Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
Gold Rate Jan 30: ಚಿನ್ನದ ಬೆಲೆ 8,230 ರೂ., ಬೆಳ್ಳಿ ಬೆಲೆ 15,000 ರೂ. ಕಡಿಮೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ
Gold Rate Jan 30: ಚಿನ್ನ ಪ್ರಿಯರಿಗೆ ಶುಕ್ರವಾರವು ಶುಭ ಶುಕ್ರವಾರವಾಗಿ ಬದಲಾಗಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಹಾಗೂ ಗುರುವಾರ ಒಂದೇ ದಿನ 11,000 ಸಾವಿರ ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ / ಜನವರಿ 30ರಂದು ಭರ್ಜರಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಶುಕ್ರವಾರದಂದು ಬರೋಬ್ಬರಿ 8,230 ರೂಪಾಯಿ ಕಡಿಮೆಯಾಗಿದೆ. ಜನವರಿ 30ರ ಚಿನ್ನ ಮತ್ತು ಬೆಳ್ಳಿ ಬೆಲೆಯು ನಿಖರವಾದ ಮಾಹಿತಿ ಹಾಗೂ ನೆನ್ನೆಗಿಂತ ಇಂದು ಎಷ್ಟು ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಜನವರಿ 30ರ ಚಿನ್ನ ಮತ್ತು ಬೆಳ್ಳಿ ಬೆಲೆಯು ಲೋಹ ಪ್ರಿಯರಲ್ಲಿ ನಿರಾಳ ಹಾಗೂ ಸಂತೋಷವನ್ನುಂಟು ಮಾಡಿದೆ. ಬರೋಬ್ಬರಿ 15 ದಿನಗಳ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಕಡಿಮೆ ಆಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅನುಕ್ರಮವಾಗಿ 8,230 ರೂಪಾಯಿ ಹಾಗೂ 15,000 ರೂ. ಕಡಿಮೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ನ ಚಿನ್ನದ ಬೆಲೆಯು 1 ಗ್ರಾಂಗೆ 17,062 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,70,620 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 1 ಗ್ರಾಂನ ಚಿನ್ನದ ಬೆಲೆಯು 823 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂನ ಚಿನ್ನದ ಮೇಲೆ 8,230 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 15,640 ರೂ. ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,56,440 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 755 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 7,550 ರೂ. ಕಡಿಮೆ ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 12,797 ರೂ. ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,27,970 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ನ ಚಿನ್ನದ ಬೆಲೆಯಲ್ಲಿ 1 ಗ್ರಾಂನ ಮೇಲೆ 617 ರೂಪಾಯಿ ಹಾಗೂ 10 ಗ್ರಾಂನ ಮೇಲೆ 6,170 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆ ಹೇಗಿದೆ ?
ಇನ್ನು ಜನವರಿ 30ರಂದು ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 395 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 3,95,000 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 15 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ ಬರೋಬ್ಬರಿ 15,000 ರೂ. ಕಡಿಮೆಯಾಗಿದೆ.
ಚಿನ್ನ ಪ್ರಿಯರು ನಿರಾಳ
ಇನ್ನು ಚಿನ್ನದ ಬೆಲೆಯು ಏಕಾಏಕಿ ಇಳಿಕೆಯಾಗಿರುವುದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಗುರುವಾರ ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 11,000 ರೂಪಾಯಿ ಹೆಚ್ಚಳವಾಗಿತ್ತು. ಇದನ್ನು ನೋಡಿದ್ದ ಚಿನ್ನ ಪ್ರಿಯರು ಚಿನ್ನದ ಬೆಲೆ ಈ ರೀತಿಯಾದರೆ ಚಿನ್ನ ಖರೀದಿ ತುಂಬಾ ಕಷ್ಟ ಎಂದೇ ಭಾವಿಸಿದ್ದರು.
Credit: Oneindia



Click it and Unblock the Notifications
