ, ಆಲೀವ್ ಆಯಿಲ್, ವೀಟ್ ಜರ್ಮ್ ಆಯಿಲ್, ನಟ್ಸ್, ಪುದೀನಾ, ಬ್ರಕೋಲಿ ಮೊದಲಾದವುಗಳು ವಿಟಮಿನ್ ಇ ಯನ್ನು ಒಳಗೊಂಡಿವೆ. ಇ ಆಹಾರಗಳು ಮಹಿಳೆಯರಲ್ಲಿ ಗರ್ಭಕಂಠದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಮತ್ತು ಗರ್ಭಕೋಶದಲ್ಲಿ ಫಲೀಕರಣದ ಮೊಟ್ಟೆಗಳನ್ನು ಅಳವಡಿಸಲು ಸಹಕಾರಿಯಾಗಿವೆ.

ವಿಟಮಿನ್ ಸಿ ಆಹಾರಗಳು
ಇದು ಸ್ತ್ರೀ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಕಡಿಮೆ ಪ್ರೊಜೆಸ್ಟರಾನ್ ಮಟ್ಟವನ್ನು ಹೊಂದಿರುವ ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಹಿಳೆಯರು ಬೇಗನೇ ಗರ್ಭಾವತಿಯಾಗಲು ಈ ಆಹಾರಗಳು ಸಹಾಯ ಮಾಡುತ್ತವೆ. ಈ ವಿಟಮಿನ್ ಇರುವ ಆಹಾರಗಳೆಂದರೆ ಕಿತ್ತಳೆ, ನಿಂಬೆಹಣ್ಣು, ಕೋಸುಗಡ್ಡೆ, ಕ್ಯಾನ್‌ಬೆರ್ರಿಗಳು, ಟೊಮೆಟೊ.

ಫೋಲಿಕ್ ಆಸಿಡ್ ಹೊಂದಿರುವ ಆಹಾರಗಳು
ಗರ್ಭಾವಸ್ಥೆಯ ಮೊದಲು ಮತ್ತು ನಂತರ ಈ ಅಂಶವಿರುವ ಆಹಾರವನ್ನು ಗರ್ಭಿಣಿಯರು, ಸ್ತ್ರೀಯರು ಸೇವಿಸಬೇಕು. ಇದು ಫಲವತ್ತತೆಯನ್ನು ಹೆಚ್ಚಿಸಿ ಗರ್ಭಾವಸ್ಥೆಗೆ ಸ್ತ್ರೀಯನ್ನು ಸಜ್ಜುಗೊಳಿಸುತ್ತದೆ. ಫೋಲಿಕ್ ಆಸಿಡ್ ಇರುವ ಆಹಾರಗಳೆಂದರೆ ಬ್ರಕೋಲಿ, ಬೀನ್ಸ್, ಪಾಲಾಕ್ ಇತ್ಯಾದಿ.

ವಿಟಮಿನ್ ಬಿ6 ಆಹಾರಗಳು
ಇದು ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಕಡಿಮೆ ಪ್ರೊಜೆಸ್ಟರಾನ್ ಮಟ್ಟವನ್ನು ಹೊಂದಿರುವ ಮಹಿಳೆಯರು ವಿಟಮಿನ್ ಬಿ6 ಆಹಾರವನ್ನು ಸೇವಿಸುವುದರಿದ ಬೇಗನೇ ಗರ್ಭವತಿಯಾಗಬಹುದಾಗಿದೆ. ವಿಟಮಿನ್ ಬಿ6 ಇರುವ ಆಹಾರ ಪದಾರ್ಥಗಳೆಂದರೆ ಬಾಳೆಹಣ್ಣು, ಧಾನ್ಯಗಳು ಇತ್ಯಾದಿ.

ವಿಟಮಿನ್ ಬಿ 12 ಆಹಾರಗಳು
ಇದು ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಂಡೋತ್ಪತ್ತಿ ಕಡಿಮೆಯಾಗಿರುವ ಮಹಿಳೆಯರಲ್ಲಿ ಈ ವಿಟಮಿನ್ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರ ಪದಾರ್ಥಗಳು ಗರ್ಭಾಶಯದ ಒಳಪದರವನ್ನು ಸುಧಾರಿಸುತ್ತದೆ ಹೀಗಾಗಿ ಫಲವತ್ತಾದ ಮೊಟ್ಟೆಗಳ ಅಳವಡಿಕೆಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರಗಳೆಂದರೆ ಮಾಂಸ, ಮೀನು, ಕೋಳಿ, ಮೊಟ್ಟೆ, ಅಂಗಗಳ ಮಾಂಸ, ಹಾಲಿನ ಉತ್ಪನ್ನಗಳು ಇತ್ಯಾದಿ.

ದಾಳಿಂಬೆ ಜ್ಯೂಸ್
ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ಅನ್ನು ಪ್ರತೀ ದಿನ ಸೇವಿಸಿ.



Click it and Unblock the Notifications











