Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಮಗುವಿನ ಸವಿನಿದ್ದೆಗೆ ಕೆಲವು ಟಿಪ್ಸ್
ಮನುಷ್ಯನಿಗೆ ಆರೋಗ್ಯವಂತನಾಗಿರಲು ಸರಿಯಾದ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸರಿಯಾದ ನಿದ್ದೆ ಕೂಡ. ಎಲ್ಲಾ ವಯಸ್ಸಿನವರಿಗೂ ಸಹ ಸರಿಯಾದ ಸಮಯಕ್ಕೆ ನಿರ್ದಿಷ್ಟಾವಧಿಯ ನಿದ್ರೆ ಅತ್ಯಗತ್ಯ! ಅದರಂತೆ ಅಂಬೆಗಾಲಿಡುವ ಪುಟ್ಟ ಮಗುವಿಗೂ ಕೂಡ ಅದರ ಸರಿಯಾದ ಬೆಳವಣಿಗೆ ನಿದ್ರೆ ಬೇಕೆ ಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡಿದಷ್ಟೂ ಒಳ್ಳೆಯದು. ನೀವು ನಿಮ್ಮ ಮಗು ಮಲಗುವ ನಿರ್ದಿಷ್ಟ ಸಮಯವನ್ನು ನಿರ್ಧಾರ ಮಾಡಿ ಅದೇ ಸಮಯವನ್ನು ನಿತ್ಯವೂ ಅನುಸರಿಸಿದರೆ ನಿಮ್ಮ ನಿಮ್ಮಲ್ಲಿ ಗೊಂದಲಗಳು ಹಾಗೂ ಕಾಳಜಿ ಖಂಡಿತವಾಗಿ ಹೆಚ್ಚಾಗುತ್ತದೆ. ಮಗು ಮಲಗುವ ವಿಧಾನವಾಗಿರಬಹುದು, ಅಥವಾ ಅವರು ಮಲಗುವ ಮುನ್ನ ಹಾಸುವ ಹಾಸಿಗೆಯ ವಾಡಿಕೆಗಳಾಗಿರಬಹುದು. ಮಗುವಿನ ಸರಿಯಾದ ನಿದ್ರೆಗೆ ಅಗತ್ಯವಾದವುಗಳನ್ನು ಮಾಡುವುದು ನಿಮಗೆ ಆರಂಭದಲ್ಲಿ ತುಸು ಕಷ್ಟವೆನಿಸಬಹುದು.
ನಿಮಗೆ ಈ ಬಗ್ಗೆ ಸಮಸ್ಯೆಯಿದ್ದರೆ ಖಂಡಿತವಾಗಿ ನಾವು ನಿಮಗೆ ಸೂಕ್ತ ಸಲಹೆಯನ್ನು ನೀಡಬಲ್ಲೆವು. ನಿಮ್ಮ ಪುಟ್ಟ ಕಂದ ಮಲಗುವ ಹೊತ್ತನ್ನು ಇಂತಹುದೇ ಸಮಯ ಎಂದು ನಿರ್ಧರಿಸುವುದು ಕಷ್ಟ. ಏಕೆಂದರೆ ಅವರು ಮಲಗುವ ಸಮಯ ಅವರ ಆಸಕ್ತಿ ಹಾಗೂ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ!
ಈ ಕೆಳಗಿನ ಕೆಲವು ಸಲಹೆಗಳು ನಿಮ್ಮ ಮಗು ಮಲಗುವ ಸಮಯವನ್ನು ನಿರ್ಧರಿಸಲು ಅಥವಾ ಮಗುವಿಗೆ ಸರಿಯಾದ ಸಮಯಕ್ಕೆ ಮಲಗುವ ವ್ಯವಸ್ಥೆಯನ್ನು ಮಾಡಲು ಸಹಾಯಕವಾಗಬಹುದು.

ವಿಶೇಷ ಸಮಯ
ಮಗು ಮಲಗುವ ಸಮಯವನ್ನು ನಿರ್ಧರಿಸಲು ಬೇಕಾಗುವ ಪ್ರಮುಖ ಅಂಶ, ಮಕ್ಕಳು ಮಲಗಲು ವಿಶೇಷ ಸಮಯವನ್ನು ಆಯ್ಕೆ ಮಾಡುವುದು. ಇದು ನಿಮಗೆ ಅವರ ಮಲಗುವ ಸಮಯವನ್ನು ಅವರ ದಿನದ ಚಟುವಟಿಕೆಯ ಭಾಗವಾಗಿ ಮಾಡಲು ಸಹಾಯಕವಾಗುತ್ತದೆ.

ರಾತ್ರಿ ಊಟ
ನಿಮ್ಮ ಮಗು ರಾತ್ರಿ ನಿದ್ರೆ ಮಾಡುವ ಮುನ್ನ ಊಟ ಮಾಡದೇ ಮಲಗಲು ಬಿಡಬೇಡಿ. ಊಟ ಮಾಡದೆ ಮಲಗಿದರೆ ಅವರು ರಾತ್ರಿ ಮತ್ತೆ ಮತ್ತೆ ಎಚ್ಚರಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ನಿಮ್ಮ ಕಂದಮ್ಮಗಳಿಗೆ ಆರೋಗ್ಯಕರವಾದ ಊಟವನ್ನು ನೀಡಿ ಅವರ ನಿದ್ದೆಯನ್ನು ಸುಖಕರವಾಗಿಸಿ.

ಉಡುಪು ತೊಡಿಸಿ
ಬಿಸಿ ನೀರಿನ ಸ್ನಾನವನ್ನು ಮಾಡಿಸಿದ ನಂತರ ಸಡಿಲವಾದ ಆರಾಮದಾಯಕವಾದ (ನೈಟ್ ಡ್ರೆಸ್) ಉಡುಗೆಗಳನ್ನು ತೊಡಿಸಿ. ಇದು ನಿಮ್ಮ ಮುದ್ದು ಮಗುವಿನ ನಿಶ್ಚಿಂತ ನಿದ್ರೆಗೆ ಸಹಕಾರಿಯಾಗುತ್ತದೆ.

ಆರೋಗ್ಯಕರವಾದ ಅಭ್ಯಾಸಗಳು
ಆರೋಗ್ಯಕರವಾದ ಅಭ್ಯಾಸಗಳು ನಿಮ್ಮ ಮಗುವಿನ ನಿದ್ರೆಗೆ ಸಹಾಯಕವಾಗಬಹುದು. ಮಲಗುವ ಮುನ್ನ ಅವರ ಮುಖವನ್ನು ತೊಳೆಯುವುದು, ನ್ಯಾಪಿ ಬದಲಾಯಿಸುವುದು, ಹಲ್ಲು ಉಜ್ಜುವುದು ಈ ಅಭ್ಯಾಸಗಳನ್ನು ದಿನವೂ ರೂಢಿಸಿಕೊಂಡರೆ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.

ಮಲಗುವಾಗ ಕಥೆಗಳು
ನಿಮ್ಮ ಮಗು ರಾತ್ರಿ ನೀವು ಹೇಳುವ ಕಥೆಗಳನ್ನು ಅರ್ಥ ಮಾಡಿಕೊಳ್ಳದೇ ಇರಬಹುದು. ಆದರೂ ಅವರು ಮಲಗುವ ವರಗೆ ಅವರಿಗೆ ಉತ್ತಮವಾದ ಕಥೆಗಳನ್ನು ಹೇಳಿ. ಮಗು ಕಥೆಯನ್ನು ಅರ್ಥ ಮಾಡಿಕೊಳ್ಳದಿದ್ದರೂ ದಿನವೂ ಕೇಳುವ ಕಥೆ ಮಗು ಸುಂದರ ನಿದ್ರೆಗೆ ಜಾರುವಂತೆ ಮಾಡಬಹುದು.

ಮೃದು ಸಂಗೀತವನ್ನು ಕೇಳಿಸಿ
ಶಾಂತಿಯತ ಮನಸ್ಸಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಇದು ಮಕ್ಕಳಿಗೂ ಕೂಡ ಅನ್ವಯಸುತ್ತದೆ. ಆದ್ದರಿಂದ ಮೃದುವಾದ ಸಂಗೀತವನ್ನು ಆಲಿಸಿದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ನಿಮ್ಮ ಮಗು ಆರಾಮವಾಗಿ ಮಲಗಲು ಅವರಿಗೆ ಬೇರೆ ಯಾವುದೇ ಸದ್ದು ಕೇಳಿಸದಂತೆ ಮೃದುವಾಗಿ ಸಂಗೀತವನ್ನು ಕೇಳಿಸಿ. ಇದರಿಂದ ಮಗು ರಗಳೆ ಮಾಡದೆ ಶೀಘ್ರ ಮಲಗಬಹುದು.

ಶುಭರಾತ್ರಿಯ ಶುಭಾಷಯ ತಿಳಿಸಿ
ನಿಮ್ಮ ಮಗುವಿಗೆ ಶುಭ ರಾತ್ರಿಯನ್ನು ಹೇಳಿವ ಮೂಲಕ ಅವರ ಮಲಗುವ ಸಮಯವನ್ನು ಅವರಿಗೆ ನೆನಪಿಸಿ. ಜೊತೆಗೆ ಮೃದುವಾಗಿ ನಿಮ್ಮ ಮಗುವನ್ನು ಚುಂಬಿಸಿ ಪ್ರೀತಿಯಿಂದ ಅಪ್ಪಿಕೊಂಡು ಮಲಗಿಸಿ. ಇದರಿಂದ ಮಗು ಯಾವುದೇ ಭೀತಿಯಿಲ್ಲದೇ ಮಲಗಬಹುದು.

ಮಲಗುವ ಪರಿಸರ
ನಿಮ್ಮ ಮಗುವಿಗೆ ಸುರಕ್ಷಿತತೆಯ ಭಾವನೆಯನ್ನು ಮೂಡಿಸದಿದ್ದರೆ ನಿಮ್ಮ ಮಗುವನ್ನು ಮಲಗಿಸುವ ಪ್ರಯತ್ನ ವಿಫಲವಾದಂತೆ! ಆದ್ದರಿಂದ ಮಗು ಮಲಗುವ ಹಾಸಿಗೆಯಲ್ಲಿ ದಿಂಬು ಅಥವಾ ಗೊಂಬೆಯಂತಹ ವಸ್ತುಗಳನ್ನಿಟ್ಟು ಅವರಿಗೆ ಜೊತೆಯಲ್ಲಿ ಯಾರಾದರೂ ಇದ್ದಾರೆ ಎನ್ನುವ ಭರವಸೆಯನ್ನು ನೀಡಿ. ಯಾವುದೇ ಭಯವಿಲ್ಲದೇ ನಿಮ್ಮ ಮಗು ಆರಾಮವಾಗಿ ಮಲಗಲು ಸಹಾಯಮಾಡಿ.



Click it and Unblock the Notifications











