Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹೆರಿಗೆಯ ನಂತರ ತ್ವಚೆಯ ಸಮಸ್ಯೆಗಳು

ಹೆರಿಗೆಯ ನಂತರ ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ದೇಹದ ಮೇಲೆ ಕಪ್ಪು ಕಲೆಗಳು ಉಂಟಾಗುವುದು, ಮೊಡವೆ, ತುರಿಕೆ, ಚರ್ಮದ ಮೇಲೆ ಗೆರೆಗಳು ಬೀಳುವುದು ಇವುಗಳಿಂದಾಗಿ ದೇಹದ ಸೌಂದರ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಹೆರಿಗೆಯ ನಂತರ ಸಾಮಾನ್ಯವಾಗಿ ಬರುವ ಈ ಚರ್ಮ ಕಾಯಿಲೆ ಹಾಗೂ ಗುಣಪಡಿಸುವ ರೀತಿಯನ್ನು ಕುರಿತು ತಿಳಿಯಿರಿ.
1. ಹೆರಿಗೆಯ ನಂತರ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಚರ್ಮದ ಮೇಲೆ ಗೆರೆಗಳು ಮುಡುತ್ತವೆ. ಪೌಷ್ಠಿಕ ಆಹಾರಗಳ ಸೇವನೆ ಹಾಗೂ ದೇಹಕ್ಕೆ ಆಲೀವ್ ಅಥವಾ ಬಾದಮಿ ಎಣ್ಣೆಗಳಿಂದ ಮಸಾಜ್ ಮಾಡುತ್ತಾ ಬದರೆ ಆ ಗೆರೆಗಳು ಮಾಯವಾಗುತ್ತದೆ.
2. ಹೆರಿಗೆಯ ನಂತರ ಚರ್ಮದ ಬಗ್ಗೆ ಹೆಚ್ಚು ಗಮನಕೊಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮುಖದ ಮೇಲೆ ಮೊಡವೆಗಳು ಬಿದ್ದು ತ್ವಚೆಯ ಅಂದ ಕೆಡುತ್ತದೆ. ಆದರೆ ಒಳ್ಳೆಯ ಆಹಾರ ಕ್ರಮ ಹಾಗೂ ನೀರನ್ನು ಅತೀ ಹೆಚ್ಚು ಸೇವಿಸುವುದರಿಂದ ಈ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದ ಬಹುದಾಗಿದೆ.
3. ಹೆರಿಗೆಯ ನಂತರ ಕೆಲವೊಮ್ಮೆ ಮುಖದಲ್ಲಿ, ಕತ್ತಿನ ಹತ್ತಿರ, ಹಣೆಯಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ. ಇದು ದೇಹದಲ್ಲಿ ಅಧಿಕ ಮೆಲನಿನ್ ಉತ್ಫತ್ತಿ ಹಾಗೂ ಈಸ್ಟ್ರೋಜನ್, ಪ್ರೊಗೆಸ್ಟ್ರೋನ್ ವ್ಯತ್ಯಾಸದಿಂದಾಗಿ ಈ ರೀತಿ ಉಂಟಾಗುತ್ತದೆ. ಸ್ವಲ್ಪ ತಿಂಗಳುಗಳಲ್ಲಿ ಅದು ಅದರಷ್ಟಕ್ಕೆ ಕಡಿಮೆಯಾಗುವುದು. ಬಿಸಿಲುಗೆ ಹೆಚ್ಚಾಗಿ ಹೋಗಬೇಡಿ.
4. ಅಧಿಕ ಸೊಪ್ಪು ತರಕಾರಿಗಳ ಸೇವನೆಯು ದೇಹವನ್ನು ಆರೋಗ್ಯವಾಗಿ ಇಡುವುದರೊಂದಿಗೆ ಹೆರಿಗೆ ನಂತರ ಖಿನ್ನತೆಗೆ ಒಳಗಾಗದಂತೆ ತಡೆಯುತ್ತದೆ.
5 ಹೆರಿಗೆಯ ನಂತರ ದೇಹದಲ್ಲಿ ಈಸ್ಟ್ರೋಜನ್ ಅಂಶ ಕಡಿಮೆಯಾಗುವುದರಿಂದ ಗುಳ್ಳೆಗಳು ಉಂಟಾಗುತ್ತವೆ. ಆದ್ದರಿಂದ ದಿನಕ್ಕೆ ಎರಡು ಭಾರಿ ಬಾಡಿಲೋಷನ್ ಉಪಯೋಗಿಸಿ, ಸ್ನಾನಕ್ಕೆ ಹರ್ಬಲ್ ಸೋಪುಗಳನ್ನು ಬಳಸಿ.
ಈ ರೀತಿ ಮಾಡುವುದರಿಂದ ಕಾಂತಿಯುಕ್ತವಾದ ತ್ವಚೆಯು ನಿಮ್ಮದಾಗುವುದು.



Click it and Unblock the Notifications
