Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಂತ ಮನೆಯಲ್ಲಿಯೇ ಕದಿಯುವುದು ಏಕೆ?

ಕಾರಣಗಳು:
1. ಪೋಷಕರಿಗೆ ಮಕ್ಕಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೆ ಈ ರೀತಿಯ ಕದಿಯುವ ಕಾಯಿಲೆ ಬೆಳೆಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ತಿಂಡಿ, ಚಾಕೋಲೆಟ್, ಒಡ ಹುಟ್ಟಿದವರ ಆಟದ ಸಾಮಾನುಗಳನ್ನು ಕದಿಯುತ್ತಾರೆ. ನಂತರ ನಿಧಾನಕ್ಕೆ ಹಣ ಕದಿಯಲು ಪ್ರಾರಂಭಿಸುತ್ತಾರೆ.
2. ಕೆಲವೊಮ್ಮೆ ಮನೆಯಲ್ಲಿ ಎರಡು ಮಕ್ಕಳಿದ್ದರೆ ಒಂದು ಮಗುವನ್ನು ತುಂಬಾ ಪ್ರೀತಿ ಮಾಡುತ್ತಿದು, ಇನ್ನೊಂದು ಮಗುವಿನ ಬಗ್ಗೆ ಅಷ್ಟಾಗಿ ಗಮನ ಹರಿಸದಿದ್ದರೆ ಮಕ್ಕಳು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ.
3. ಸಹವಾಸ ದೋಷದಿಂದ ಕೂಡ ಈ ರೀತಿಯ ತಪ್ಪು ಮಾಡುತ್ತಾರೆ. ಸ್ನೇಹಿತರ ಮುಂದೆ ತಾನು ದೊಡ್ಡ ಜನ ಅನ್ನಿಸಿಕೊಳ್ಳಬೇಕೆಂದು ಕೂಡ ಈ ರೀತಿಯ ತಪ್ಪು ಮಾಡುತ್ತಾರೆ.
ಪರಿಹಾರ:
1. ಪೋಷಕರಿಗೆ ಎಷ್ಟೇ ಕೆಲಸವಿರಲಿ ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಕೆಲಸದವರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿ ಸುಮ್ಮನೆ ಕೂರುವುದು ಕೆಲ ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳ ಬೇಕು, ಬೇಡ ಮತ್ತು ಗುಣಗಳ ಬಗ್ಗೆ ಗಮನ ಕೊಡಬೇಕಾದದು ಪೋಷಕರ ಕರ್ತವ್ಯ, ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
2. ಅಪ್ಪ-ಅಮ್ಮ ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ತುಂಬಲು ಅವಕಾಶ ಕೊಡಬೇಡಿ. ಏಕೆಂದರೆ ಕೆಲವೊಂದು ಮನೆಗಳಲ್ಲಿ ಕೊನೆಯ ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ, ಕೆಲವರು ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಈ ರೀತಿ ಮಾಡಬಾರದು, ಎಲ್ಲಾ ಮಕ್ಕಳನ್ನು ಸಮನಾಗಿ ನೋಡಬೇಕು. ಇಲ್ಲದಿದ್ದರೆ ಚಿಕ್ಕ ಮನಸ್ಸು ತಪ್ಪು ಹಾದಿಯನ್ನು ಸುಳಿಯುವುದು.
3. ನಮ್ಮ ಮಕ್ಕಳ ಸ್ನೇಹಿತರ ಬಗ್ಗೆ ತಿಳಿದಿರಬೇಕು. ಕೆಟ್ಟ ಗುಣವಿರುವ ಮಕ್ಕಳ ಸಹವಾಸ ಮಾಡಲು ಬಿಡಬಾರದು.
4. ಮಕ್ಕಳ ಬೇಕು ಬೇಡಗಳನ್ನು ತಿಳಿದು ಪೂರೈಸಬೇಕು. ಒಂದು ವೇಳೆ ನಿಮಗೆ ಅವರ ಬೇಡಿಕೆಯನ್ನು ಪೂರೈಸಲು ಆಗದಿದ್ದರೆ ನಿಮ್ಮ ಅಸಹಾಯಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಲು ಹಿಂಜರಿಯಬಾರದು. ನಿಮ್ಮ ಆರ್ಥಿಕ ಹಿತಿ-ಮಿತಿ ಬಗ್ಗೆ ಮಕ್ಕಳಿಗೆ ತಿಳಿದಿರುವುದು ಒಳ್ಳೆಯದು. ಆಗ ಅವರು ಕೂಡ ಅದಕ್ಕೆ ತಕ್ಕಂತೆ ಜೀವನ ನಡೆಸಲು ಕಲಿಯುತ್ತಾರೆ.



Click it and Unblock the Notifications
