Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಾಲುಣಿಸುವ ಪ್ರತಿ ತಾಯಂದಿರು ಈ 5 ಗೋಲ್ಡನ್ ರೂಲ್ಸ್ ಬಗ್ಗೆ ತಿಳಿದಿರಲೇಬೇಕು
ಯಾವುದೇ ಹೊಸ ತಾಯಿಗೆ, ಹಾಲುಣಿಸುವಿಕೆಯು ಹೆದರಿಕೆ, ಭಯ ಹುಟ್ಟಿಸುವ ಕೆಲಸವಾಗಿದೆ. ಚಿಕ್ಕ ಮಗುವಿಗೆ ಆಹಾರ ನೀಡುವುದು ನೈಸರ್ಗಿಕ ಪ್ರಕ್ರಿಯೆಯಂತೆ ತೋರುತ್ತದೆಯಾದರೂ, ಇದು ಎಲ್ಲಾ ತಾಯಂದಿರು ಮತ್ತು ಶಿಶುವಿಗೆ ಜನ್ಮಜಾತವಾಗಿ ಬರುವುದಿಲ್ಲ. ಕಾಲಕ್ಕೆ ತಕ್ಕಂತೆ, ಒಂದೊಂದೇ ಅನುಭವಗಳ ಮೂಲಕ ಎಲ್ಲವೂ ಪರಿಪಕ್ವವಾಗುವುದು. ಆದಾಗ್ಯೂ, ಸ್ತನ್ಯಪಾನದ ಮೂಲಭೂತ ವಿಷಯಗಳ ಬಗ್ಗೆ ಜ್ಞಾನವು ಅವುಗಳನ್ನು ತ್ವರಿತವಾಗಿ ಕಾರ್ಯರೂಪಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಾವಿಂದು ಹಾಲುಣಿಸುವ ತಾಯಂದಿರು ತಿಳಿದಿರಬೇಕಾದ ಮೂಲಭೂತ ಅಂಶಗಳ ಬಗ್ಗೆ ತಿಳಿಸಲಿದ್ದೇವೆ.
ಹಾಲುಣಿಸುವ ತಾಯಂದಿರು ತಿಳಿದಿರಬೇಕಾದ ಮೂಲಭೂತ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

ಮುಕ್ತ ಮನಸ್ಸಿನವರಾಗಿರಿ:
ನಿಮ್ಮ ಸುತ್ತಮುತ್ತಲಿನ ಜನರು ಸರಿಯಾಗಿ ಹಾಲುಣಿಸುವ ತಂತ್ರಗಳನ್ನು ಸೂಚಿಸಿರಬಹುದು, ಆದರೆ ನಿಮ್ಮ ಮಗುವಿಗೆ ಆಹಾರವನ್ನು ನೀಡಲು ಪ್ರಾರಂಭಿಸಿದಾಗ ಅವುಗಳನ್ನು ಕಟ್ಟುನಿಟ್ಟಾಗಿ ಅನ್ವಯಿಸಲು ಪ್ರಯತ್ನಿಸಬೇಡಿ. ಮುಕ್ತ ಮನಸ್ಸಿನವರಾಗಿರುವುದು ಹಾಗೂ ನಿಮಗೆ, ನಿಮ್ಮ ಮಗುವಿಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡುವುದು ಅತ್ಯಗತ್ಯ. ಕೇವಲ ಜನರ ಸಲಹೆಗಳನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಸ್ತನ್ಯಪಾನ ಪ್ರಕ್ರಿಯೆಯ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಪುಸ್ತಕಗಳು ಮತ್ತು ಲೇಖನಗಳನ್ನು ಓದಿ. ಪ್ರಯೋಗಗಳಿಗೆ ತೆರೆದುಕೊಳ್ಳಿ.

ಆರೋಗ್ಯಕರ ಆಹಾರ ಪದ್ಧತಿ ಅತ್ಯಗತ್ಯ:
ಮೊದಲ ಆರು ತಿಂಗಳವರೆಗೆ ಶಿಶುವಿಗೆ ಎದೆಹಾಲು ಮಾತ್ರ ನೀಡಲಾಗುತ್ತದೆ. ಎದೆ ಹಾಲು ಅವರಿಗೆ ಎಲ್ಲಾ ಪೋಷಕಾಂಶಗಳನ್ನು ಒದಗಿಸಿ, ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಚೆನ್ನಾಗಿ ತಿನ್ನಬೇಕು ಮತ್ತು ನೀರಿನಾಂಶವನ್ನು ಹೊಂದಿರಬೇಕು. ನೀವು ಏನು ತಿನ್ನುತ್ತೀರೋ ಅದು ನಿಮ್ಮ ಹಾಲಿನ ರೂಪದಲ್ಲಿ ನಿಮ್ಮ ಮಗುವಿಗೆ ರವಾನಿಸುತ್ತದೆ. ನಿಮ್ಮ ಆಹಾರದಲ್ಲಿ ಪೋಷಕಾಂಶಗಳು ಕಡಿಮೆಯಿದ್ದರೆ ಮತ್ತು ಚೆನ್ನಾಗಿ ಹೈಡ್ರೀಕರಿಸದಿದ್ದರೆ, ನಿಮ್ಮ ಆರೋಗ್ಯವು ಹಾನಿಗೊಳಗಾಗುತ್ತದೆ, ಆದರೆ ಅದರ ಋಣಾತ್ಮಕ ಪರಿಣಾಮವು ನಿಮ್ಮ ಮಗುವಿನ ಆರೋಗ್ಯದ ಮೇಲೆ ಬೀಳಬಹುದು.

ಹಾಲುಣಿಸಲು ಆರಾಮದಾಯಕ ಸ್ಥಾನ ಆರಿಸಿ:
ಯಶಸ್ವಿ ಸ್ತನ್ಯಪಾನ ಅವಧಿಗಾಗಿ ನೀವು ಮತ್ತು ನಿಮ್ಮ ಮಗು ಇಬ್ಬರೂ ಆರಾಮದಾಯಕ ಸ್ಥಾನವನ್ನು ಪಡೆಯಬೇಕು. ಮಗುವನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳುವುದು ಹೇಗೆ ಎಂದು ಕಲಿಯುವುದು ಅವಶ್ಯಕ. ಸ್ತನ್ಯಪಾನ ಸಮಯದಲ್ಲಿ ಸರಿಯಾದ ಸ್ಥಾನವು ನಿಮ್ಮ ಮಗುವಿಗೆ ಸರಿಯಾದ ರೀತಿಯಲ್ಲಿ ಹಾಲುಣಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಸಮಯದಲ್ಲಿ ತಾಯಂದಿರು ಹೆಚ್ಚಾಗಿ ಅನುಭವಿಸುವ ಮೊಲೆತೊಟ್ಟುಗಳ ನೋವಿನ ಸಮಸ್ಯೆಯನ್ನು ತಡೆಯುತ್ತದೆ.

ಮನಸ್ಥಿತಿ ಉತ್ತಮವಾಗಿಟ್ಟುಕೊಳ್ಳಿ:
ನೀವು ಸ್ತನ್ಯಪಾನ ಮಾಡಲಿ ಹೋರಾಡುತ್ತಿದ್ದರೆ ಮತ್ತು ಆಗಾಗ್ಗೆ ಆತಂಕವನ್ನು ಅನುಭವಿಸುತ್ತಿದ್ದರೆ, ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ವಿಶ್ರಾಂತಿ ಪಡೆಯಲು ನಿಮ್ಮ ಮೆಚ್ಚಿನ ಸಂಗೀತ ಅಥವಾ ಪಾಡ್‌ಕ್ಯಾಸ್ಟ್ ಅನ್ನು ಪ್ಲೇ ಮಾಡುವ ಮೂಲಕ ಮನಸ್ಥಿತಿಯನ್ನು ಸುಧಾರಿಸಿಕೊಳ್ಳಿ. ಇದು ನಿಮ್ಮ ಮಗುವಿಗೆ ಉತ್ತಮ ರೀತಿಯಲ್ಲಿ ಆಹಾರವನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹಾಲಿನ ಹರಿವು ಉತ್ತಮವಾಗಿರುತ್ತದೆ. ಫೀಡಿಂಗ್ ಸೆಷನ್‌ನಿಂದ ವಿರಾಮ ತೆಗೆದುಕೊಳ್ಳಲು ನೀವು ಸ್ತನ ಪಂಪ್ ಅನ್ನು ಸಹ ಪ್ರಯತ್ನಿಸಬಹುದು.

ನಿಮ್ಮ ಮೇಲೆ ಕಟುವಾಗಿ ವರ್ತಿಸಬೇಡಿ:
ಆರಂಭಿಕ ಕೆಲವು ದಿನಗಳಲ್ಲಿ ನೀವು ನಿರಾಶೆ ಮತ್ತು ಹತಾಶೆಯನ್ನು ಅನುಭವಿಸಬಹುದು. ನಿಮ್ಮ ಮೇಲೆ ಕಟುವಾಗಿ ವರ್ತಿಸಬೇಡಿ. ಮಗುವನ್ನು ನೋಡಿಕೊಳ್ಳಲು ಮತ್ತು ಕೆಲವು ಸ್ವಯಂ-ಆರೈಕೆಗೆ ಅಗತ್ಯವಿದ್ದರೆ ಸಹಾಯವನ್ನು ತೆಗೆದುಕೊಳ್ಳಿ. ಸ್ನೇಹಿತರನ್ನು ಭೇಟಿ ಮಾಡಲು ಹೋಗಿ, ದೀರ್ಘ ಸ್ನಾನ ಮಾಡಿ ಅಥವಾ ನಿಮ್ಮ ಮೆಚ್ಚಿನದನ್ನು ವೀಕ್ಷಿಸಿ. ಈ ವೇಳೆ ನೀವು ಸ್ವಲ್ಪ ತಾಳ್ಮೆಯಿಂದಿರಬೇಕು.



Click it and Unblock the Notifications
