Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
52ನೇ ವಯಸ್ಸಿನಲ್ಲಿ 62 ವರ್ಷದ ಸಂಜಯ್ ಮಿಶ್ರಾ ಜೊತೆ 2ನೇ ಮದುವೆಯಾದ್ರಾ ಮಹಿಮಾ ಚೌಧರಿ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಸುದ್ದಿಗಾಗಿ ಎಲ್ಲರು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಎಲ್ಲ ಸುದ್ದಿಗಳು ತಲುಪುತ್ತಿವೆ. ಆದರೆ.. ಹೀಗೆ ತಲುಪುವ ಈ ಸುದ್ದಿಗಳಲ್ಲಿ ಸತ್ಯ ಯಾವುದು..? ಸುಳ್ಳು ಯಾವುದು.. ? ಎಂದು ಫ್ಯಾಕ್ಟ್ ಚೆಕ್...
ಮಾಡುತ್ತಾ ಯಾರು ಕೂರುವುದಿಲ್ಲ. ಬದಲಿಗೆ ಕಣ್ಣಿಗೆ ಕಂಡಿದ್ದನ್ನೇ ಸತ್ಯ ಎಂದು ಅಂದುಕೊಳ್ಳುತ್ತಾರೆ. ಸುದ್ದಿ ನಿಜಾ ಎಂದು ಸುಲಭವಾಗಿ ನಂಬುತ್ತಾರೆ. ಬೇರೆಯವರನ್ನು ಕೂಡ ನಂಬಿಸುವ ಪ್ರಯತ್ನ ಮಾಡುತ್ತಾರೆ. ಸದ್ಯ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಅವರ ವಿಚಾರದಲ್ಲಿ ಇದೇ ಆಗಿದೆ.

ಹೌದು, ಮಹಿಮಾ ಚೌಧರಿ.. ಬಾಲಿವುಡ್‌ನ ಬೆಡಗಿ. ''ಪರ್‌ದೇಸ್''.. ''ಧಡ್ಕನ್''.. ''ದಿಲ್ ಕ್ಯಾ ಕರೇ''.. ''ದೀವಾನೆ''.. ''ಓಂ ಜೈ ಜಗದೀಶ್''.. ''ದಿಲ್ ಹೈ ತುಮಾರಾ''.. ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಮಹಿಮಾ ಚೌಧರಿ ಮೂರು ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಸದ್ಯ ಮಹಿಮಾ ಕ್ಯಾನ್ಸರ್‌ದಿಂದ ಚೇತರಿಸಿಕೊಂಡು ಚಿತ್ರರಂಗಕ್ಕೆ ಮರಳಿದ್ದಾರೆ. ಹೊಸ ಚಿತ್ರಗಳನ್ನು ಒಪ್ಪಿಕೊಂಡು ಅಭಿನಯಿಸಲು ಶುರು ಮಾಡಿದ್ದಾರೆ.
ಇಂಥಾ ಮಹಿಮಾ ಚೌಧರಿ ತಮ್ಮ 52ನೇ ವಯಸ್ಸಿನಲ್ಲಿ ಬಾಲಿವುಡ್‌ನ ಹಿರಿಯ ನಟ 62 ವರ್ಷದ ಸಂಜಯ್ ಮಿಶ್ರಾ ಜೊತೆ ಸದ್ದಿಲ್ಲದೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇದಕ್ಕೆ ಪೂರಕವಾಗಿ ಮದುವೆಯ ಫೋಟೊಗಳು ಕೂಡ ವೈರಲ್ ಆಗಿವೆ. ಆದರೆ.. ವಾಸ್ತವದಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು.
ಹೌದು, ಅಸಲಿಗೆ ಸಂಜಯ್ ಮಿಶ್ರಾ ಮತ್ತು ಮಹಿಮಾ ಚೌಧರಿ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆ ಚಿತ್ರದ ಹೆಸರು ದುರ್ಲಭ್ ಪ್ರಸಾದ್ ಕೀ ಶಾದಿ. ಸಿದ್ಧಾಂತ್ ರಾಜ್ ಸಿಂಗ್ ನಿರ್ದೇಶನದ ಈ ಚಿತ್ರ ಇದೇ ಡಿಸೆಂಬರ್ 19ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಮದುವೆಯಾಗುವ ದೃಶ್ಯ ಇದೆ. ಈ ದೃಶ್ಯದ ಫೋಟೊ ಮತ್ತು ಚಿತ್ರೀಕರಣ ನಡೆಯುವ ಸಮಯದಲ್ಲಿ ತೆಗೆದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿವೆ.
ಇನ್ನೂ ಈ ಫೋಟೊ ಮತ್ತು ವಿಡಿಯೋಗಳಿಗೆ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಮದುವೆ ನಡೆಯಿತು ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ಹಿನ್ನೆಲೆ ಹಲವರು ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಪರಸ್ಪರ ಹಾರ ಬದಲಿಸುತ್ತಿರುವ ಫೋಟೊ ಮತ್ತು ವಿಡಿಯೋಗಳನ್ನು ನೋಡಿ ಇಬ್ಬರು ನಿಜಕ್ಕೂ ಮದುವೆಯಾಗಿದ್ದಾರೆ ಎಂದುಕೊಂಡಿದ್ದಾರೆ. ಇನ್ನೂ ಕೆಲವರು ಶುಭಾಶಯವನ್ನು ಕೂಡ ಕೋರುತ್ತಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಇದೇ ಚಿತ್ರದ ಮತ್ತೊಂದು ಫೋಟೊ ವೈರಲ್ ಆಗಿತ್ತು. ವೈರಲ್ ಆದ ಆ ಫೋಟೊದಲ್ಲಿ ಕೂಡ ಮಹಿಮಾ ಚೌಧರಿ ವಧುವಿನ ಲುಕ್‌ನಲ್ಲಿದ್ದರು. ಆಗಲೂ ಕೂಡ ಗೊಂದಲಕ್ಕೀಡಾದ ಹಲವರು 52 ನೇ ವಯಸ್ಸಿನಲ್ಲಿ ಮಹಿಮಾ ಮತ್ತೊಂದು ಮದುವೆಯಾಗುತ್ತಿದ್ದಾರೆ ಎಂದು ಪುಕಾರು ಹಬ್ಬಿಸಿದ್ದರು. ಆದರೆ. ಮದುವೆ ನಡೆದಿದ್ದು ರಿಯಲ್ ಲೈಫ್‌ನಲ್ಲಿ ಅಲ್ಲ ಬದಲಿಗೆ ರೀಲ್‌ನಲ್ಲಿ ಮಾತ್ರ.
ಇನ್ನುಳಿದಂತೆ ಈ ಚಿತ್ರದಲ್ಲಿ ಸಂಜಯ್ ಮಿಶ್ರಾ ಅವರ ಮಗ ಅಂದರೆ ದುರ್ಲಭ್ ಮಿಶ್ರಾನ ಮಗ ಮುರಳಿಗೆ ಮೆಹಕ್ ಎನ್ನುವ ಹುಡುಗಿಯ ಮೇಲೆ ಪ್ರೇಮಾಂಕುರವಾಗಿರುತ್ತೆ. ಮಾತು ಮದುವೆ ಹಂತಕ್ಕೆ ಹೋಗುತ್ತೆ. ಆದರೆ.. ದುರ್ಲಭ್ ಮಿಶ್ರಾ ವಿಧುರ. ಮನೆಯಲ್ಲಿ ಬೇರೆ ಯಾವ ಮಹಿಳೆ ಇರದ ಹಿನ್ನೆಲೆ ಹುಡುಗಿಯ ಮನೆಯವರು ಹಿಂದೇಟು ಹಾಕುತ್ತಾರೆ. ಆಗ ಮಹಿಮಾ ಚೌಧರಿ ಅಂದರೆ ಬಬಿತಾ ಈ ದುರ್ಲಭ್ ಮಿಶ್ರಾ ಬದುಕಿನಲ್ಲಿ ಬರುತ್ತಾಳೆ. ಮುಂದೆ ಏನೆಲ್ಲಾ ಆಗುತ್ತೆ ಎನ್ನುವುದೇ ಈ ಚಿತ್ರದ ತಿರುಳು.
Credit: Filmibeat



Click it and Unblock the Notifications

