Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಗುವನ್ನುಹೀಗೆ ಬೆಳೆಸಿದರೆ ಅದರ ಮಾನಸಿಕ ಆರೋಗ್ಯ ತುಂಬಾ ಚೆನ್ನಾಗಿರುತ್ತೆ!
ಮಕ್ಕಳನ್ನು ಬೆಳೆಸುವುದು ಒಂದು ರೀತಿ ಕಲೆ. ಮಕ್ಕಳು ಚಿಕ್ಕದಿರುವಾಗ ನಾವು ಯಾವ ಮೌಲ್ಯಗಳನ್ನು ಕಲಿಸಿಕೊಡುತ್ತೇವೆಯೋ ಅದನ್ನು ಕಲಿತುಕೊಳ್ಳುತ್ತಾರೆ. ಆದರೆ ಕೆಲವೊಂದು ಬಾರಿ ಮಕ್ಕಳಿಗೆ ಇದು ಒಂದು ರೀತಿ ಕಿರಿ ಕಿರಿ ಅನ್ನಿಸೋದಕ್ಕೆ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ತುಂಬಾನೇ ಜಾಗೃತೆ ವಹಿಸಬೇಕು. ಮಕ್ಕಳ ಜೀವನಕ್ಕೆ ಬೇಕಾದ ಎಲ್ಲಾ ಮೌಲ್ಯಗಳನ್ನು ಕಲಿಸಿ ಕೊಡಬೇಕು. ಆದರೆ ಅವರಿಗೆ ಇದರಿಂದ ಕಿರಿಕಿರಿ ಅನ್ನಿಸಬಾರದು ಜೊತೆಗೆ ಅವರು ಖುಷಿಯಾಗಿಯೂ ಇರಬೇಕು. ಅಷ್ಟಕ್ಕು ಮಕ್ಕಳು ಖುಷಿಯಾಗಿರುವಂತೆ ಬೆಳೆಸೋದು ಹೇಗೆ ಅನ್ನೋದನ್ನು ತಿಳಿಯೋಣ.
1. ಮಕ್ಕಳಲ್ಲಿ ತಾಳ್ಮೆ ಬೆಳೆಸಿ
ಒರ್ವ ವ್ಯಕ್ತಿಗೆ ತಾಳ್ಮೆ ಅನ್ನೋದು ತುಂಬಾನೇ ಮುಖ್ಯ. ಅದು ಚಿಕ್ಕಂದಿನಿಂದಲೇ ಬಂದರೆ ತುಂಬಾನೇ ಒಳ್ಳೆಯದು. ಮಕ್ಕಳು ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ಹಠ ಮಾಡುತ್ತಾರೆ. ತಾವು ಕೇಳಿದ ತಕ್ಷಣ ಆ ವಸ್ತು ಸಿಗಬೇಕೆಂದು ಬಯಸುತ್ತಾರೆ. ಸ್ವಲ್ಪ ಹೊತ್ತು ಕಾಯುವ ತಾಳ್ಮೆಯೂ ಅವರಿಗೆ ಇರೋದಿಲ್ಲ. ಅವರಿಗೆ ಬೇಕಾದುದ್ದು ಸಿಗದಿದ್ದಾಗ ಅವರು ಅಳೋದಕ್ಕೆ ಶುರು ಮಾಡುತ್ತಾರೆ. ಹೀಗಾಗಿ ಅವರ ಹೆಚ್ಚಿನ ಬಾಲ್ಯವನ್ನು ಅವರು ಹಠ ಮಾಡುತ್ತಾ, ಅಳುತ್ತಾ ಕಳೆಯುತ್ತಾರೆ. ತಾಳ್ಮೆಯಿದ್ದರೆ ಅವರು ಖಂಡಿತ ಖುಷಿಯಾಗಿ ಇರುತ್ತಾರೆ.

2. ಮಕ್ಕಳಿಗೆ ಉತ್ತಮ ಸಂಬಂಧವನ್ನು ವೃದ್ಧಿ ಮಾಡೋದನ್ನು ಕಲಿಸಿ
ಕೆಲ ಮಕ್ಕಳು ಹೇಗಿರುತ್ತಾರೆ ಎಂದರೆ ತಂದೆ-ತಾಯಿ ಬಿಟ್ಟು ಅವರಿಗೆ ಬೇರೆ ಪ್ರಪಂಚ ಗೊತ್ತಿರೋದಿಲ್ಲ. ನಿಮ್ಮ ಮಗುವು ಸಂಬಂಧಿಕರು ಹಾಗೂ ಸ್ನೇಹಿತರ ಜೊತೆಗೆ ಉತ್ತಮ ಸಂಬಂಧವನ್ನು ವೃದ್ಧಿ ಮಾಡೋದನ್ನು ಕಲಿಸಿ. ತಂದೆ-ತಾಯಿಯ ಹೊರತಾಗಿ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆಗೆ ಬೆರೆತಾಗ ಮಕ್ಕಳು ಖುಷಿಯಾಗಿರುತ್ತಾರೆ. ಅವರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ.
3. ಮಗುವನ್ನು ಸ್ವತಂತ್ರವಾಗಿ ಬೆಳೆಸಿ
ಕೆಲ ಪೋಷಕರು ತಮ್ಮ ಮಕ್ಕಳನ್ನು ತುಂಬಾನೇ ಮುದ್ದು ಮಾಡಿ ಸಾಕುತ್ತಾರೆ. ಮಕ್ಕಳಿಗೆ ಅನುಕೂಲವಾಗಲಿ ಎಂದು ಪೋಷಕರು ಎಲ್ಲಾ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಮಕ್ಕಳು ತಮ್ಮ ಪೋಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುತ್ತಾರೆ. ತಂದೆ- ತಾಯಿ ಅವರ ಜೊತೆಗೆ ಇಲ್ಲದಾಗ ಏನಾದರೂ ಸವಾಲುಗಳು ಎದುರಾದರೆ ಅದನ್ನು ಎದುರಿಸೋದಕ್ಕೆ ಮಕ್ಕಳಿಂದ ಸಾಧ್ಯವಾಗೋದಿಲ್ಲ. ಈ ಸಮಯದಲ್ಲಿ ಅವರು ನೋವು ಅನುಭವಿಸಬೇಕಾಗುತ್ತದೆ. ಹೀಗಾಗಿ ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ. ಆಗ ಅವರು ಎಂತಹ ಸವಾಲುಗಳನ್ನು ಆದರೂ ಮೆಟ್ಟಿ ನಿಲ್ಲಬಹುದು.
4. ಸರಿಯಾದ ದಿನಚರಿಯನ್ನು ಅಭ್ಯಾಸ ಮಾಡಿ
ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ದಿನಚರಿಯನ್ನು ಅಭ್ಯಾಸ ಮಾಡಿಸೋದಿಲ್ಲ. ಸೋಮವಾರದದಿಂದ ಶನಿವಾರದವರೆಗೂ ಒಂದು ದಿನಚರಿ. ಮತ್ತು ಭಾನುವಾರಕ್ಕೆ ಅವರ ದಿನಚರಿಯನ್ನು ಬದಲು ಮಾಡಲಾಗುತ್ತದೆ. ಭಾನುವಾರ ಒಂದು ರೀತಿಯಲ್ಲಿ ತಮ್ಮ ದಿನವನ್ನು ಅವರು ಉದಾಸೀನದಿಂದ ಕಳೆಯುತ್ತಾರೆ.
ಹೀಗಾಗಿ ಭಾನುವಾರದಿಂದ ಶನಿವಾರದವರೆಗೂ ಬೆಳಗ್ಗೆ ಏಳೋದು, ಹಲ್ಲುಜ್ಜುವುದು, ಸ್ನಾನ, ತಿಂಡಿ, ಊಟ, ಆಟ, ಓದು ಹಾಗೂ ನಿದ್ದೆ ಎಲ್ಲವನ್ನೂ ಒಂದೇ ಸಮಯದಲ್ಲಿ ಮಾಡಿಸಬೇಕು. ಹೀಗಾದಾಗ ಸೋಮವಾರ ಅವರಿಗೆ ಶಾಲೆಗೆ ಹೋಗೋದಕ್ಕೆ ಯಾವುದೇ ರೀತಿ ತೊಂದರೆ ಆಗೋದಿಲ್ಲ. ಎಲ್ಲಾ ದಿನವು ಮಕ್ಕಳು ಖುಷಿಯಾಗಿ ಇರುತ್ತಾರೆ.
5. ಮಕ್ಕಳ ಆಸಕ್ತಿ ಬಗ್ಗೆ ಗಮನಕೊಡಿ
ಪೋಷಕರು ಹೆಚ್ಚಿನ ಸಮಯದಲ್ಲಿ ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರುತ್ತಾರೆ. ಓದಿನ ಕಡೆಗೆ ಹೆಚ್ಚಿನ ಗಮನ ಕೊಡೋದಕ್ಕೆ ಹೇಳುತ್ತಾರೆ. ಇನ್ನೂ ಪೋಷಕರಿಗೆ ಏನು ಇಷ್ಟ ಇದೆಯೋ ಮಕ್ಕಳು ಅದನ್ನು ಮಾಡಲೇಬೇಕೆಂದು ಒತ್ತಡ ಹಾಕುತ್ತಾರೆ. ಹೀಗಾದಾಗ ಮಕ್ಕಳು ಖುಷಿಯಾಗಿರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ನಿಮ್ಮ ಮಕ್ಕಳ ಆಸಕ್ತಿ ಏನು ಎಂಬುವುದನ್ನು ತಿಳಿದುಕೊಳ್ಳಿ. ಹಾಗೂ ಅದಕ್ಕೆ ಪ್ರಾಮುಖ್ಯತೆ ನೀಡಿ. ಖಂಡಿತ ಮಕ್ಕಳು ಖುಷಿಯಾಗಿ ಇರುತ್ತಾರೆ.
6. ಮಕ್ಕಳ ಜೊತೆಗೆ ಸಮಯ ಕಳೆಯಿರಿ
ಇತ್ತೀಚಿನ ದಿನಗಳಲ್ಲಿ ಪೋಷಕರು ಬ್ಯೂಸಿಯಾಗಿರುತ್ತಾರೆ. ಅಪ್ಪ- ಅಮ್ಮ ಇಬ್ಬರೂ ಕೂಡ ಕೆಲಸಕ್ಕೆ ಹೋಗೋದ್ರಿಂದ ಮಕ್ಕಳಿಗಾಗಿ ಸಮಯ ನೀಡೋದು ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಮಗು ಒಂಟಿಯಾಗಿ ಹೋಗಬಹುದು. ಮಕ್ಕಳು ತಮ್ಮ ಖುಷಿಯನ್ನು ಕಳೆದುಕೊಂಡು ಬಿಡುತ್ತಾರೆ. ಸಾಧ್ಯವಾದಷ್ಟು ಮಕ್ಕಳ ಜೊತೆಗೆ ಸಮಯ ಕಳೆಯಿರಿ ಅವರನ್ನು ಖುಷಿಯಾಗಿ ಇಟ್ಟುಕೊಳ್ಳಿ.
7. ಮಕ್ಕಳ ಮಾತನ್ನು ಕೇಳಿಸಿಕೊಳ್ಳುವವರಾಗಿ
ಹೆಚ್ಚಿನ ಪೋಷಕರು ತಮಗೆ ಏನು ಇಷ್ಟ ಇದ್ಯೋ ಅದನ್ನೇ ಮಾಡುತ್ತಾರೆಯೇ ಹೊರತು ಮಕ್ಕಳ ಇಷ್ಟ-ಕಷ್ಟಗಳನ್ನು ಕೇಳೋದಕ್ಕೆ ಅವರ ಬಳಿ ಸಮಯ ಇರೋದಿಲ್ಲ. ಮಕ್ಕಳಿಗೂ ಅವರದ್ದೇ ಆದ ಕಷ್ಟ ಇರುತ್ತದೆ. ಕೆಲವೊಂದು ನೋವು ಇರುತ್ತದೆ. ಅಷ್ಟೇ ಯಾಕೆ ಚಿಕ್ಕ-ಪುಟ್ಟ ಆಸೆಗಳು ಇರುತ್ತದೆ. ಮಕ್ಕಳಿಗಾಗಿ ಸಮಯ ಕೊಟ್ಟು ಅವರ ಮಾತನ್ನು ಕೇಳಿ. ಆಗ ಮಕ್ಕಳಿಗೂ ಒಂದು ರೀತಿ ಖುಷಿಯಾಗುತ್ತದೆ. ಮುಂದಿನ ಸಲದಿಂದ ಅವರು ಎಂತಹದ್ದೇ ವಿಚಾರಗಳನ್ನಾದರೂ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಾರೆ.
ಚಿಕ್ಕಂದಿನಿಂದಲೇ ಮಕ್ಕಳು ಖುಷಿ ಖುಷಿಯಾಗಿ ಬೆಳೆದರೆ ಅವರು ಒತ್ತಡ ಮುಕ್ತರಾಗಿ ಇರುತ್ತಾರೆ. ಯಾವುದೇ ರೀತಿ ಸಮಸ್ಯೆಗಳು ಅವರನ್ನು ಕಾಡೋದಿಲ್ಲ. ದೊಡ್ಡದಾದ ಮೇಲೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅದ್ರಲ್ಲಿ ಖುಷಿ ಕಾಣುವಷ್ಟು ಶಕ್ತರಾಗುತ್ತಾರೆ.



Click it and Unblock the Notifications

