Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಅವಧಿಗೆ ಮುನ್ನ ಹೆರಿಗೆಯಾಗದಂತೆ ತಡೆಯುವುದು ಹೇಗೆ?
ಅವಧಿಗೆ ಮುನ್ನ ಹೆರಿಗೆಯಾದರೆ ಅಂತಹ ಮಗು (pre mature baby) 9 ತಿಂಗಳಿನಲ್ಲಿ ಹುಟ್ಟಿದ ಮಗುವಿನಷ್ಟು ಆರೋಗ್ಯದಿಂದ ಕೂಡಿರುವುದಿಲ್ಲ. ಅವಧಿಗೆ ಮುನ್ನ ಹುಟ್ಟಿದ ಕೆಲವು ಮಕ್ಕಳಷ್ಟೇ ಬದುಕುತ್ತವೆ. ಅಬಾರ್ಷನ್, ಅವಧಿಗೆ ಮುನ್ನ ಹೆರಿಗೆ ಈ ರೀತಿ ಸಮಸ್ಯೆ ಉಂಟಾಗದಿರಲು ಗರ್ಭಿಣಿಯರು ತಮ್ಮ ಕೆಲಸ, ಮಾನಸಿಕ ಸ್ಥಿತಿ, ಆಹಾರಕ್ರಮ ಇವುಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು.
ಅಧಿಕ ಮಾನಸಿಕ ಒತ್ತಡ, ದೇಹದಲ್ಲಿ ವಿಟಮಿನ್, ಒಮೆಗಾ 3 ಇವುಗಳ ಕೊರತೆ , ಬಿದ್ದರೆ, ಹೊಟ್ಟೆಗೆ ಪೆಟ್ಟಾದರೆ , ಅಧಿಕ ಭಾರ ಹೊತ್ತರೆ, ರಕ್ತದೊತ್ತಡ ಹೆಚ್ಚಾದರೆ ಅವಧಿಗೆ ಮುನ್ನ ಹೆರಿಗೆ ನೋವು ಕಾಣಿಸಿಕೊಳ್ಳಬಹುದು.
ಅವಧಿಗೆ ಮುನ್ನ ಹೆರಿಗೆ ನೋವು ಬರದಿಲು ಗರ್ಭಿಣಿಯರು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

ವಿಟಮಿನ್ಸ್
ಕ್ಯಾಲ್ಸಿಯಂ, ವಿಟಮಿನ್ ಕೆ, ಫಾಲಿಕ್ ಈ ಪೋಷಕಾಂಶಗಳಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಪೋಷಕಾಂಶಗಳ ಕೊರತೆ ಉಂಟಾದರೆ ಅವಧಿಗೆ ಮುನ್ನ ಮಗು ಹುಟ್ಟುತ್ತದೆ.

ಒಮೆಗಾ 3 ಕೊಬ್ಬಿನಂಶ
ಒಮೆಗಾ 3 ಸಮುದ್ರ ಆಹಾರಗಳಲ್ಲಿ ಹೆಚ್ಚು ಇರುತ್ತದೆ. ಒಮೆಗಾ 3 ಕೊಬ್ಬಿನಂಶ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಹಲ್ಲುಗಳಲ್ಲಿ ತೊಂದರೆ
ಗರ್ಭಿಣಿಯರಿಗೆ ಹಲ್ಲುಗಳಲ್ಲಿ ತೊಂದರೆ ಅಥವಾ ನೋವು ಕಾಣಿಸುವುದು ಅವಧಿಗೆ ಮುನ್ನ ಹೆರಿಗೆ ನೋವು ಕಾಣಿಸಿಕೊಳ್ಳುವುದರ ಲಕ್ಷಣವಾಗಿದೆ. ಆದ್ದರಿಂದ ಹಲ್ಲುಗಳಲ್ಲಿ ತೊಂದರೆ ಕಾಣಿಸಿದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ.

ನೀರಿನಂಶ
ಗರ್ಭಿಣಿಯರು 8-9 ಗ್ಲಾಸ್ ನೀರು, ಜ್ಯೂಸ್ ಗಳನ್ನು ಕುಡಿಯಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅವಧಿಗೆ ಮುನ್ನ ಹೆರಿಗೆ ನೋವು ಕಾಣಿಸಿಕೊಳ್ಳುವುದು.

ಮೂತ್ರ ವಿಸರ್ಜನೆ
ಗರ್ಭಿಣಿಯರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದೆನಿಸುತ್ತದೆ. ಹೀಗೆ ಅನಿಸಿದ ತಕ್ಷಣ ಮೂತ್ರವಿಸರ್ಜನೆಗೆ ಹೋಗಿ. ಮೂತ್ರವನ್ನು ತಡೆ ಹಿಡಿಯುವುದು ಒಳ್ಳೆಯದಲ್ಲ. ಮೂತ್ರವನ್ನು ತಡೆ ಹಿಡಿಯುವ ಅಭ್ಯಾಸದಿಂದ ಅವಧಿಗೆ ಮುನ್ನ ಹೆರಿಗೆ ನೋವು ಕಾಣಿಸಿಕೊಳ್ಳುವುದು.

ಆಗಾಗ ತಿನ್ನಿ
ತುಂಬಾ ಹೊಟ್ಟೆ ಹಸಿದುಕೊಂಡು ಇರಬಹುದು. ಪೋಷಕಾಂಶವಿರುವ ಆಹಾರವನ್ನು ಮಿತಿಯಲ್ಲಿ ಆಗಾಗ ತಿನ್ನಿ. ಹೊಟ್ಟೆ ಹಸಿದುಕೊಂಡು ಇದ್ದರೆ ಯೂಟ್ರಸ್ ಮೇಲೆ ಒತ್ತಡ ಬಿದ್ದು ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ.

ಪಪ್ಪಾಯಿ
ಪಪ್ಪಾಯಿ, ಪೈನಾಪಲ್ ಹಣ್ಣುಗಳನ್ನು ಗರ್ಭಿಣಿಯರು ಮತಿನ್ನಬಾರದು. ಇವುಗಳಲ್ಲಿರುವ ರಾಸಾಯನಿಕಗಳು ಅವಧಿಗೆ ಮುನ್ನ ಹೆರಿಗೆ ನೋವು ಬರುವಂತೆ ಮಾಡುತ್ತವೆ. ಆದ್ದರಿಂದ ಗರ್ಭಿಣಿಯರು ಈ ಆಹಾರಗಳಿಂದ ದೂರವಿರಬೇಕು.

ಭಾರದ ವಸ್ತುಗಳನ್ನು ಎತ್ತಬೇಡಿ
ಭಾರದ ವಸ್ತುಗಳನ್ನು ಎತ್ತಿದಾಗ ಯೂಟ್ರಸ್ ಮೇಲೆ ಒತ್ತಡ ಬಿದ್ದು ಹೆರಿಗೆ ನೋವು ಕಾಣಿಸಿಕೊಳ್ಳುವುದು. ಆದ್ದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುವಂತೆ ಯಾವುದೇ ಭಾರದ ವಸ್ತುಗಳನ್ನು ಎತ್ತಲು ಹೋಗಬಾರದು.

ಅಧಿಕ ತೂಕ
ಗರ್ಭಿಣಿಯಾದ ಮೇಲೆ ದೇಹದ ತೂಕ ಸ್ವಲ್ಪ ಹೆಚ್ಚಾಗುತ್ತದೆ. ಆದರೆ ಮಿತಿ ಮೀರಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ದೇಹದ ತೂಕ ಹೆಚ್ಚಾದರೆ ಅವಧಿ ಮುನ್ನ ಹೆರಿಗೆಯಾಗುವಿರಿ. ಆದ್ದರಿಂದ ಗರ್ಭಿಣಿಯರು ತಮ್ಮ ದೇಹದ ತೂಕದ ಕಡೆ ಕೂಡ ಗಮನ ಕೊಡಬೇಕು.



Click it and Unblock the Notifications
