For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಸಮಯದಲ್ಲಿ ತುಳಸಿ ಚಹಾ ಏಕೆ ಮಹತ್ವಪೂರ್ಣ?

|

ತುಳಸಿಯನ್ನು ಪವಿತ್ರ ತುಳಸಿ ಎಂದು ಕರೆಯಲಾಗುತ್ತದೆ. ಸಿಹಿ ಖಾರದ ಸುವಾಸನೆಯುಳ್ಳ ಲವಂಗಕ್ಕೆ ಹತ್ತಿರವಾಗಿರುವ ಮಿಂಟ್ ಕುಟುಂಬದ ಭಾಗವಾಗಿರುವ ಸಸ್ಯವಾಗಿದೆ. ಇದು ತನ್ನ ಮೂಲ ಬೇರನ್ನು ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹೊಂದಿದೆ.

ಇಂದು ಜಗತ್ತಿನ ಹಲವಾರು ಪ್ರದೇಶಗಳಲ್ಲಿ ನಾವು ತುಳಸಿಯನ್ನು ಕಾಣಬಹುದಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಇದನ್ನು ಸೇವಿಸಿದರೆ ತುಂಬಾ ಸಹಾಯವಾಗುತ್ತದೆ. ಸಾಂಪ್ರದಾಯಿಕ ಔಷಧದ ಬದಲಿಗೆ ಇದನ್ನು ಬಳಸಲಾಗುವುದಿಲ್ಲ.

ತನ್ನ ಮತ್ತು ಮಗುವಿನ ಆರೋಗ್ಯವನ್ನು ಕುರಿತು ಹೆಚ್ಚಿನ ಕಾಳಜಿಯ ಬಗ್ಗೆ ಮುತುವರ್ಜಿಯನ್ನು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಕೂಡ ವಹಿಸಬೇಕಾಗುತ್ತದೆ. ತಮ್ಮ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವ ಕೆಲವೊಂದು ಪಾನೀಯಗಳು ಮತ್ತು ಆಹಾರವನ್ನು ತೆಗೆದುಕೊಳ್ಳುವುದು ಕೂಡ ಹಾನಿಕರವಾಗಿರುತ್ತದೆಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಗರ್ಭಿಣಿ ಸ್ತ್ರೀಗೆ ಹೆಚ್ಚು ಶಿಫಾರಸು ಮಾಡಿದ ಪಾನಿಯವೆಂದರೆ ಗಿಡಮೂಲಿಕಾಯುಕ್ತ ತುಳಸಿ ಚಹಾವಾಗಿದೆ. ಇದಕ್ಕೆ ಕಾರಣ ಏನು ಎಂಬುದರ ಕುರಿತು ಕೆಳಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ.

Benefits Of Tulsi Tea During Pregnancy

ನಿರ್ವಷೀಕರಿಸುತ್ತದೆ
ಸೋಂಕುಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ನಿಮ್ಮ ಹೃದಯ ಮತ್ತು ಶ್ವಾಸಕೋಶ ಅಂಗಾಂಶಗಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇರಿಸಬಹುದಾದ ತುಳಸಿಯು ನಿರ್ಷೀಕರಣ ಅಂಶಗಳನ್ನು ತನ್ನಲ್ಲಿ ಹೇರಳವಾಗಿ ತುಂಬಿಕೊಂಡಿದೆ.

ಕೆಫೇನ್‌ನಿಂದ ಮುಕ್ತ
ತಮ್ಮ ಆಹಾರ ಪದ್ಧತಿಯಿಂದ ಸಂಪರ್ಣವಾಗಿ ಕೆಫೇನ್ ಅನ್ನು ತ್ಯಜಿಸುವಂತೆ ಗರ್ಭಿಣಿ ಸ್ತ್ರೀಯರಿಗೆ ಸೂಚನೆ ನೀಡಲಾಗುತ್ತದೆ. ತುಳಸಿಯು ಕೆಫೇನ್ ಅಂಶವನ್ನು ಒಳಗೊಂಡಿಲ್ಲವಾದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಕೂಡ ಇದನ್ನು ಸೇವಿಸಬಹುದಾಗಿದೆ.

ಹೊಸ ತಾಯಂದಿರು ಮಾಡುವ 6 ದೊಡ್ಡ ತಪ್ಪುಗಳು

ಮುಕ್ತ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತದೆ
ಮುಕ್ತ ರಾಡಿಕಲ್‌ಗಳ ಫಲಿತಾಂಶದಿಂದ ಉಂಟಾಗುವ ರೋಗಗಳಿಂದ ದೇಹವನ್ನು ಕಾಪಾಡುವ ಉತ್ಕರ್ಷಣ ನಿರೋಧಕಗಳಿಂದ ತುಳಸಿಯು ಸಂಪೂರ್ಣವಾಗಿದೆ. ಇದು ಮುಕ್ತ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತದೆ ಇದರಿಂದಾಗಿ, ರೋಗಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆ ಬಲಯುತಗೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಸಂಧಿ ನೋವಿನಿಂದ ಮುಕ್ತಿ
ಗರ್ಭವಾಸ್ಥೆಯಲ್ಲಿ ಸಂಧಿ ನೋವು, ಸ್ನಾಯುಗಳ ಸೆಳೆತ ಸಾಮಾನ್ಯವಾಗಿರುತ್ತದೆ. ಆದರೆ ಇದಕ್ಕೆ ಭಯಪಡದಿರಿ ನಿತ್ಯವೂ ತುಳಸಿ ಚಹಾವನ್ನು ಸೇವಿಸುವುದು ನಿಮ್ಮ ಮೂಳೆಗಳ ಮತ್ತು ಸ್ನಾಯುಗಳ ಬಲಹೀನತೆಯನ್ನು ಸರಿಪಡಿಸಿ ಅದನ್ನು ಸುದೃಢಗೊಳಿಸುತ್ತದೆ. ಸಾಂಪ್ರದಾಯಿಕ ಔಷಧದ ಬದಲಿಗೆ ತುಳಸಿಯನ್ನು ಬಳಸುತ್ತಿಲ್ಲ ಎಂಬುದನ್ನು ನೀವು ಖಾತ್ರಿಪಡಿಸಿಕೊಳ್ಳುವುದು ಅವಶ್ಯಕವಾಗಿದೆ.

ಒತ್ತಡರಹಿತ
ಗರ್ಭಾವಸ್ಥೆ ಎನ್ನುವುದು ಒತ್ತಡಪೂರ್ಣ ಸಮಯವಾಗಿದ್ದು ಗರ್ಭಿಣಿ ಸ್ತ್ರೀಯರು ಆದಷ್ಟು ಒತ್ತಡವನ್ನು ನಿವಾರಿಸುವ ವಿಧಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಆವಶ್ಯಕವಾಗಿದೆ. ತುಳಸಿ ಚಹಾದ ಸೇವನೆ ಇದರಲ್ಲಿ ಒಂದು ವಿಧಾನವಾಗಿದೆ. ಇದನ್ನು ಸೇವಿಸುವುದರಿಂದ, ಇದು ಸಂತೋಷಕರವಾದ ಹಾರ್ಮೋನು ಸೆರೋಟಿನ್ ಅನ್ನು ದೇಹದಾದ್ಯಂತ ಬಿಡುಗಡೆಗೊಳಿಸುತ್ತದೆ, ಇದರಿಂದ ಒತ್ತಡದ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಶಾಂತಗೊಳಿಸುವ ಪ್ರವೃತ್ತಿ ಕೂಡ ತುಳಸಿಗಿದೆ.

ತುಳಸಿ ಚಹಾವನ್ನು ತಯಾರಿಸುವುದು ಹೇಗೆ
ಒಂದು ಕಪ್‌ನಷ್ಟು ತುಳಸಿ ಚಹಾವನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಕೆಲವರ ಮನೆಯಲ್ಲಿ ಧಾರ್ಮಿಕ ನಂಬಿಕೆಗಳಿಗಾಗಿ ಪೂಜೆ ಪುನಸ್ಕಾರಕ್ಕಾಗಿ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ತುಳಸಿ ಗಿಡವನ್ನು ತಮ್ಮ ಮನೆಗಳಲ್ಲಿ ಹೊಂದಿರದೇ ಇರುವವರು ಪೂರ್ವ ಪ್ಯಾಕೇಜ್ ಮಾಡಿದ ಅಥವಾ ಒಣಗಿದ ತುಳಸಿಯನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈ ಚಹಾವನ್ನು ತಯಾರಿಸಲು, ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ ಮತ್ತು ತುಳಸಿ ಚಹಾದ ಬ್ಯಾಗ್ ಅನ್ನು ಇದಕ್ಕೆ ಮುಳುಗಿಸಿ. ಐದು ನಿಮಿಷಗಳ ಕಾಲ ಇದನ್ನು ಹಾಗೆಯೇ ಇರಿಸಿ. ಪೂರ್ವವಾಗಿ ಪ್ಯಾಕ್ ಮಾಡಿದ ಚಹಾವನ್ನು ನೀವು ಬಳಸುತ್ತಿಲ್ಲವೆಂದಾದಲ್ಲಿ, ತಾಜಾ ತುಳಸಿ ಎಲೆಗಳನ್ನು ಕಿತ್ತುಕೊಳ್ಳಿ ಮತ್ತು ಇದನ್ನು ಕಪ್‌ನಷ್ಟು ನೀರಿನಲ್ಲಿ ಕವರ್ ಮಾಡಿಕೊಳ್ಳಿ. ಎರಡು ನಿಮಿಷಗಳಷ್ಟು ಕಾಲ ಈ ಎಲೆಗಳು ನೀರಿನಲ್ಲಿರಲಿ.

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

ನೀವು ತುಳಸಿ ಚಹಾವನ್ನು ಸೇವಿಸಬೇಕೇ ಬೇಡವೇ ಎಂದು ನಿಮ್ಮ ವೈದ್ಯರಲ್ಲಿ ಕೇಳುವ ಆವಶ್ಯಕತೆಯಿಲ್ಲ. ಏಕೆಂದರೆ ಅತ್ಯವಶ್ಯಕ ಗಿಡಮೂಲಿಕಾ ಗುಣಗಳನ್ನು ತನ್ನಲ್ಲಿ ಯಥೇಚ್ಛವಾಗಿ ಹೊಂದಿರುವ ತುಳಸಿಯು ಪರಿಪೂರ್ಣ ಮತ್ತು ಪ್ರಯೋಜನಕಾರಿ ಔಷಧವಾಗಿದೆ.

English summary

Benefits Of Tulsi Tea During Pregnancy

Tulsi, which is also known as holy basil, is a part of the mint family that is known for having a sweet, spicy fragrance very close to that of clove. Every pregnant woman must take care of herself to ensure that her baby is born without any to her health or to that of the baby.
X
Desktop Bottom Promotion