Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಗರ್ಭಿಣಿಯರ ಸುಸ್ತು ಹೋಗಲಾಡಿಸುವ ಆಹಾರಗಳಿವು
ಗರ್ಭಾವಸ್ಥೆಯಲ್ಲಿ ಆಯಾಸವಾಗುವುದು ಸರ್ವೇ ಸಾಮಾನ್ಯ. ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳ ಕಾಲ ಮಹಿಳೆಯಲ್ಲಿ ನಿಶ್ಯಕ್ತಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅದರಲ್ಲೂ ತುಂಬಾ ತಡವಾಗಿ ಗರ್ಭಧರಿಸಿದ ಸ್ತ್ರೀಯಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ!
ಕೆಲವರಿಗೆ ಮೂರು ತಿಂಗಳ ನಂತರ ಆಯಾಸದ ಸಮಸ್ಯೆ ಕೊಂಚ ಕಡಿಮೆಯಾಗಬಹುದು. ಆದರೆ ಇನ್ನೂ ಕೆಲವರಲ್ಲಿ ಮಗು ಜನನವಾಗುವವರೆಗೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದ್ದಂತೆ ತೂಕ ಹೆಚ್ಚಾಗಿ ಆಗಲೂ ಇನ್ನಷ್ಟು ಆಯಾಸ, ಸುಸ್ತಿನ ಸಮಸ್ಯೆ ಹೆಚ್ಚಾಗಬಹುದು.
ಕೆಲವರಲ್ಲಿ ಬೆಳಿಗ್ಗೆ ಏಳುವುದಕ್ಕೇ ಕಷ್ಟವಾಗಬಹುದು. ಅಥವಾ ಮಧ್ಯಾಹ್ನದ ಸಮಯದಲ್ಲಿ ಸುಸ್ತು ಹೆಚ್ಚಾಗಬಹುದು. ಆದ್ದರಿಂದ ನೀವು ದಿನವೂ ಬಳಸುವ ಆಹಾರಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಉತ್ತಮ ಆಹಾರಗಳನ್ನು ಸೇವಿಸಿದರೆ ಖಂಡಿತವಾಗಿಯು ಸ್ವಲ್ಪಮಟ್ಟಿಗೆ ಗರ್ಭಾವಸ್ಥೆಯ ನಿಮ್ಮ ಆಯಾಸಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಕೆಂಪು ಮೆಣಸು: ಇದು ನಿಮ್ಮ ದೇಹದ ಪ್ರಕ್ರಿಯೆ ಸುಲಭವಾಗಿಸುವುದು ಮಾತ್ರವಲ್ಲದೇ, ನಿಮ್ಮ ದೇಹದ ಶಾಖ ಉತ್ಪಾದನೆ ಮತ್ತು ಆಮ್ಲಜನಕ ಸೇವನೆ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ನೈಸರ್ಗಿಕ ಶಕ್ತಿ ವರ್ಧಕವಾಗಿ ವರ್ತಿಸುತ್ತದೆ. ಅಲ್ಲದೇ ನಿಮ್ಮ ದೇಹಕ್ಕೆ ಬೇಕಾದ ಜೀವಸತ್ವ ಸಿಯನ್ನು ಸಹ ಹೊಂದಿದೆ.
ಬೆರ್ರಿಹಣ್ಣುಗಳು: ಬೆರ್ರಿಹಣ್ಣುಗಳು ನಿಮ್ಮ ದೇಹದಲ್ಲಿ ಎನರ್ಜಿಯನ್ನು ಹೆಚ್ಚಿಸಬಲ್ಲ ಅತ್ಯುತ್ತಮ ಹಣ್ಣುಗಳು. ಇದು ಉತ್ತಮ ಉತ್ಕರ್ಷಣ ನಿರೋಧಕ ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಇತರ ಹಣ್ಣುಗಳಿಗಿಂತ ಭಿನ್ನವಾಗಿದ್ದು, ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
ಡಾರ್ಕ್ ಚಾಕಲೇಟ್ ಗಳು: ಡಾರ್ಕ್, ಚಾಕಲೇಟ್ ಗಳು ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳನ್ನು ಸಂಪೂರ್ಣವಾಗಿ ಹೊಂದಿವೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಾಕಲೇಟ್ ಗಳಲ್ಲಿರುವ ಪಾಲಿಫಿನೋಲ್ ಗಳು ಸಂತೋಷ-ಉತ್ತೇಜಿಸುವ ರಾಸಾಯನಿಕ ಸಿರೊಟೋನಿನ್ ನ್ನು ಹೆಚ್ಚಿಸಿ ಆಯಾಸ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆವಕಾಡೊ: ಆವಕಾಡೊಗಳು ನಿಧಾನವಾಗಿ ಬಿಡುಗಡೆ ಮಾಡುವ ಶಕ್ತಿಯ ಒಂದು ಉತ್ತಮ ಮೂಲವಾಗಿದೆ, ಅಂದರೆ ಇದು ಹಠಾತ್ತನೆ ಉಂಟಾಗುವ ಕುಸಿತ, ಹೃದಯ ಬಡಿತ ಹೆಚ್ಚುವುದು ಇಂತಹ ಸಮಸ್ಯೆಗಳನ್ನು ತಗ್ಗಿಸುತ್ತದೆ. ಅವಕಾಡೊವಿನಲ್ಲಿ ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಹಣ್ಣುಗಳಿಗಿಂತ ಹೆಚ್ಚು ಫೈಬರ್ ಅಂಶವಿರುತ್ತದೆ. ಇಡೀ ಆವಕಾಡೊವಿನಲ್ಲಿ ಗೋಧಿ ಕಡಿ ಅಥವಾ ಹೊಟ್ಟು ಧಾನ್ಯಗಳಿಗಿಂತ ಅಧಿಕ 14 ಗ್ರಾಂ ಫೈಬರ್ ಅಂಶವಿದೆ. ಮತ್ತು ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
ಬಾಳೆಹಣ್ಣುಗಳು: ಬಾಳೆಹಣ್ಣುಗಳು ಜೀವಸತ್ವಗಳು, ಖನಿಜಗಳು, ಮತ್ತು ಕಾರ್ಬೋಹೈಡ್ರೇಟ್ ಗಳು ದಣಿವು ನಿವಾರಿಸಲು ತ್ವರಿತ ಶಕ್ತಿಯನ್ನು ಬಿಡುಗಡೆಗೊಳಿಸಿ ಮದ್ಯಾಹ್ನದ ಸುಸ್ತನ್ನು ಹೋಗಲಾಡಿಸುತ್ತದೆ. ಇದು ಆಯಾಸ, ಸ್ನಾಯು ಸೆಳೆತ ಮತ್ತು ಡೀಹೈಡ್ರೇಶನ್ ಹೋಗಲಾಡಿಸುವ ಪೊಟಾಷ್ಯಿಯಂನ ಮಹಾನ್ ಮೂಲವಾಗಿದೆ.
ನಿಂಬೆಹಣ್ಣುಗಳು: ವಿಟಮಿನ್ ಸಿ ಅಂಶವನ್ನು ಹೊಂದಿರುವ ನಿಂಬೆಹಣ್ಣುಗಳು ಅತ್ಯುತ್ತಮ ಶಕ್ತಿ ವರ್ಧಕಗಳು. ನಿಂಬೆಹಣ್ಣಿನ ರಸವನ್ನು ಬಿಸಿ ನೀರು ಅಥವಾ ತಂಪಾದ ನೀರಿನಲ್ಲಿ ಮಿಶ್ರಣಮಾಡಿ ಸೇವಿಸಿದರೆ ದೇಹದಲ್ಲಿ ಹೈಡ್ರೇಟ್ ಮತ್ತು ಆಕ್ಸಿಜೀರ್ಕರಣವನ್ನು ಸರಾಗಗೊಳಿಸಿ ಆಯಾಸವನ್ನು ನೀಗಿಸಿ ಶಕ್ತಿಯನ್ನು ಹೆಚ್ಚಿಸುತ್ತದೆ.
ವಾಲ್ ನಟ್ಸ್ / ಅಕ್ರೋಡ: ವಾಲ್ ನಟ್ಸ್, ಒಮೆಗಾ -3 ಕೊಬ್ಬಿನ ಆಮ್ಲಗಳ ಒಂದು ಉತ್ತಮ ಮೂಲವಾಗಿದೆ. ಇದು ನಿಮ್ಮ ದಣಿವಿನ ಭಾವನೆಯನ್ನು ಕಡಿಮೆಗೊಳಿಸಬಹುದು. ಇದನ್ನು ಬೆಳಗಿನ ಸಮಯದಲ್ಲಿ ಸೇವಿಸಿ ಅಥವಾ ಲಘು ಆಹಾರವಾಗಿ ದಿನವಿಡಿ ಸೇವಿಸಬಹುದು.
ಇಂತಹ ಹಲವು ಉತ್ತಮ ಆಹಾರಗಳು ಗರ್ಭಿಣಿ ಸ್ತ್ರೀಯ ಆಯಾಸ, ಸುಸ್ತನ್ನು ತುಸು ನಿವಾರಿಸುವಲ್ಲಿ ಸಹಾಯಕವಾಗಬಹುದು.



Click it and Unblock the Notifications