Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಸ್ತೆಬದಿಯ ಆಹಾರಕ್ಕೆ ಮುಗಿಬೀಳುವ ಮುನ್ನ ಇರಲಿ ಕಟ್ಟೆಚ್ಚರ
ರಸ್ತೆಬದಿಯ ಕುರುಕಲು ತಿಂಡಿಗಳಿಗೆ ಪಾನಿಪೂರಿ ಮಸಾಲ್ ಪೂರಿ ಮೊದಲಾದ ಚಾಟ್‌ಗಳಿಗೆ ಮನಸೋಲದವರು ಯಾರಿದ್ದಾರೆ ಹೇಳಿ? ಕಡಿಮೆ ಬೆಲೆಯಲ್ಲಿ ಸಿಗುವ ಈ ಕುರುಕಲು ತಿಂಡಿಗಳಿಗೆ ಏನೋ ಒಂದು ಸ್ವಾದವಿರುತ್ತದೆ ಎಂದೇ ಜನರು ಇದಕ್ಕೆ ಮುಗಿಬೀಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಈ ತಿಂಡಿ ತಿನಿಸುಗಳು ಮಾರಕವಾಗಿದ್ದರೂ ನಾವು ಇದರ ಬಗ್ಗೆ ಗಮನ ನೀಡದೇ ಒಂದು ಬಾರಿಯಲ್ಲವೇ ಎಂಬ ತಾತ್ಸಾರದಲ್ಲೇ ಇಂತಹ ಆಹಾರಗಳನ್ನು ಹೆಚ್ಚು ಬಾರಿ ಸೇವಿಸುತ್ತೇವೆ.
ಮಕ್ಕಳಂತೂ ಈ ಬಗೆಯ ಆಹಾರಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿರುವುದರಿಂದ ಈ ಬಗೆಯ ತಿಂಡಿ ಎಂದರೆ ಅವರಿಗೆ ಕೊಳ್ಳುವುದಕ್ಕೆ ಮನಸ್ಸಾಗುವುದೇ ಹೆಚ್ಚು. ಆದರೆ ಈ ಬಗೆಯ ಆಹಾರಗಳು ಅವರಲ್ಲಿ ಹೆಚ್ಚಿನ ರೋಗಕ್ಕೆ ಕಾರಣವಾಗುತ್ತವೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ನೀವು ವೈದ್ಯರ ಬಳಿ ಹೋದಾಗ ಅವರು ಕೇಳುವ ಮೊದಲ ಪ್ರಶ್ನೆಯೇ ರಸ್ತೆ ಬದಿಯ ಆಹಾರಗಳನ್ನು ತಿನ್ನುತ್ತೀರಾ ಎಂಬುದಾಗಿದೆ.
ಅಗ್ಗದ ಬೆಲೆಯಲ್ಲಿ ದೊರೆಯುವ ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಇಂತಹ ತಿಂಡಿ ತಿನಿಸುಗಳನ್ನು ಇವರು ತಯಾರಿಸುವುದರಿಂದ ರೋಗಗಳು ಆಹ್ವಾನ ನೀಡದೆಯೇ ನಮ್ಮನ್ನು ಎಡತಾಗುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಇಂತಹ ಆಹಾರಗಳು ಏಕೆ ಹಾನಿಕಾರಕ ಎಂಬ ಸಂಗತಿಗಳನ್ನು ಮೊದಲು ತಿಳಿದುಕೊಳ್ಳೋಣ.
ಮಿಲ್ಕ್ ಶೇಕ್, ಚಾಟ್ ಐಟಂಗಳಿಂದ ದೂರವಿರಿಸಿ
ವಿವಿಧ ಚಾಟ್‌ಗಳಲ್ಲಿ ಮೊಸರನ್ನು ಸೇರಿಸಲಾಗುತ್ತದೆ. ಆದರೆ ಈ ಮೊಸರಿನ ಗುಣಮಟ್ಟ ಹೇಗಿದೆಯೋ ಎಂದು ಪರಿಗಣಿಸದೇ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡುವುದಾಗಿದೆ. ಮಕ್ಕಳಿಗೆ ಮೊಸರು ಇಲ್ಲದೇ ಇರುವ ತಿನಿಸುಗಳನ್ನು ಪರಿಗಣಿಸುವುದು ಸೂಕ್ತ. ಅಂತೆಯೇ ಹಾಲನ್ನು ಉಪಯೋಗಿಸುವ ಮಿಲ್ಕ್ ಶೇಕ್, ಫಾಲೂದಾ ಮೊದಲಾದವನ್ನೂ ಮಕ್ಕಳಿಗೆ ನೀಡದೇ ಇರುವುದು ಒಳಿತು. ಇಂದಿನ ದಿನಗಳಲ್ಲಿ ಕೃತಕ ಹಾಲನ್ನೂ ಅಗ್ಗದ ದರದಲ್ಲಿ ಮಾರುತ್ತಿರುವುದು ಹಾಗೂ ಹಾದಿಬದಿಯ ವ್ಯಾಪಾರಸ್ಥರು ಲಾಭದ ಆಸೆಗಾಗಿ ಇವನ್ನು ಕೊಳ್ಳುವುದು ಸಹಾ ಈ ನಿರ್ಧಾರಕ್ಕೆ ಪೂರಕವಾಗಿದೆ.

ಪಾನಿಪೂರಿಗೆ ಸಾಥ್ ನೀಡುವ ಬೀಯಿಸಿದ ಆಲೂಗಡ್ಡೆ
ಸಾಮಾನ್ಯವಾಗಿ ಹಾದಿಬದಿಯ ತಿನಿಸುಗಳನ್ನು ಹಗಲಿನಲ್ಲಿಯೇ ಮನೆಯಲ್ಲಿ ತಯಾರಿಸಿ ಸಂಜೆಯವೇಳೆ ಮಾರುಕಟ್ಟೆಗೆ ತರಲಾಗುತ್ತದೆ. ತರಕಾರಿಯನ್ನು ಬೆಂದ ಬಳಿಕ ಹೆಚ್ಚು ಹೊತ್ತು ಇಡಬಾರದು. ಏಕೆಂದರೆ ಬೆಂದ ತರಕಾರಿ ತಣಿಯುತ್ತಿದ್ದಂತೆ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತದೆ. ವಿಶೇಷವಾಗಿ ಬೆಂದ ಆಲುಗಡ್ಡೆ ಬೇಗನೇ ಹಾಳಾಗುತ್ತದೆ. ಈ ತರಕಾರಿಗಳನ್ನು ಉಳಿದ ಖಾರದ ಅಥವಾ ಹುಳಿಯಾದ ರಸಗಳೊಡನೆ ಮಿಶ್ರಣ ಮಾಡಿ ನೀಡಿದರೆ ಆಲುಗಡ್ಡೆ ಹಾಳಾಗಿದ್ದುದು ಗೊತ್ತೇ ಆಗುವುದಿಲ್ಲ. ಉದಾಹರಣೆಗೆ ಪಾನಿಪೂರಿಗೆ ಹಾಕಿ ಕೊಡುವ ಬೇಯಿಸಿರುವ ಆಲೂಗಡ್ಡೆ. ಆದರೆ ಇದರಿಂದಾಗಿ ಮಕ್ಕಳ ಜಠರ ಈ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಗಿ ತುತ್ತಾಗಿ ಅನಾರೋಗ್ಯ ಆವರಿಸುತ್ತದೆ. ಈ ಬಗ್ಗೆ ಖಚಿತವಾದ ಮಾಹಿತಿ ಪಡೆಯದೇ ತುಂಬಾ ಹಿಂದೆ ಬೇಯಿಸಿದ ತರಕಾರಿ ಸೇವಿಸುವುದರಿಂದ ಮಕ್ಕಳಿಗೂ ಹಿರಿಯರಿಗೂ ಮಾರಕವಾಗಿದೆ.
ಪಾಮ್ ಆಯಿಲ್ (ತಾಳೆ ಎಣ್ಣೆ ಬಳಕೆ)
ಆರೋಗ್ಯದ ದೃಷ್ಟಿಯಿಂದ ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತಾಳೆ ಎಣ್ಣೆ ಖಂಡಿತಾ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ saturated vegetable fats ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಾರಣದಿಂದ ಮುಂದುವರೆದ ದೇಶಗಳಲ್ಲಿ ಈಗಾಗಲೇ ತಾಳೆ ಎಣ್ಣೆಯನ್ನು ನಿಷೇಧಿಸಲಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಈಗಾಗಲೇ ಉತ್ಪತ್ತಿಯಾಗಿರುವ ಎಣ್ಣೆಯನ್ನು ಮಾಡುವುದಾದರೂ ಏನು? ಈ ಪ್ರಶ್ನೆಗೆ ಈ ದೇಶಗಳು ಭಾರತ ಸೇರಿ ತೃತೀಯ ದೇಶಗಳಿಗೆ ಅಗ್ಗದ ದರದಲ್ಲಿ ನೀಡುತ್ತಿವೆ. ಇದರ ಅರಿವಿಲ್ಲದ ಜನತೆ ಕೇವಲ ಅಗ್ಗ ಎಂಬ ಒಂದೇ ಕಾರಣಕ್ಕಾಗಿ ತಾಳೆ ಎಣ್ಣೆಯನ್ನು ಬಳಸುತ್ತಿದ್ದಾರೆ. ಲಾಭದ ದೃಷ್ಟಿಯಿಂದ ಮತ್ತು ತುಂಬಾ ಹೆಚ್ಚಿನ ತಿನಿಸುಗಳನ್ನು ಈ ಎಣ್ಣೆಯಲ್ಲಿ ಕರಿಯಲು ಸಾಧ್ಯ ಎಂದು ಮನಗಂಡಿರುವ ವ್ಯಾಪಾರಿಗಳು ತಾಳೆ ಎಣ್ಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳು ಎಲ್ಲರ ಆರೋಗ್ಯಕ್ಕೆ ಮಾರಕವಾಗಿವೆ.
ಅಗ್ಗ ಎಂಬ ಕಾರಣಕ್ಕೆ ಮಾರುಹೋಗಬೇಡಿ
ಹೋಟೆಲಿಗಿಂತಲೂ ಅಗ್ಗ ಮತ್ತು ಅದಕ್ಕಿಂತಲೂ ರುಚಿ ಎಂಬ ಕಾರಣದಿಂದ ಹೆಚ್ಚಿನವರು ಒಂದಕ್ಕಿಂತಲೂ ಹೆಚ್ಚಿನ ಪ್ರಕಾರದ ತಿನಿಸುಗಳನ್ನು ಸೇವಿಸುತ್ತಾರೆ. ಮಕ್ಕಳೂ ಇದಕ್ಕೆ ಹೊರತಲ್ಲ. ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಮನೆಯಲ್ಲಿ ಊಟವನ್ನೇ ಮಾಡುವುದಿಲ್ಲ. ಒಂದು ವೇಳೆ ಹಾದಿಬದಿಯ ತಿನಿಸು ತಿನ್ನುವುದು ಅನಿವಾರ್ಯವಾದರೆ ಮಕ್ಕಳಿಗೆ ಬಾಳೆ ಹಣ್ಣು, ಸಿಟ್ರಿಕ್ ಹಣ್ಣುಗಳಾದ ಮೂಸಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಡಿ.



Click it and Unblock the Notifications

