Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಾಯಿ ಆಗುವ ಮೊದಲು ಹೀಗಿರಲಿ...
ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಹೌದು ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ಆದರೂ ಈ ಅವಧಿಯಲ್ಲಿ ಗರ್ಭಿಣಿಯರು ತೀವ್ರ ತೆರನಾದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಮೊದಲ ಮೂರು ತಿಂಗಳ ಅವಧಿಯು ನಿಜಕ್ಕೂ ಕತ್ತಿಯ ಮೇಲಿನ ನಡಿಗೆಯಿದ್ದಂತೆ.
ಅದರಲ್ಲೂ ಮೂರನೇಯ ತಿಂಗಳ ಅವಧಿಯಲ್ಲಿಯಂತೂ ಇದುವರೆಗೆ ಅನುಭವಕ್ಕೆ ಬರದೇ ಇದ್ದ ಮಗುವಿನ ಇರುವಿಕೆ ಈಗ ನಿಧಾನವಾಗಿ ಗಮನಕ್ಕೆ ಬರತೊಡಗುತ್ತದೆ. ಈ ಸಮಯದಲ್ಲಿಯೇ ಮಗುವಿನ ಹೃದಯ, ಮೂತ್ರಪಿಂಡ, ಕಣ್ಣುಗಳು, ಜನನಾಂಗಗಳು, ಧ್ವನಿಪೆಟ್ಟಿಗೆ ಮೊದಲಾದವುಗಳ ಮೊದಲ ಜೀವಕೋಶಗಳು ರೂಪುಗೊಳ್ಳತೊಡಗುತ್ತವೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ತಾಯಿಗೆ ಅಗತ್ಯವಾಗಿದೆ.
ಪ್ರಥಮವಾಗಿ ಪ್ರತಿ ಗರ್ಭಿಣಿಗೂ ನೀಡುವ ಎಚ್ಚರಿಕೆ ಏನೆಂದರೆ ಯಾವುದೇ ಸಮಯದಲ್ಲಿ ಪಪ್ಪಾಯಿಯನ್ನು ಸೇವಿಸಕೂಡದು. ಏಕೆಂದರೆ ಇದು ಗರ್ಭಪಾತಕ್ಕೆ ನೇರವಾದ ಗುಳಿಗೆಯಾಗಿದೆ. ಇನ್ನುಳಿದಂತೆ ಗರ್ಭಿಣಿ ಅನಾರೋಗ್ಯಕರ ಸಿದ್ಧ ಆಹಾರಗಳು, ಹೊರಗಿನಿಂದ ತಂದ ಸಾಗರ ಉತ್ಪನ್ನಗಳು, ಟಿನ್ ನಲ್ಲಿರುವ ಮೀನಿನ ಖಾದ್ಯಗಳು ಇತ್ಯಾದಿಗಳಿಂದ ದೂರವಿರುವುದೇ ಉತ್ತಮ. ಬನ್ನಿ ಗರ್ಭಾವಸ್ಥೆಯಲ್ಲಿ ಆಹಾರಕ್ರಮ, ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಹೇಗಿರಬೇಕು ಎಂಬುದನ್ನು ಮುಂದೆ ಓದಿ...

ನಿಯಮಿತವಾಗಿ ಬಾದಾಮಿ ಸೇವಿಸಿ
ಬಾದಾಮಿ ಕೆಲವು ಬಾದಾಮಿಗಳನ್ನು ನೀರಿನಲ್ಲಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ನೆನೆಸಿಟ್ಟು ಬಳಿಕ ಸೇವಿಸಬೇಕು. ಇದು ಮಗುವಿನಲ್ಲಿ ಅಲರ್ಜಿಯನ್ನು ಕಡಿಮೆ ಮಾಡುವುದು, ಗರ್ಭಿಣಿಯ ದೇಹದಲ್ಲಿ ನೀರು ತುಂಬಿಕೊಂಡು ರಕ್ತದೊತ್ತಡ ಹೆಚ್ಚಾಗುವ (preeclampsia) ತೊಂದರೆಯನ್ನು ಮತ್ತು ಮಲಬದ್ಧತೆಯಾಗುವ ಸಾಧ್ಯತೆಯಿಂದ ರಕ್ಷಿಸುತ್ತದೆ.

ಸಾಕಷ್ಟು ಎಳನೀರು ಸೇವಿಸಿ
ಎಳನೀರಿನಲ್ಲಿ ಎಲೆಕ್ಟ್ರೋಲೈಟ್‌ಗಳು, ಕ್ಲೊರೈಡ್‌ಗಳು, ಮೆಗ್ನಿಷಿಯಂ, ಕ್ಯಾಲ್ಸಿಯಂ, ರೈಬೊಫ್ಲಾವಿನ್ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರ ಜೊತೆಗೆ ಇದರಲ್ಲಿ ಡಯಟರಿ ಫೈಬರ್‌ಗಳು ಸಹ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಒಂದು ಮಿತವಾದ ಪ್ರಮಾಣದಲ್ಲಿ ಸಕ್ಕರೆ, ಸೋಡಿಯಂ ಮತ್ತು ಪ್ರೋಟಿನ್ ಸಹ ಎಳೆನೀರಿನಲ್ಲಿ ಲಭ್ಯವಿರುತ್ತದೆ. ಗರ್ಭಿಣಿಯಾದ ಮೊದಲ ಮೂರು ತಿಂಗಳಿನಲ್ಲಿ ಎಳನೀರನ್ನು ಸೇವಿಸುವುದರಿಂದ ಮುಂಜಾನೆ ಮಂಕುತನ, ಮಲಬದ್ಧತೆ, ಎದೆ ಉರಿ, ಸುಸ್ತು, ತಲೆ ಸುತ್ತುವಿಕೆ, ನಿರ್ಜಲೀಕರಣವನ್ನು ತಡೆಯಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು.

ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದು ರಕ್ತ ನಾಳಗಳನ್ನು ಹಿಗ್ಗಿಸುವ ಮೂಲಕ ನಿಮ್ಮ ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡುತ್ತದೆ. ಅಲ್ಲದೆ ತಾಜಾ ಬೆಟ್ಟದ ನೆಲ್ಲಿಕಾಯಿಗಳನ್ನು ಸೇವಿಸುವ ಮೂಲಕ ಗರ್ಭಿಣಿಯಾಗಿರುವಾಗ ಎದೆಯುರಿಯನ್ನು ಮತ್ತು ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ರಸ್ತೆಬದಿಯ ತಿಂಡಿಗಳಿಂದ ದೂರವಿರಿ
ಗರ್ಭಿಣಿಯಾಗಿದ್ದಾಗ ಹಸಿವಿನಿಂದಿರುವುದು ತರವಲ್ಲ. ಹಸಿವು ತಾಳಲಾರದೇ ಹೊರಗೆ ಅನಾರೋಗ್ಯಕರ ಆಹಾರ ಸೇವಿಸಿದರೆ ಇದು ಗರ್ಭಿಣಿಯ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲಕರ ಪರಿಣಾಮ ಉಂಟುಮಾಡಬಹುದು. ಅತಿ ಹೆಚ್ಚು ಪೌಷ್ಟಿಕಾಂಶವಿರುವ ಆಹಾರ, ಎನರ್ಜಿ ಡ್ರಿಂಕ್ ಮತ್ತು ಚಾಕಲೇಟುಗಳು, ಭೇಲ್ ಪುರಿ ಮೊದಲಾದ ರಸ್ತೆಬದಿಯ ತಿಂಡಿಗಳು ಎಷ್ಟೇ ಆಸೆ ಉಂಟುಮಾಡಿದರೂ ಇದರ ಪ್ರಲೋಭನೆಗೆ ಒಳಗಾಗದೇ ನೀವೇ ಸ್ವತಃ ಮನೆಯಲ್ಲಿ ತಯಾರಿಸಿದ ಆಹಾರವನ್ನು ಕೈಚೀಲದಲ್ಲಿಟ್ಟುಕೊಂಡು ಹೋದರೆ ಹಸಿವೆಯೂ ನೀಗುತ್ತದೆ ಹಾಗೂ ಆರೋಗ್ಯವೂ ಕೆಡದು.

ಧ್ಯಾನ
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಉದ್ಯೋಗ-ಮನೆಯ ವಾತಾವರಣ, ಹೆರಿಗೆಯ ಕುರಿತು ಭಯ, ಭಾರವನ್ನು ಹೊತ್ತು ತಿರುಗುವ ಆತಂಕ, ಏನಾಗುತ್ತದೆಯೋ, ಅಮ್ಮ ಇದ್ದರೆ ಚೆನ್ನಾಗಿತ್ತು ಎನ್ನುವ ದುಗುಡಗಳೆಲ್ಲಾ ಗರ್ಭಿಣಿಗೆ ಆವರಿಸಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಆದರೆ ಗರ್ಭಾವಸ್ಥೆಯ ಮಾನಸಿಕ ಒತ್ತಡ ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದಲ್ಲ. ಅತಿ ಹೆಚ್ಚಿನ ಒತ್ತಡ ಮಗುವಿನ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ಹುಟ್ಟುವಾಗ ಮಗುವಿನ ತೂಕ ಅತಿ ಕಡಿಮೆ ಇರುತ್ತದೆ. ಅಲ್ಲದೇ ಸಮಯಕ್ಕೂ ಮುನ್ನವೇ ಹೆರಿಗೆಯಾಗಲೂ ಬಹುದು.



Click it and Unblock the Notifications
