Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ತಮ್ಮ ಅಥವ ತಂಗಿ ಬರುವುದನ್ನು ಹೀಗೆ ಹೇಳಿ
ಹೊಸದಾಗಿ ಹುಟ್ಟಿದ ಮಗುವಿಗೆ ಕುಟುಂಬದಲ್ಲಿ ತುಂಬು ಸ್ವಾಗತವಿರುತ್ತದೆ.ಅದೊಂದು ಸಂತೋಷದ ಸಮಯ.ಆದಾಗ್ಯೂ ನೀವು ಇನ್ನೊಂದು ಮಗುವನ್ನು ಎದುರು ನೋಡುತ್ತಿರುವಿರಾದರೆ ಮೊದಲ ಮಗುವಿಗೆ ಬರಲಿರುವ ಸಹೋದರ/ಸಹೋದರಿ ಬಗ್ಗೆ ಮೊದಲೇ ತಿಳಿಸಿ ಮಾನಸಿಕವಾಗಿ ಅದನ್ನು ತಯಾರು ಮಾಡುವುದು ಬಹಳ ಮುಖ್ಯ.ಮೊದಲ ಮಗು ನಿಮಗೆ ಪ್ರಪಂಚವಾಗಿಬಿಟ್ಟಿರುತ್ತದೆ ಅದನ್ನು ನೀವು ಮತ್ತು ಅದರ ಅಪ್ಪ ತುಂಬಾ ಪ್ರೀತಿಸಿರುತ್ತೀರಿ ಇದರಿಂದ ಆ ಮಗು ಸಂತೋಷಗೊಂಡಿರುತ್ತದೆ,ನಿಮ್ಮಿಬ್ಬರ ಕಾಳಜಿ ಮತ್ತು ಪ್ರೀತಿಯನ್ನು ಆ ಮಗು ಸಂಪೂರ್ಣವಾಗಿ ಆನಂದಿಸುತ್ತಿರುತ್ತದೆ.ಆದರೆ ಇದ್ದಕ್ಕಿದ್ದಂತೆ ತನ್ನ ಪ್ರೀತಿಯನ್ನು ಅಪ್ಪ ಅಮ್ಮ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುತ್ತಾರೆ ಎಂದರೆ ಆ ಮಗುವಿನ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಹುದು.
ಎರಡನೇ ಮಗು ಬರುತ್ತಿರುವುದು ಕೂಡ ಕುಟುಂಬದಲ್ಲಿ ಹೊಸ ಸಂತೋಷ ನೀಡುತ್ತದೆ.ಆದರೆ ನಿಮ್ಮ ಮೊದಲ ಮಗುವಿಗೆ ಇದರಿಂದ ಬೇರೆ ರೀತಿಯ ಪರಿಣಾಮ ಬೀರುವುದನ್ನು ತಡೆಯಬೇಕು.ಇದ್ದಕ್ಕಿದ್ದಂತೆ ಇನ್ನೊಂದು ಮಗು ಬಂದರೆ ಮೊದಲ ಮಗುವಿಗೆ ಅಭದ್ರತೆ ಕಾಡಬಹುದು ಆದ್ದರಿಂದ ಮೊದಲೇ ಇದರ ಬಗ್ಗೆ ತಿಳಿ ಹೇಳಿ.ತನಗೆ ಆಡಲು ಜೊತೆಗಾರ ಬರುತ್ತಾನೆಂದರೆ ಮಗು ಸಂತೋಷಗೊಳ್ಳುತ್ತದೆ.ಆದರೆ ಮಗುವಿಗೆ ಅಭದ್ರತೆ ಕಾದದಂತೆ ಕಾಳಜಿ ವಹಿಸಿ.

ಈ ಪರಿಣಾಮವನ್ನು ಹದಗೊಳಿಸಲು ನೀವು ನಿಮ್ಮ ಕಂದನನ್ನು ಅವನಿಗೊಂದು ಸಹೋದರ ಅಥವಾ ಸಹೋದರಿ ಬರುವುದರ ಬಗ್ಗೆ ನಿಧಾನವಾಗಿ ತಿಳಿಸಿ ಹೇಳಿ.ಮಗುವಿಗೆ ಮುಂದೆ ಬರುವ ಮಗುವಿನ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಬೇಕೇ ಹೊರತು ಯಾವುದೇ ರೀತಿಯ ಕೆಟ್ಟ ಪರಿಣಾಮವಲ್ಲ.ನಿಮ್ಮ ಮೊದಲ ಮಗು ತನ್ನ ಜೊತೆಗೆ ಆಟವಾಡಲು ಸ್ನೇಹಿತನ ರೂಪದಲ್ಲಿ ಸಹೋದರ ಬರುವುದನ್ನು ಒಪ್ಪಿಕೊಂಡರೆ ನಿಮಗೆ ಸಂತೋಷವಾಗುತ್ತದೆ.ಆದರೆ ವಾಸ್ತವವಾಗಿ ಆ ಮಗುವಿಗೆ ಸಹೋದರೆ ಎಂದರೆ ಏನು ಎಂಬುದು ಅರ್ಥವಾಗಿರುವುದಿಲ್ಲ.ಜೊತೆಗೆ ಬರುವ ಮಗು ಅಪ್ಪ ಅಮ್ಮ ನ ಕಾಳಜಿ,ಪ್ರೀತಿಯಲ್ಲಿ ಮತ್ತು ಸಮಯದಲ್ಲಿ ತನ್ನ ಪಾಲನ್ನು ಸ್ವಲ್ಪ ಮಟ್ಟಿಗೆ ತೆಗೆದುಕೊಳ್ಳುತ್ತದೆ ಎಂಬುದರ ಅರಿವಿರುವುದಿಲ್ಲ.ಈ ಕಾರಣಕ್ಕಾಗಿ ನೀವು ನಿಮ್ಮ ಪುಟ್ಟ ಕಂದನಿಗೆ ಬರುವ ಸಹೋದರನ ಬಗ್ಗೆ ತಿಳಿ ಹೇಳಬೇಕು.ನಿಮ್ಮ ಕಂದನಿಗೆ ಸಹೋದರ ಬರುವುದನ್ನು ತಯಾರು ಮಾಡಲು ಅದರ ಬಗ್ಗೆ ತಿಳಿ ಹೇಳಲು ಈ ಕೆಳಗೆ ಕೆಲವು ಟಿಪ್ಸ್ ನೀಡಲಾಗಿದೆ.ಓದಿ ನೋಡಿ ಮತ್ತು ನಿಮ್ಮ ನವಶಿಶುವನ್ನು ಸ್ವಾಗತಿಸಲು ತಯಾರಾಗಿ.
1.ಯಾವಾಗ ವಿಷಯವನ್ನು ಹೇಳಬೇಕು ಎಂಬುದನ್ನು ನಿರ್ಧರಿಸಿ:
ನೀವು ಗರ್ಭಿಣಿಯಾದಾಗ ನಿಮ್ಮ ಕಂದನಿಗೆ ಆತನ ಸಹೋದರ ಬರುತ್ತಿರುವುದರ ಬಗ್ಗೆ ಹೇಗೆ ಹೇಳಬೇಕು ಎಂಬುದನ್ನು ಕೂಡ ನೀವೇ ನಿರ್ಧರಿಸಬೇಕು.ಇದರಲ್ಲಿ ಉತ್ತಮ ವಿಧಾನ ಎಂದರೆ ಸ್ವಲ್ಪ ದಿನಗಳವರೆಗೆ ಕಾಯುವುದು.ನೀವು ಗರ್ಭಿಣಿ ಆದ ತಕ್ಷಣ ನಿಮ್ಮ ಪುಟ್ಟ ಕಂದನಿಗೆ ಹೇಳಹೋದರೆ ನಿಮ್ಮ ಕಂದ ತನ್ನ ಸಹೋದರ ಇಂದು ಬರುತ್ತಾನ ?ಎಂಬ ಪ್ರಶ್ನೆಗೆ ನೀವು ಕಕ್ಕಾಬಿಕ್ಕಿ ಆಗಬಹುದು.ಆದಾಗ್ಯೂ ಆಟ ನಿಮ್ಮ ಬೆಳಗ್ಗಿನ ಬೇನೆ ಬಗ್ಗೆ (ಮಾರ್ನಿಂಗ್ ಸಿಕ್ನೆಸ್ಸ್) ಪ್ರಶ್ನಿಸಲು ಪ್ರಾರಂಭಿಸಿದರೆ ಅದು ನಿಮ್ಮ ಮಗುವಿಗೆ ವಿಷಯವನ್ನು ಹೇಳಲು ಸರಿಯಾದ ಸಮಯ.ಈ ರೀತಿ ಪುಟ್ಟ ಕಂದನನ್ನು ಇನ್ನೊಂದು ಮಗುವಿನ ಆಗಮನಕ್ಕೆ ತಯಾರು ಮಾಡಿ.
2.ನಿಮ್ಮ ಕಂದನಿಗೆ ವಿಷಯ ತಿಳಿಸಲು ಸರಿಯಾದ ಮಾರ್ಗ ಕಂಡುಕೊಳ್ಳಿ:
ನೀವು ನಿಮ್ಮ ಅಂಬೆಗಾಲಿಡುವ ಪುಟ್ಟ ಕಂದನಿಗೆ ಯಾವಾಗ ಹೊಸ ಮಗು ಹುಟ್ಟುವುದರ ಬಗ್ಗೆ ಹೇಗೆ ವಿಷಯ ತಿಳಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ.ನಿಮ್ಮ ಮಗುವಿಗೆ ಇದರ ಬಗ್ಗೆ ತಿಳಿಸಲು ಯಾವುದಾದರೊಂದು ಬುದ್ದಿವಂತ ವಿಧಾನ ಹುಡುಕಿಕೊಳ್ಳಿ.ಪುಟ್ಟ ಕಂದನೊಂದಿಗೆ ಕುಳಿತು ಒಡಹುಟ್ಟಿದವರ ಬಗ್ಗೆ ಇರುವ ಪುಸ್ತಕವನ್ನು ಓದಲು ಪ್ರಾರಂಭಿಸಿ ಮತ್ತು ಆ ರೀತಿಯಲ್ಲಿ ವಿಷಯ ಹೇಳಿ.
3.ನಿಮ್ಮ ಮಗುವಿನ ಕ್ಷಣವನ್ನು ಆಚರಿಸಿ:
ನಿಮ್ಮ ಅಂಬೆಗಾಲಿಡುವ ಪುಟ್ಟ ಕಂದನನ್ನು ಸಂತೋಷಗೊಳಿಸಿ.ನೀವು ಮೊದಲ ಬಾರಿ ಗರ್ಭಿಣಿ ಆದಾಗ ತೆಗೆಸಿಕೊಂಡ ಫೋಟೋ ತೋರಿಸಿ ಮತ್ತು ಆ ಮಗು ಹುಟ್ಟಿದ ನಂತರದ ದಿನಗಳಲ್ಲಿ ತೆಗೆಸಿಕೊಂಡ ಫೋಟೋ ನಿಮ್ಮ ಪುಟ್ಟ ಕಂದನಿಗೆ ತೋರಿಸಿ ಆತನನ್ನು ಕುಶಿ ಪಡಿಸಿ.ಸಾಧ್ಯವಾದಷ್ಟು ಕಾಳಜಿ ಮತ್ತು ಪ್ರೀತಿಯನ್ನು ನೀಡಿ ನಂತರ ವಿಷಯ ತಿಳಿಸಿದಲ್ಲಿ ಆ ಮಗುವಿಗೆ ಬರಲಿರುವ ಸಹೋದರನ ಬಗ್ಗೆ ಮಾಹಿತಿ ದೊರೆಯುತ್ತದೆ.
4.ನಿಮ್ಮ ಮಗು ನಿಮ್ಮ ಆನಂದದಲ್ಲಿ ಸಂಪೂರ್ಣ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿ:
ನೀವು ಬರಲಿರುವ ಹೊಸ ಮಗುವಿಗಾಗಿ ರೂಂ ಒಂದನ್ನು ತಯಾರು ಮಾಡುತ್ತಿರುವಾಗ ಪುಟ್ಟ ಮಗುವು ನಿಮ್ಮೊಂದಿಗೆ ಭಾಗಿಯಾಗುವುದನ್ನು ಖಚಿತಪಡಿಸಿಕೊಳ್ಳಿ.ಅವನೂ ಕೂಡ ಆಸಕ್ತಿಯುತವಾಗಿ ಚಟುವಟಿಕೆಯಿಂದ ಭಾಗಿಯಾಗುವಂತೆ ನೋಡಿಕೊಳ್ಳಿ.ತನಗೆ ಬೇಡದ ಹಳೆಯ ಆಟಿಕೆಗಳನ್ನು ಬರಲಿರುವ ತನ್ನ ಸಹೋದರ/ಸಹೋದರಿಗೆ ಹಂಚಿಡುವಂತೆ ಆತನನ್ನು ಹುರಿದುಂಬಿಸಿ.ಈ ರೀತಿ ಮಾಡಿ ನಿಮ್ಮ ಪುಟ್ಟ ಮಗುವನ್ನು ಇನ್ನೊಂದು ಮಗುವಿನ ಆಗಮನಕ್ಕೆ ತಯಾರು ಮಾಡಬಹುದು.
5.ನಿಮ್ಮ ಅಂಬೆಗಾಲಿಡುವ ಪುಟ್ಟ ಕಂದನಿಗೆ ನೀವು ಬೇಕು!!
ನೆನಪಿರಲಿ ನಿಮ್ಮ ಮೊದಲ ಮಗುವಿಗೆ ನೀವು ಸದಾ ಬೇಕು.ಆತನಿಗೆ ಬೇರೇನೂ ತಿಳಿದಿರುವುದಿಲ್ಲ.ಹೊಸ ಮಗು ಹುಟ್ಟಿದಾಗ ಮೊದಲ ಮಗುವಿಗೆ ಅಭದ್ರತೆ ಕಾಡಬಹುದು.ಆದ್ದರಿಂದ ಆತನಿಗೂ ಸಾಕಷ್ಟು ಕಾಳಜಿ ನೀಡಿ, ಆತನಿಗೂ ಸರಿಯಾದ ಪ್ರಾಮುಖ್ಯತೆ ನೀಡಿ ಮತ್ತು ಸದಾ ಆತನನ್ನು ಗಮನಿಸುತ್ತಿರಿ.ನಿಮ್ಮ ಸಂತೋಷದಲ್ಲಿ ಆತನನ್ನೂ ಸೇರಿಸಿಕೊಳ್ಳಿ.ಅವನಿಗೆ ನೀನು ಹುಟ್ಟಿದಾಗ ತುಂಬಾ ಕ್ಯೂಟ್ ಆಗಿದ್ದೆ ಮತ್ತು ನಿಮ್ಮ ಪಾದಗಳು ಹೀಗೆ ಚಿಕ್ಕದಾಗಿತ್ತು ಎಂಬುದನ್ನೆಲ್ಲಾ ಹೇಳಿ ಆತನನ್ನೂ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಿ.
ಮೇಲೆ ಹೇಳಿದ ರೀತಿ ಮಾಡುವುದರ ಮೂಲಕ ನಿಮ್ಮ ಸಂತೋಷವನ್ನು ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಮೊದಲ ಮಗುವೂ ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಿ ತನ್ನ ಸಹೋದರ ಹುಟ್ಟುವುದನ್ನು ಎದುರು ನೋಡುವಂತೆ ತಯಾರುಮಾಡಿ.



Click it and Unblock the Notifications