Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ತಂದೆಯಾಗಲು ಆತ ಸಿದ್ಧ ಎನ್ನುವ ಸೂಚನೆಗಳು
ಎಲ್ಲಾ ಪುರುಷರು ಮಕ್ಕಳನ್ನು ಇಷ್ಟಪಡುವುದಿಲ್ಲ. ಆದರೆ ಕೆಲವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಮತ್ತು ಅವರು ಮದುವೆಯಾದ ಒಂದೆರಡು ವರ್ಷದ ಒಳಗಡೆ ಮಗು ಪಡೆಯಲು ಬಯಸುತ್ತಾರೆ. ಆದಾಗ್ಯೂ ಕೆಲವು ಪುರುಷರು ನೈಸರ್ಗಿಕವಾಗಿ ಮಗುವಿನೊಂದಿಗೆ ನೆಲೆಸಲು ಒಲವು ತೋರಿಸುವುದಿಲ್ಲ. ಅವರು ತಮ್ಮದೇ ಮಗು ಪಡೆಯಲು ತಮ್ಮೊಳಗಿನ ಭಾವನೆ ಹೊರಬಂದು ಬಯಕೆ ಮೂಡಬೇಕೆಂದು ಬಯಸುತ್ತಾರೆ. ಹೆಚ್ಚಿನ ಪುರುಷರಿಗೆ ಮಗು ಪಡೆಯಲು ಸಂಬಂಧದಲ್ಲಿ ಸ್ವಲ್ಪ ಸಮಯ ಬೇಕಾಗುತ್ತದೆ. ಮಗು ಪಡೆಯುವ ಮೊದಲು ಅವರು ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಯೋಜನೆ ಹಾಕಿಕೊಳ್ಳುತ್ತಾರೆ.
ಪುರುಷರು ಮಗು ಪಡೆಯಲು ತಮ್ಮ ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಮತ್ತು ಪ್ರೋತ್ಸಾಹ ಬಯಸುತ್ತಾರೆ. ಕೆಲವರಿಗೆ ಮಗು ಬೇಕೆನ್ನುವ ಮನಸ್ಸಿದ್ದರೂ ಅವರಿಗೆ ಯಾವ ಸಮಯದಲ್ಲಿ ಇದನ್ನು ಪಡೆಯಬೇಕೆಂಬ ಸ್ಪಷ್ಟತೆ ಮತ್ತು ಮಗು ಪಡೆಯಲು ಕರ್ಮದ ಮಧ್ಯಪ್ರವೇಶ ಬಯಸುತ್ತಾರೆ. ಮಕ್ಕಳನ್ನು ತುಂಬಾ ಏಕಾಗ್ರತೆಯಿಂದ ನೋಡುವುದು, ಸಂಬಂಧಿಕರು ಅಥವಾ ಸ್ನೇಹಿತರ ಮಕ್ಕಳು ಅಥವಾ ಮಗುವಿಗೆ ತುಂಬಾ ಹತ್ತಿರವಾಗುವುದು ಇತ್ಯಾದಿ ನೀವು ಮಗು ಪಡೆಯಲು ತಯಾರಾಗಿದ್ದೀರಿ ಎನ್ನುವುದರ ಲಕ್ಷಣವಾಗಿದೆ. ಆದರೆ ಇದು ಅಷ್ಟೊಂದು ಸುಲಭ ನಿರ್ಧಾರವಲ್ಲ.

ಪುರುಷರು ಯಾವಾಗಲೂ ತಮ್ಮ ಮತ್ತು ಮಗು ಸಹಿತ ತಮ್ಮ ಕುಟುಂಬದ ಭವಿಷ್ಯ ಸುರಕ್ಷಿತವಾಗಿಡಲು ಬಯಸುತ್ತಾರೆ. ಇದರ ಬಳಿಕ ಅವರು ಮಗುವಿನ ಬಗ್ಗೆ ಯೋಚಿಸುತ್ತಾರೆ. ವೃತ್ತಿ ಅಥವಾ ಸಂಬಂಧದಲ್ಲಿ ಕನಸು ಹಾಗೂ ಆಸೆಗಳು ಈಡೇರಿದ ಬಳಿಕ ಅವರು ಮಗುವಿಗೆ ಯೋಜನೆ ಹಾಕುತ್ತಾರೆ. ಮಗುವನ್ನು ಹೇಗೆ ನೋಡಿಕೊಳ್ಳುವುದು ಮತ್ತು ಅವರ ಭವಿಷ್ಯದ ಬಗ್ಗೆ ಯೋಚಿಸುವ ಮೂಲಕ ಕೆಲವು ಪುರುಷರು ಮಗು ಪಡೆಯಲು ಹಿಂದೇಟು ಹಾಕುತ್ತಾರೆ. ಹಿರಿಯರು, ಸ್ನೇಹಿತರು ಮತ್ತು ಸಂಬಂಧಿಕರು ತಮ್ಮ ಮಕ್ಕಳನ್ನು ಪಡೆದು ಸಂತಸದಿಂದ ಇರುವುದನ್ನು ನೋಡಿ ಕೆಲವು ಪುರುಷರು ಮಗು ಪಡೆಯಲು ಬಯಸುತ್ತಾರೆ.
1. ಮಕ್ಕಳನ್ನು ತದೇಕಚಿತ್ತದಿಂದ ಗಮನಿಸುವುದು
ಕೆಲವೊಮ್ಮೆ ಗೊತ್ತಿದ್ದೋ ಅಥವಾ ಇನ್ಯಾವುದೋ ರೀತಿಯಲ್ಲಿ ನಿಮ್ಮ ಸುತ್ತಲು ಇರುವ ಮಕ್ಕಳನ್ನು ತದೇಕಚಿತ್ತದಿಂದ ಗಮನಿಸುತ್ತೀರಿ. ಅವರು ನಿಮ್ಮ ಸುತ್ತ ದೀರ್ಘ ಕಾಲದಿಂದ ಇರಬಹುದು. ಆದರೆ ನಿಮ್ಮ ಮನಸ್ಸಿನಲ್ಲಿ ಮಗುವಿನ ಬಯಕೆ ಉಂಟಾದಾಗ ಮಾತ್ರ ನೀವು ಅವರನ್ನು ಗಮನಿಸಲು ಆರಂಭಿಸುತ್ತೀರಿ. ನಿಮ್ಮ ಸಂಬಂಧದ ಯಾವುದೇ ಹಂತದಲ್ಲಿ ಇದು ನಿಮಗೆ ಅರಿವಿಲ್ಲದಂತೆ ನಡೆಯಬಹುದು. ನೀವು ಮಗುವಿಗೆ ತಯಾರಾಗಿದ್ದೀರಿ ಮತ್ತು ಮಗುವಿನ ಬಗ್ಗೆ ಚಿಂತಿಸುತ್ತಿದ್ದೀರಿ ಎನ್ನುವುದರ ಲಕ್ಷಣ ಇದಾಗಿದೆ.
2. ಸ್ಥಿರ ವೃತ್ತಿ
ನೀವು ಯಾವುದಾದರೂ ಸ್ಥಿರ ವೃತ್ತಿ ಪಡೆದರೆ ಮತ್ತು ಸ್ಥಿರತೆ ಬಗ್ಗೆ ಮತ್ತಷ್ಟು ಯೋಚಿಸುತ್ತಿದ್ದರೆ, ಸಂಬಳ ಮುಂತಾದ ವಿಷಯಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರೆ ಆಗ ನೀವು ಮಗು ಪಡೆಯುವ ಬಗ್ಗೆ ಚಿಂತಿಸುತ್ತಿದ್ದೀರಿ ಎಂದರ್ಥ. ತನ್ನ ಕುಟುಂಬ ಮತ್ತು ಭವಿಷ್ಯದ ಬಗ್ಗೆ ಯೋಜನೆ ಮಾಡಿಕೊಳ್ಳುವಾಗ ಪುರುಷರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಸ್ಥಿರತೆ ಇಚ್ಛಿಸುತ್ತಾರೆ.
3. ಮಗುವಿನ ಬಗ್ಗೆ ಚರ್ಚೆ
ದೀರ್ಘಾವಧಿಯ ಸಂಬಂಧ ಮತ್ತು ಮದುವೆಯ ಸಂಬಂಧಗಳಲ್ಲಿ ಮಗು ಪಡೆಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪುರುಷರು ಮಗು ಪಡೆಯಲು ತಯಾರಿದ್ದಾರೆಂದು ಭಾವಿಸಿದಾಗ ಅವರ ಮಾತುಗಳಲ್ಲಿ ಮಗು ಮತ್ತು ಮಕ್ಕಳ ಬಗ್ಗೆ ಮಾತುಗಳು ಬರುತ್ತದೆ. ನೀವು ಮಕ್ಕಳ ಬಗ್ಗೆ ಹಾಗೂ ಅವರ ಯೋಜನೆಗಳ ಬಗ್ಗೆ ಹಿಂದಿಗಿಂತಲೂ ಹೆಚ್ಚಿಗೆ ಮಾತನಾಡುತ್ತಿದ್ದರೆ, ನಿಮಗೆ ಮಗುವಿನ ಬಯಕೆಯಾಗಿದೆ ಎಂದು ತಿಳಿಯಬಹುದು.
4. ಮಗುವಿನ ಜತೆಗಿರಲು ಬಯಸುವುದು
ಪುರುಷರು ತಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಸೋದರ ಯಾ ಸೋದರಿಯ ಮಕ್ಕಳು ತಮ್ಮ ಮನೆಯಲ್ಲಿ ಇರಬೇಕೆಂದು ಬಯಸುತ್ತಾರೆ. ಸಂಬಂಧದಲ್ಲಿನ ಕೆಲವು ಮಹಿಳೆಯರಿಗೆ ಇದು ಅರ್ಥವಾಗದೆ ಇರಬಹುದು. ಆದರೆ ಮಗು ಪಡೆಯಲು ಪುರುಷರು ತುಂಬಾ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎನ್ನುವ ಲಕ್ಷಣ ಇದಾಗಿದೆ ಎಂದು ಪರಿಗಣಿಸಲಾಗಿದೆ.
5. ಪರೋಕ್ಷ ಮಾತುಗಳು
ದೀರ್ಘ ಸಮಯದಿಂದ ಮಗು ಪಡೆಯಲು ಹಿಂದೇಟು ಹಾಕುತ್ತಿರುವ ಪುರುಷರು ನೇರವಾಗಿ ಈ ವಿಷಯದ ಬಗ್ಗೆ ಮಾತನಾಡಲು ಮುಜುಗರ ಪಡಬಹುದು. ಆದರೆ ಮಗು ಪಡೆಯಲು ತಾನು ಸಿದ್ಧ ಎನ್ನುವ ಬಗ್ಗೆ ಪರೋಕ್ಷ ಚಿಹ್ನೆ ಅಥವಾ ಸೂಚನೆಗಳನ್ನು ನೀಡಬಹುದು. ತಮ್ಮ ಪೋಷಕರು ಅಜ್ಜಅಜ್ಜಿಯಾಗುವುದು ಅಥವಾ ಸಂಗಾತಿ ತಾಯಿಯಾಗುವ ಬಗ್ಗೆ ಮಾತನಾಡಬಹುದು.
6. ಅಧ್ಯಯನ ಮತ್ತು ಸಲಹೆ
ಯಾವನೇ ಪುರುಷ ಮಗುವಿನ ಬಗ್ಗೆ ಯೋಚಿಸಲು ಆರಂಭಿಸಿದಾಗ ಆತ ತಂದೆಯಾಗುವ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಧ್ಯಯನ ನಡೆಸುತ್ತಾನೆ. ಆತ ಮಗುವಿಗಾಗಿ ಹಂಬಲಿಸುತ್ತಿದ್ದಾನೆ ಎನ್ನುವುದಕ್ಕೆ ಇಂದು ಬಲವಾದ ಸೂಚನೆಯಾಗಿದೆ.



Click it and Unblock the Notifications