For Quick Alerts
ALLOW NOTIFICATIONS  
For Daily Alerts

ಎರಡರಿಂದ-ನಾಲ್ಕು ವರ್ಷಗಳವರೆಗಿನ ಮಕ್ಕಳಿಗೆ ಪಾಪ್ ಕಾರ್ನ್ ತಿನ್ನಿಸಬೇಡಿ...

By Manu
|

ಮಕ್ಕಳು ಹೊರಹೋದಾಗ ಪಾಪ್ ಕಾರ್ನ್ ತಿನ್ನುವುದು ಸಾಮಾನ್ಯ. ಆದರೆ ಹಾಲುಗಲ್ಲದ ಹಸುಳೆಗೂ ಒಂದು ಚಿಕ್ಕ ತುಂಡನ್ನು ತಿನ್ನಿಸಲು ಪಾಲಕರು ಯತ್ನಿಸಿದರೆ? ಪಾಪ್ ಕಾರ್ನ್‌ನಂತಹ ಆಹಾರಗಳು ತಕ್ಷಣವೇ ಜೊಲ್ಲಿನಲ್ಲಿ ಕರಗದಿರುವ ಕಾರಣ ಹಸುಳೆಯ ಗಂಟಲಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೌದು, ಇದೇ ಕಾರಣಕ್ಕೆ ಪಾಪ್ ಕಾರ್ನ್ ಸಹಿತ ಯಾವುದೇ ಘನ ಆಹಾರವನ್ನು ಹಸುಳೆಗಳಿಗೆ ನೀಡಬಾರದು.

ಕನಿಷ್ಠ ನಾಲ್ಕು ವರ್ಷಗಳವರೆಗಾದರೂ ಇವನ್ನು ನೀಡಲೇಬಾರದು. ಏಕೆ? ಅಚ್ಚರಿಯಾಯಿತೇ? ಪಾಪ್ ಕಾರ್ನ್ ಮೊದಲಿಗೆ ಚಿಕ್ಕ ಚಿಕ್ಕ ತುಂಡುಗಳಾಗಿ ಹಲ್ಲಿನಲ್ಲಿ ಸಿಲುಕಿಕೊಳ್ಳುತ್ತವೆ ಬಳಿಕ ಗಂಟಲಿನಲ್ಲಿ ಇಳಿಯದೇ ವಾಯುಸಂಚಾರಕ್ಕೆ ಅಡ್ಡಿಯುಂಟುಮಾಡುತ್ತವೆ. ಇದು ಆ ವಯಸ್ಸಿನ ಮಕ್ಕಳಿಗೆ ತುಂಬಾ ಅಪಾಯಕಾರಿಯಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಪಾಪ್ ಕಾರ್ನ್ ಗಂಟಲಿಗೆ ಸಿಲುಕಿಕೊಳ್ಳುವಂತಹ ಆಹಾರವೇ?

ಪಾಪ್ ಕಾರ್ನ್ ಗಂಟಲಿಗೆ ಸಿಲುಕಿಕೊಳ್ಳುವಂತಹ ಆಹಾರವೇ?

ಗಂಟಲಿಗೆ ಸಿಲುಕಿಕೊಳ್ಳುವ ಆಹಾರದಲ್ಲಿ ಪಾಪ್ ಕಾರ್ನ್ ಮಾತ್ರವಲ್ಲ, ಕ್ಯಾಂಡಿ, ಹಾಟ್ ಡಾಗ್, ಚ್ಯೂಯಿಂಗ್ ಗಮ್, ಒಣಫಲಗಳು ಹಾಗೂ ದ್ರಾಕ್ಷಿ ಸಹಾ ಮಗುವಿನ ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಇವೆಲ್ಲವೂ ಹಸುಳೆಗಳಿಗೆ ಅಪಾಯಕಾರಿಯಾಗಿವೆ.

ಸಿಲುಕಿಕೊಂಡರೆ ಏನು ಮಾಡಬೇಕು?

ಸಿಲುಕಿಕೊಂಡರೆ ಏನು ಮಾಡಬೇಕು?

ಸಾಮಾನ್ಯವಾಗಿ ಒಂದು ವರ್ಷ ದಾಟಿಕ ಮಕ್ಕಳು ಕೈಗೆ ಸಿಕ್ಕಿದುದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತವೆ. ಆದ್ದರಿಂದ ಈ ಆಹಾರಗಳಾಗಲೀ ಇತರ ವಸ್ತುಗಳನ್ನಾಗಲೀ ಮಗುವಿನ ಕೈಗೆ ಸಿಗುವಂತೆ ಇಡಬಾರದು. ನಾಲ್ಕು ವರ್ಷವಾಗುವವರೆಗೂ ಮೃದುವಾದ, ಜಗಿದು ನುಂಗಬಹುದಾದ ಆಹಾರಗಳನ್ನೇ ನೀಡಬೇಕು.

ಗಂಟಲಿಗೆ ಹೇಗೆ ಸಿಲುಕಿಕೊಳ್ಳುತ್ತದೆ?

ಗಂಟಲಿಗೆ ಹೇಗೆ ಸಿಲುಕಿಕೊಳ್ಳುತ್ತದೆ?

ಮಗುವಿನ ಗಂಟಲಿನ ಭಾಗ ಸೂಕ್ಷ್ಮ ಹಾಗೂ ಚಿಕ್ಕದಾಗಿದ್ದು ಕಿರುನಾಲಿಗೆಯೂ ಚಿಕ್ಕದೇ ಆಗಿರುತ್ತದೆ. ಪಾಪ್ ಕಾರ್ನ್ ನ ಅರ್ಧಭಾಗವೂ ಈ ಗಂಟಲಿನ ತೆರೆದ ಭಾಗವನ್ನು ಮುಚ್ಚಬಹುದು. ಕಿರುನಾಲಿಗೆ ಇದನ್ನು ತಡೆಯಲೆತ್ನಿಸಿ ಇನ್ನೂ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು. ಸಮೀಕ್ಷೆಗಳಲ್ಲಿ ಕಂಡುಬಂದ ಪ್ರಕಾರ ಒಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿಯೇ ಈ ಪರಿಯ ಅಪಘಾತಗಳು ಹೆಚ್ಚಾಗಿವೆ.

ಇದರಿಂದ ಪ್ರಾಣಾಪಾಯವಿದೆಯೇ?

ಇದರಿಂದ ಪ್ರಾಣಾಪಾಯವಿದೆಯೇ?

ಕೆಲವು ಮಕ್ಕಳು ಹೀಗೆ ಗಂಟಲು ಕಟ್ಟಿಕೊಂಡು ಉಸಿರಾಡಲು ಸಾಧ್ಯವಾಗದೇ ಮರಣವನ್ನಪ್ಪಿರುವುದನ್ನು ಸಮೀಕ್ಷೆಗಳು ತಿಳಿಸಿವೆ. ವಾರ್ಷಿಕವಾಗಿ ಸುಮಾರು ಹತ್ತು ಸಾವಿರ ಮಕ್ಕಳು ಈ ತೊಂದರೆಯಿಂದ ಆಸ್ಪತ್ರೆ ಸೇರುತ್ತವೆ. ಇದು ಎಷ್ಟು ಅಪಾಯಕರ ಎಂದು ಸೂಚಿಸಲು ಇದೊಂದೇ ಮಾಹಿತಿ ಸಾಕು.

ಪಾಪ್ ಕಾರ್ನ್ ಸಹಿತ ಬೇರೇನನ್ನು ನೀಡಬಾರದು?

ಪಾಪ್ ಕಾರ್ನ್ ಸಹಿತ ಬೇರೇನನ್ನು ನೀಡಬಾರದು?

ಯಾವುದೇ ಆಹಾರ ಜೊಲ್ಲಿನಲ್ಲಿ ಕರಗದೇ ಇದ್ದರೆ ಅಥವಾ ತೀರಾ ಅಂಟಂಟಾಗಿದ್ದರೆ, ಒಣಗಿದ್ದರೆ, ಗಟ್ಟಿಯಾಗಿದ್ದರೆ, ಅಥವಾ ತುಂಡುಮಾಡಲು ಸಾಧ್ಯವಾಗದೇ ಇದ್ದರೆ ಈ ಆಹಾರಗಳನ್ನು ಮಕ್ಕಳಿಗೆ ನೀಡಲೇಬಾರದು. ಅದರಲ್ಲೂ ಚಿಕ್ಕ ಗೋಲಿಗಾತ್ರಕ್ಕಿಂತ ದೊಡ್ಡದಾದ ಯಾವುದೇ ಆಹಾರವನ್ನು ನೀಡಬಾರದು. ಈ ಗೋಲಿ ನೇರವಾಗಿ ಗಂಟಲಿನ ಮೇಲೆ ಕವಾಟದಂತೆ ಕುಳಿತು ಉಸಿರಾಟಕ್ಕೆ ಅಡ್ಡಿಯುಂಟುಮಾಡಬಹುದು.

ಯಾವ ಆಹಾರಗಳು ಸೂಕ್ತ?

ಯಾವ ಆಹಾರಗಳು ಸೂಕ್ತ?

ಮಕ್ಕಳಿಗೆ ಎರಡು ವರ್ಷದ ಬಳಿಕ ಕೊಂಚ ಘನ ಆಹಾರಗಳನ್ನು ನೀಡುವ ಅಗತ್ಯವಿದೆ. ಆದರೆ ಇವನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಜಜ್ಜಿ ನಯವಾಗಿಸಿಯೇ ತಿನ್ನಿಸಬೇಕು. ಸೇಬು, ಬಾಳೆಹಣ್ಣು, ಪೀಚ್, ಪಿಯರ್ಸ್, ಕಿತ್ತಳೆ ಮೊದಲಾದ ಹಣ್ಣುಗಳ ತಿರುಗಳನ್ನು ಸಂಗ್ರಹಿಸಿ ಚಮಚದಲ್ಲಿ ಒತ್ತಿ ಲೇಪನದಂತಾಗಿಸಿ ತಿನ್ನಿಸುವುದು ಸುರಕ್ಷಿತ. ಗೋಲಿಯಂತಿರುವ ಆಹಾರಗಳಾದ ಚೆರ್ರಿ, ದ್ರಾಕ್ಷಿ, ಪ್ಲಮ್, ಮೊದಲಾದವುಗಳನ್ನು ಹಾಗೇ ಖಂಡಿತಾ ತಿನ್ನಿಸಬಾರದು. ಬದಲಿಗೆ, ಇವುಗಳ ಬೀಜ ನಿವಾರಿಸಿ ಚಮಚದಲ್ಲಿ ಒತ್ತಿ ಲೇಪನವಾಗಿಸಿಯೇ ತಿನ್ನಿಸಬೇಕು. ಬೇಯಿಸಿ ಸೇವಿಸುವ ತರಕಾರಿಗಳಾದ ಆಲುಗಡ್ಡೆ, ಬ್ರೋಕೋಲಿ, ಬಟಾಣಿ, ಕ್ಯಾರೆಟ್, ಹೂಕೋಸು ಮೊದಲಾದವುಗಳನ್ನೂ ಚೆನ್ನಾಗಿ ಬೇಯಿಸಿ ಚಿಕ್ಕ ತುಂಡುಗಳನ್ನು ಚಮಚದಲ್ಲಿ ಒತ್ತಿ ನಯವಾದ ಲೇಪನವಾಗಿಸಿದ ಬಳಿಕವೇ ತಿನ್ನಿಸಬೇಕು.

English summary

Can Toddlers Eat Popcorn?

Can toddlers eat popcorn? When can kid eat popcorn? Well, the only problem with foods like popcorn is that it can result in choking! Yes, it is better to avoid feeding your toddler with foods like popcorn until your kid crosses the age of 4 years. Are you wondering why? Well, the pieces of the corn can get stuck in the teeth first and some of the fragments may get stuck in the throat and result in choking which is very dangerous at that age. Here are some more facts.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more