Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೆರಿಗೆಯ ನಂತರ ಅವಶ್ಯಕವಾದ ವಿಟಮಿನ್ಸ್
ಗರ್ಭಿಣಿಯಾಗಿರುವಾಗ ಕಬ್ಬಿಣದಂಶ, ಕ್ಯಾಲ್ಸಿಯಂ, ಪ್ರೊಟೀನ್, ಫಾಲಿಕ್ ಆಸಿಡ್ ಈ ರೀತಿಯ ಅಂಶಗಳು ಎಷ್ಟು ಮುಖ್ಯವೋ ಅದೇ ರೀತಿ ಹೆರಿಗೆಯಾದ ನಂತರ ಕೂಡ ಕೆಲವೊಂದು ವಿಟಮಿನ್ ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಖಿನ್ನತೆ ಕಾಣಿಸುವುದು. ಬೆನ್ನು ನೋವು, ಸೊಂಟ ನೋವಿನಂತಹ ಕಾಯಿಲೆಗಳು ಕಂಡು ಬರುತ್ತವೆ.
ಮಗುವಿಗೆ ಎದೆ ಹಾಲು ಕುಡಿಯುವವರೆಗೆ ಅಧಿಕ ಪೋಷಕಾಂಶದ ಅಗತ್ಯವಿರುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ತಾಯಿ ತಿನ್ನಬೇಕಾಗುತ್ತದೆ. ಅದರಲ್ಲೂ ಈ ಕೆಳಗಿನ ವಿಟಮಿನ್ ಗಳಿರುವ ಆಹಾರದ ಕಡೆ ಹೆಚ್ಚು ಗಮನ ಕೊಡಬೇಕು.

ವಿಟಮಿನ್ ಬಿ 9: ಈ ವಿಟಮಿನ್ ಇರುವ ಮಾತ್ರೆಯನ್ನು ಗರ್ಭಿಣಿಯರು ಮಗು ಆರೋಗ್ಯಕರವಾಗಿ ಬೆಳವಣಿಗೆಯಾಗಲು ತಿನ್ನಬೇಕು. ಹೆರಿಗೆಯ ನಂತರ ಸ್ವಲ್ಪ ಕಾಲದವರೆಗೆ ಈ ಮಾತ್ರೆಯನ್ನು ತಿನ್ನಿ. ಇದರಿಂದ ಬಾಣಂತಿಯರ ಆರೋಗ್ಯ ವೃದ್ಧಿಸುವುದು.
ವಿಟಮಿನ್ ಎ: ಹೆರಿಗೆಯ ನಂತರ ಮಹಿಳೆಯರಲ್ಲಿ ತುಂಬಾ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಕೂದಲು ಉದುರುವುದನ್ನು ತಡೆಯಲು ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಬೇಕು.
ವಿಟಮಿನ್ ಸಿ: ಈ ವಿಟಮಿನ್ ಎದೆ ಹಾಲು ಕಮೊಡುತ್ತಿರುವ ತಾಯಿಗೆ ಅವಶ್ಯ. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಡಿ: ಹೆರಿಗೆಯ ಸಮಯದಲ್ಲಿ ತುಂಬಾ ಕ್ಯಾಲ್ಸಿಯಂ ನಷ್ಟವಾಗುತ್ತದೆ. ಹೆರಿಗೆಯ ನಂತರ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ಕ್ಯಾಲ್ಸಿಯಂ ಜೊತೆ ವಿಟಮಿನ್ ಡಿ ಇರುವ ಆಹಾರ ತಿನ್ನಬೇಕು. ಏಕೆಂದರೆ ವಿಟಮಿನ್ ಡಿ ಕೊರತೆ ಉಂಟಾದರೆ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದಿಲ್ಲ.
ವಿಟಮಿನ್ ಇ: ಇದು ಜೀವ ಕಣದಲ್ಲಿ ಹಾನಿ ಉಂಟಾಗಿದ್ದರೆ ಅವುಗಳನ್ನು ಸರಿಪಡಿಸುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.



Click it and Unblock the Notifications
