Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಗರ್ಭಿಣಿಯಾಗಿರುವಾಗ ಹೃದ್ರೋಗವನ್ನು ನಿಭಾಯಿಸುವುದು ಹೇಗೆ?
ಅಂಕಿ ಅಂಶಗಳ ಪ್ರಕಾರ ವಿಶ್ವದ 4% ಗರ್ಭಿಣಿಯರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಾರಂತೆ. ಒಂದು ಅಂದಾಜಿನ ಪ್ರಕಾರ 10% ಗರ್ಭಿಣಿಯರು ಈ ಸಮಸ್ಯೆಯಿಂದ ಸಾವನ್ನಪ್ಪುತ್ತಾರಂತೆ. ಇದರಲ್ಲಿ ಶೋಚನೀಯ ಸಂಗತಿಯೆಂದರೆ ಬಹುತೇಕ ಗರ್ಭಿಣಿಯರಿಗೆ ಈ ಹೃದ್ರೋಗ ಇರುವ ಸಮಸ್ಯೆ ತಿಳಿದಿದ್ದರು, ಅದನ್ನು ವೈದ್ಯರ ಬಳಿ ತೋರಿಸದೆ ಉದಾಸೀನ ಮಾಡುತ್ತಾರೆ. ವೈದ್ಯರ ಗಮನಕ್ಕೆ ಇದನ್ನು ತಾರದಿರುವ ಕಾರಣಕ್ಕಾಗಿ, ಅವರಿಗೆ ಸರಿಯಾಗಿ ಚಿಕಿತ್ಸೆ ದೊರೆಯದೆ ಅವರ ಜೀವ ಅಪಾಯಕ್ಕೆ ಸಿಲುಕಬಹುದು.

ಆದರೆ ಅದೇ ಸಮಯದಲ್ಲಿ ಹೃದ್ರೋಗದ ಸಮಸ್ಯೆಯಿಂದಾಗಿ ಮಹಿಳೆಯರಲ್ಲಿ ಗರ್ಭಪಾತವು ಸಹ ಆಗಬಹುದು. ಇದೇ ಸಮಯದಲ್ಲಿ ಹೃದ್ರೋಗವನ್ನು ಹೊಂದಿರುವ ಗರ್ಭಿಣಿಯರು ಈ ಸಮಸ್ಯೆಯ ನಡುವೆ ಆರೋಗ್ಯಪೂರ್ಣವಾದ ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡಿರುತ್ತಾರೆ. ಆದರೆ ಅವರು ಈ ಸಮಸ್ಯೆಯನ್ನು ವೈದ್ಯರ ಗಮನಕ್ಕೆ ತಂದು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಬನ್ನಿ ಈ ಸಮಯದಲ್ಲಿ ಕಂಡು ಬರುವ ಹೃದ್ರೋಗವನ್ನು ಹೇಗೆ ನಿಭಯಿಸಬಹುದು ಎಂಬುದಕ್ಕೆ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಗರ್ಭಿಣಿಯರ ಪಾಲಿನ ಸ೦ಜೀವಿನಿ ಸೀತಾಫಲ ಹಣ್ಣಿನ ಮಹತ್ವವೇನು?
ಹಂತ 1: ಗರ್ಭಿಣಿಯಾಗಿರುವಾಗ ಹೃದ್ರೋಗವನ್ನು ನಿಭಾಯಿಸುವುದು ಹೇಗೆ?
1. ಎಕೊ-ಕಾರ್ಡಿಯೊಗ್ರಾಮ್: ಹೃದಯದ ಪ್ರತಿಬಿಂಬವನ್ನು ಪಡೆಯಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ.
2. ಎಲೆಕ್ಟ್ರೋಕಾರ್ಡಿಯೊಗ್ರಾಮ್: ಹೃದಯದ ವಿದ್ಯುತ್ ಚಟುವಟಿಕೆಗಳನ್ನು ಮಾಪನ ಮಾಡಲು ಈ ಪರೀಕ್ಷೆಯನ್ನು ಬಳಸಲಾಗುತ್ತದೆ.
3. ಔಷಧೋಪಚಾರ: ಹೃದಯದ ಸ್ಥಿತಿಯನ್ನು ಸುಧಾರಿಸಲು ನಿಯಮಿತ ಔಷಧೋಪಚಾರಗಳನ್ನು ತಿಳಿಸಲಾಗುತ್ತದೆ. ಗರ್ಭಿಣಿಯರೇ ಎಚ್ಚರ..! ಅಪ್ಪಿತಪ್ಪಿಯೂ ಹಾಗಲಕಾಯಿ ಸೇವಿಸಬೇಡಿ
ಹಂತ 2: ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
1. ಔಷಧೋಪಚಾರ: ಸರಿಯಾದ ಸಮಯಕ್ಕೆ ಅಗತ್ಯ ಔಷಧೋಪಚಾರಗಳನ್ನು ತೆಗೆದುಕೊಳ್ಳಿ, ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
2. ವಿಶ್ರಾಂತಿ: ಹೃದಯದ ಮೇಲೆ ಒತ್ತಡ ಹೆಚ್ಚಾಗದಂತೆ, ಅಗತ್ಯವಾದ ವಿಶ್ರಾಂತಿಯನ್ನು ತೆಗೆದುಕೊಳ್ಳಿ.
3. ತೂಕ: ಅಧಿಕ ತೂಕ ಇರುವವರಲ್ಲಿ ಹೃದ್ರೋಗ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ನಿಮ್ಮ ತೂಕದ ಮೇಲೆ ಗಮನವಿಟ್ಟಿರಿ. ಗರ್ಭಿಣಿಯಾದಾಗ ಆದಷ್ಟು ಎಷ್ಟು ಬೇಕೋ, ಅಷ್ಟು ಮಾತ್ರ ತೂಕ ಹೆಚ್ಚು ಮಾಡಿಕೊಳ್ಳಿ. ಇದಕ್ಕಾಗಿ ನಿಮ್ಮ ವೈದ್ಯರ ನೆರವನ್ನು ಪಡೆಯಿರಿ.
4. ಉದ್ವೇಗ: ಯಾರಿಗೆ ಆಗಲಿ ಉದ್ವೇಗ ಹೆಚ್ಚಾದಷ್ಟು ಅವರ ಹೃದಯವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಉದ್ವೇಗಕ್ಕೆ ಒಳಗಾಗಬೇಡಿ.
5. ಕಿರಿ ಕಿರಿ ಮಾಡುವಂತಹವುಗಳು: ಧೂಮಪಾನ ಮತ್ತು ಮಧ್ಯಪಾನ ಮಾಡುವ ಅಭ್ಯಾಸವಿದ್ದಲ್ಲಿ, ಗರ್ಭಿಣಿಯಾದಾಗ ಆ ಅಭ್ಯಾಸಗಳನ್ನು ಬಿಟ್ಟು ಬಿಡಿ. ಇದರಿಂದ ನಿಮ್ಮ ಮಗು ಮತ್ತು ನಿಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು.



Click it and Unblock the Notifications


