Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಸಿಸೇರಿಯನ್ ನಂತರ ಪೋಷಣೆ ಹೇಗಿರಬೇಕು?

ಹೆರಿಗೆ ನಂತರ 2 ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳುವುದು ಅನಿವಾರ್ಯ. ಇದರ ಹೊರತಾಗಿಯೂ ಸಿಸೇರಿಯನ್ ನಂತರ ಇನ್ನಿತರ ಕಾಳಜಿ ಮಾಡಬೇಕಾಗುತ್ತದೆ. ಅದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ.
ಸಿಸೇರಿಯನ್ ನಂತರ ಕಾಳಜಿ ಹೇಗೆ?
* ಸಿಸೇರಿಯನ್ ಗಾಯ: ಸಿಸೇರಿಯನ್ ಹೆರಿಗೆ ಮಾಡಿದಾಗ ಹೊಲಿಗೆ ಹಾಕುವುದರಿಂದ ಆ ಗಾಯ ಮಾಸಲು ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ವೈದ್ಯರು ಸೂಚಿಸಿದಂತೆ ಕೆಲವು ದಿನ ಸ್ನಾನವನ್ನು ಮಾಡಬಾರದು. ಗಾಯಕ್ಕೆ ನೀರು ಬಿದ್ದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗಾಯ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಈ ಸಮಯದಲ್ಲಿ ಹೆಚ್ಚು ಬಿಗಿ ಬಟ್ಟೆಗಳನ್ನು ಧರಿಸಬಾರದು. ಕಾಟನ್ ಬಟ್ಟೆಗಳನ್ನು ಧರಿಸಿದರೆ ಉತ್ತಮ.
* ಡ್ರೆಸಿಂಗ್: ಸಿಸೇರಿಯನ್ ನಂತರ ಸ್ನಾನ ಮಾಡುವುದು ಸ್ವಲ್ಪ ಕಷ್ಟವೆನಿಸುತ್ತದೆ. ಆದರೆ ಗಾಯಕ್ಕೆ ವಾರಕ್ಕೊಮ್ಮೆ ಡ್ರೆಸಿಂಗ್ ಮಾಡಿಸಿಕೊಳ್ಳಬೇಕು. ಹೊಲಿಗೆ ತೆಗೆದ ನಂತರ ವೈದ್ಯರು ಸ್ನಾನ ಮಾಡಲು ಸಲಹೆ ನೀಡಿದರೆ, ಸ್ನಾನ ಮಾಡಿದ ನಂತರ ಹತ್ತಿಯಿಂದ ಅಥವಾ ಹತ್ತಿ ಬಟ್ಟೆಯಿಂದ ಗಾಯದ ಜಾಗವನ್ನು ನಿಧಾನಕ್ಕೆ ಒರೆಸಿಕೊಳ್ಳಬೇಕು.
* ನಿಧಾನ ನಡಿಗೆ: ಸಿಸೇರಿಯನ್ ಆದ ಕೆಲವು ದಿನಗಳ ತನಕ ನಿಧಾನವಾಗಿ ನಡೆಯಬೇಕು. ಇದು ತುಂಬಾ ಮುಖ್ಯ. ತುಂಬಾ ಜೋರಾಗಿ ನಡೆಯಬಾರದು. ಸಿಸೇರಿಯನ್ ಆದ 4-6 ವಾರಗಳವರೆಗೂ ಜಾಗರೂಕವಾಗಿ ನಡೆಯಬೇಕು.
* ಆಹಾರ ನಿಯಮ: ಸಮತೋಲನ ಆಹಾರದ ಹೊರತಾಗಿಯೂ ವಿಟಮಿನ್ ಸಿ ಹೆಚ್ಚಿರುವ ಆಹಾರ ಈ ಸಮಯದಲ್ಲಿ ಹೆಚ್ಚು ಅವಶ್ಯಕವಿರುತ್ತದೆ. ಇದು ಗಾಯ ಬೇಗ ಗುಣವಾಗಲು ಸಹಾಯ ಮಾಡುತ್ತದೆ. ಬ್ರೊಕೊಲಿ, ಆಸ್ಪರಾಗಸ್, ಪಾಲಾಕ್, ಮೊಳಕೆ ಕಾಳುಗಳು, ಬಟಾಣಿ, ಕಿತ್ತಳೆ, ದ್ರಾಕ್ಷಿ ಮುಂತಾದುವು ಇರಲಿ. ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ಕನಿಷ್ಠ 20 ದಿನಗಳವರೆಗಾದರೂ ದೂರವಿಡಬೇಕು. 6-8 ತಿಂಗಳು ಹೆಚ್ಚು ಭಾರದ ಪದಾರ್ಥಗಳನ್ನು ಎತ್ತಲೇಬಾರದು.



Click it and Unblock the Notifications
