Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸೀಮಂತ ಹೆರಿಗೆಯಲ್ಲಿ ಸಮಾಧಾನ ನೀಡಬಲ್ಲದೇ?
ಮುತೈದೆಗೆ ಬಳೆ, ಕಾಲುಂಗುರ, ಹೂವು, ಕುಂಕುಮ ಇವುಗಳೇ ಭೂಷಣ ಎಂಬುದು ಭಾರತೀಯರ ನಂಬಿಕೆ. ಇಂದು ಇವು ಕೇವಲ ನಂಬಿಕೆಗಳಾಗಿರದೆ ವೈಜ್ಞಾನಿಕ ಕಾರಣಗಳನ್ನು ಹೊಂದಿದ್ದು ಅವುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದೇ ರೀತಿ ಗರ್ಭಿಣಿ ಸ್ತ್ರೀಯರಿಗೂ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಆದ್ಯತೆ ನೀಡಿ ಅವರಿಗೆ ಸಂಪ್ರದಾಯಬದ್ಧವಾಗಿ ಬಳೆಗಳನ್ನು ತೊಡಿಸಲಾಗುತ್ತದೆ!
ಭಾರತದಲ್ಲಿ ಗರ್ಭಿಣಿಯರಿಗೆ ಬೇಬಿ ಸ್ನಾನ/ಎಣ್ಣೆ ಸ್ನಾನ ಮಾಡಿಸುವುದು ಸಾಂಪ್ರದಾಯಿಕ ಪದ್ಧತಿ ಎಂದು ಪರಿಗಣಿಸಲಾಗಿದೆ. ಯಾವಾಗಲೂ ಒಂದು ಸಂಭ್ರಮದ ಆಚರಣೆಯ ಮನಸ್ಥಿತಿಯನ್ನು ನೀಡುವ ಸಾಂಪ್ರದಾಯಿಕ ಕಾರ್ಯಗಳು ನಮ್ಮಲ್ಲಿ ಸಾಕಷ್ಟಿವೆ. ಪದ್ಧತಿಗಳು ಮತ್ತು ಆಚರಣೆಗಳು ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮ ಅತ್ಯಂತ ನಿಕಟವಾಗಿ ಸಂಬಂಧಿಸಿವೆ. ಇದು ಗರ್ಭಿಣಿ ಮಹಿಳೆಯರು ಸಂತೋಷ ಮತ್ತು ವಿಶೇಷವಾದ ಮನಸ್ಥಿತಿಯನ್ನು ಹೊಂದಿರಲು ಸಹಾಯ ಮಾಡುತ್ತದೆ. ಈ ಕಾರ್ಯಗಳ ಹೊರತಾಗಿ ಗರ್ಭಿಣಿಯರಿಗೆ ಬಳೆ ತೊಡಿಸುವ ಸಮಾರಂಭ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ಜೀವನದಲ್ಲಿ ಈ ಸಂತೋಷವನ್ನು ಅನುಭವಿಸಿದ್ದರೆ ನಿಮಗೆ ತಿಳಯದೇ ಇರುವ ಅಚ್ಚರಿ ಮೂಡಿಸುವ ಕೆಲವು ವಿಚಾರಗಳು ಇಲ್ಲಿವೆ.

ಒಂದು ಹೊಸ ಅಧ್ಯಯನವು ಗರ್ಭಿಣಿಯರು ಬಳೆ ಧರಿಸುವ ಸಂಪ್ರದಾಯ, ಅವರಲ್ಲಿ ಸಮಾಧಾನವನ್ನುಂಟು ಮಾಡಿ ಹೆರಿಗೆಗೆ ಸುಲಭವಾಡುತ್ತದೆ ಎಂದು ಸೂಚಿಸುತ್ತದೆ. ಈ ಸಮಾರಂಭವನ್ನು ’ಸೀಮಂತ’ ಎಂದು ಕರೆಯಲಾಗುತ್ತದೆ. ಗರ್ಭಿಣಿ ಮಹಿಳೆಯರ ಪಾಲಕರು ಇತರ ಮುತೈದೆಯಂದಿರನ್ನು ಆಹ್ವಾನಿಸುತ್ತೇನೆ ಮತ್ತು ಆ ಮಹಿಳೆಯರು ಗರ್ಭಿಣಿ ಮಹಿಳೆಯರಯ ಕೈಗಳಿಗೆ ಬಳೆಗಳನ್ನು ತೊಡಿಸಿ ಆಶೀರ್ವದಿಸುತ್ತಾರೆ. ಇಂತಹ ಅನೇಕ ಗರ್ಭಿಣಿಯರಿಗೆ ಸಂಬಂಧಿಸಿದ ಸಾಂಪ್ರದಾಯಿಕ ಕಾರ್ಯಗಳು ನಮ್ಮಲ್ಲಿವೆ. ಇವುಗಳಲ್ಲಿ ಕೆಲವು ನಂಬಿಕೆಗಳಾಗಿದ್ದರೆ ಇನ್ನೂ ಕೆಲವು ವೈಜ್ಞಾನಿಕ ವಿವರಣೆಗಳನ್ನು ಹೊಂದಿವೆ .
ನೀವು ಗರ್ಭಿಣಿಯಾದಮೇಲೆ ನಿಮ್ಮ ಮುಂದಿನ ಹುಡುಕಾಟ ಸುಲಭವಾಗಿ ಹೆರಿಗೆಯಾಗಲು ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಎಂಬುದು. ಇಲ್ಲಿ ಸುಲಭವಾಗಿ ಹೆರಿಗೆಯಾಗಲು ಉಪಯೋಗವಾಗುವ ಸಲಹೆಗಳು ಎಂದು ಪರಿಗಣಿಸಬಹುದಾದ ಕೆಲವು ಸಾಮಾನ್ಯ ಆಚರಣೆಗಳು ಮತ್ತು ಅವುಗಳ ವೈಜ್ಞಾನಿಕ ಕಾರಣಗಳನ್ನು ನೀಡಲಾಗಿದೆ. ಅವುಗಳೆಂದರೆ:
ಬಳೆ ತೊಡಿಸುವ ಸಮಾರಂಭ : " ಬಳೆಗಳು ಗರ್ಭಿಣಿಯರಿಗೆ ಬೇಬಿ ಸ್ನಾನದ ಸಮಯದಲ್ಲಿ ಮಹಿಳೆಯರಿಗೆ ಕೊಡುಗೆ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಬಳೆಗಳು ಮಾಡುವ ಸದ್ದು ಹುಟ್ಟುವ ಮಗುವಿನ ಶ್ರವಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಶಾಂತ್ ಹಾಸ್ಪಿಟಲ್ಸ್ ನ ಸ್ತ್ರೀರೋಗ ತಜ್ಞ ಡಾ ಗೀತಾ ಹರಿಪ್ರಿಯಾ ಹೇಳುತ್ತಾರೆ. ಭ್ರೂಣವು ಗ್ರಹಣ ಶಕ್ತಿಯನ್ನು ಪಡೆಯುತ್ತದೆ ಮತ್ತು ಹೀಗೆ ಬಳೆ ತೊಡುವುದರಿಂದ ಹೆರಿಗೆ ಸುಲಭವಾಗುತ್ತದೆ.
ಹೆರಿಗೆಯ ಸ್ಥಳ: ಜನರು ಬಳೆಗಳನ್ನು ಧರಿಸಿದರೆ ಹೆರಿಗೆಯ ಸಂದರ್ಭದಲ್ಲಿ ಸುಲಭವಾಗುತ್ತದೆ ಎಂದು ಹೇಗೆ ನಂಬುತ್ತಾರೋ ಹಾಗೆ ಜನ್ಮ ಸ್ಥಳವೂ ಕೂಡ ಗರ್ಭಿಣಿಯರಿಗೆ ಭಾರತೀಯ ಸಂಪ್ರದಾಯದಲ್ಲಿ ಮುಖ್ಯವಾದ ಸ್ಥಾನ ನೀಡಲಾಗಿದೆ. ಮೊದಲ ಹೆರಿಗೆಯ ಸಮಯದಲ್ಲಿ ಮಹಿಳೆಯರು ಹೆರಿಗೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಆಕೆಯ ಪೋಷಕರ ಮನೆಯಲ್ಲಿಯೇ ಇರುತ್ತಾಳೆ. ಇದು ಸುಲಭ ಹೆರಿಗೆಯ ಪ್ರಮುಖ ಸಲಹೆಗಳಲ್ಲಿ ಒಂದಾಗಿದೆ.
ಪ್ರಯಾಣಕ್ಕೆ ಆದ್ಯತೆ : ಗರ್ಭಿಣಿ ಮಹಿಳೆಯರು ಗರ್ಭಪಾತದ ಅಪಾಯವನ್ನು ತಪ್ಪಿಸಲು ಏಳನೇ ಅಥವಾ ಒಂಬತ್ತನೇ ತಿಂಗಳಲ್ಲಿ ಅವರ ತವರು ಮನೆಗೆ ಹೋಗುತ್ತಾರೆ. ಅದೇ ರೀತಿ, ಅವರು ಲೈಂಗಿಕ ಸಂಪರ್ಕವನ್ನು ತಪ್ಪಿಸಲು ಮತ್ತೆ ಹೆರಿಗೆಯಾದ ಮೂರು ತಿಂಗಳ ನಂತರ ತಮ್ಮ ಗಂಡನ ಮನೆಗೆ ತೆರಳುತ್ತಾರೆ.
ಸಂಗೀತ ಆಲಿಸುವುದು : ಅಧ್ಯಯನಗಳ ಪ್ರಕಾರ ಸಂಗೀತ, ಗರ್ಭಿಣಿ ಮಹಿಳೆಯರಲ್ಲಿ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಬಲ್ಲ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಭ್ರೂಣದ ಕೇಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹ ಸಹಾಯ ಮಾಡುತ್ತದೆ. ಒತ್ತಡಕ್ಕೊಳಗಾದ ಗರ್ಭಿಣಿಯ ಪ್ರಸವದ ಸಮಯಕ್ಕಿಂತ ಮೊದಲು ಹೆರಿಗೆಯಾಗುವುದು ಅಥವಾ ಕಡಿಮೆ ತೂಕವಿರುವ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳು ಹೆಚ್ಚು!
ವಿಶೇಷ ಆಹಾರ : ಗರ್ಭಿಣಿಯರಿಗೆ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ನೀವು ಬಳೆ ಧರಿಸಿದರೆ ಪ್ರಸವ ಸರಾಗವಾಗುತ್ತದೆ ಎಂದು ಭಾವಿಸಿದರೆ, ಒಂದು ಸಮತೋಲಿತ ಆಹಾರ ಕೂಡ ಅಷ್ಟೇ ಮುಖ್ಯ. ತಮ್ಮ ಆಚರಣೆಗಳಲ್ಲಿ ಈ ಆಹಾರದ ಪದ್ದತಿಯನ್ನು ಹೊಂದಿರದ ಎಲ್ಲಾ ಮಹಿಳೆಯರು, ಸುಲಭ ಹೆರಿಗೆಗೆ ಸಹಾಯಕವಾಗಲು ಸಮತೋಲಿತ ಆಹಾರ ಸೇವಿಸುವುದು ಪ್ರಮುಖ ಸಲಹೆ.
ತುಪ್ಪ ಬಳಸಿ : ಭಾರತೀಯ ಸಂಪ್ರದಾಯದಂತೆ ಗರ್ಭಿಣಿ ಮಹಿಳೆ ಏಳನೇ ತಿಂಗಳಲ್ಲಿ ತನ್ನ ತವರು ಮನೆಗೆ ಹೋಗುವಾಗ ಅವರು ತಮ್ಮ ಪತಿಯ ಮನೆಯಿಂದ ತುಪ್ಪವನ್ನು ಒಯ್ಯುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ಗರ್ಭಿಣಿಯಾಗಿದ್ದಾಗ ತುಪ್ಪ ಬಳಸಿದರೆ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಸುಲಭ ಹೆರೆಗೆಗೆ ಉತ್ತಮ ಸಲಹೆ.
ಸಮಾರಂಭಗಳು ಮತ್ತು ಆಚರಣೆಗಳು : ಗರ್ಭಧಾರಣೆಯ ಅವಧಿಯಲ್ಲಿ, ಆಕೆಯನ್ನು ಆಕೆಯ ಪೋಷಕರು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಬಹಳ ವಿಶೇಷವಾಗಿ ಸತ್ಕರಿಸುತ್ತಾರೆ. ಇದು ಗರ್ಭಿಣಿಯರಿಗೆ ಸಂತೋಷ ಮತ್ತು ಶಾಂತವಾಗಿರಲು ಸಹಾಯ ಮಾಡುತ್ತದೆ.
ಇವು ನಿರಾಳವಾದ ಮನಸ್ಸಿನಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ನಿಮ್ಮ ಹೆರಿಗೆ ಸುಲಭವಾಗಿ ಆಗಲು ಬಹಳ ಮುಖ್ಯವಾಗಿರುವ ಸಲಹೆಗಳಾಗಿವೆ.



Click it and Unblock the Notifications