Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
Gold Rate: ಚಿನ್ನ ಪ್ರಿಯರಿಗೆ ಸೂಪರ್ ಡೂಪರ್ ಸುದ್ದಿ! 1,400 ರೂ. ಇಳಿಕೆ ಕಂಡ ಚಿನ್ನದ ಬೆಲೆ
ಚಿನ್ನ ಪ್ರಿಯರಿಗೆ ಬಂಪರ್ ಸುದ್ದಿ. ಕೊನೆಗೂ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ. ಚಿನ್ನದ ಬೆಲೆ ಏರಿಕೆಯಿಂದ ಜನ ಅಂತೂ ಕಂಗಾಲಾಗಿದ್ರು. ಆದ್ರೆ ಹಲವು ದಿನಗಳ ನಂತರ ಇದೀಗ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಅಂತೂ ಚಿನ್ನ ಖರೀದಿಸೋರಿಗೆ ಬೆಸ್ಟ್ ಟೈಂ ಬಂದೇ ಬಿಡ್ತು. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ (Gold-Silver Rate) ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
ನಿನ್ನೆಯಷ್ಟೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿತ್ತು. ಆದ್ರೆ ಇಂದು ದಿಢೀರ್ ಪಾತಾಳಕ್ಕೆ ಕುಸಿದಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,386 ರೂ. ಆಗಿದ್ದು, ನಿನ್ನೆ 13,538 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹152 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,07,088 ರೂ. ಆಗಿದ್ದು, ನಿನ್ನೆ 1,08,304 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,216 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,33,860 ರೂ. ಆಗಿದ್ದು, ನಿನ್ನೆ 1,35,380 ರೂ. ಇತ್ತು. ನಿನ್ನೆಗಿಂತ ಇಂದು ₹1,520 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,38,600 ರೂ. ಆಗಿದ್ದು, ನಿನ್ನೆ 13,53,800 ರೂ. ಇತ್ತು. ಇಂದು ಬರೋಬ್ಬರಿ 15,200 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,270 ರೂ. ಆಗಿದ್ದು, ನಿನ್ನೆ 12,410 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹140 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 98,160 ರೂ. ಆಗಿದ್ದು, ನಿನ್ನೆ 99,280 ರೂ. ಇತ್ತು. ನಿನ್ನೆಗಿಂತ ಇಂದು 1,120 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,22,700 ರೂ. ಆಗಿದ್ದು, ನಿನ್ನೆ 1,24,100 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,400 ರೂ. ವ್ಯತ್ಯಾಸವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,27,00 ರೂ. ಆಗಿದ್ದು, ನಿನ್ನೆ 12,41,000 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ:
ಭಾರತದಲ್ಲಿ 18 ಕ್ಯಾರಟ್ ಚಿನ್ನ ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುತ್ತದೆ. 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹10,039 ರೂ. ಆಗಿದ್ದು, ನಿನ್ನೆ 10,154 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 115 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹80,312 ರೂ. ಆಗಿದ್ದು, ನಿನ್ನೆ 81,232 ರೂ. ಇತ್ತು. ನಿನ್ನೆಗಿಂತ ಇಂದು 920 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,00,390 ರೂ. ಆಗಿದ್ದು, ನಿನ್ನೆ 1,01,540 ರೂ. ಇತ್ತು. ಇಂದು ಒಟ್ಟು 1,150 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,03,900 ರೂ. ಆಗಿದ್ದು, ನಿನ್ನೆ 10,15,400 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,473, 22K ರೂ. 12,350, 18K ರೂ. 10,300
ಮುಂಬೈ: 24K ರೂ. 13,386, 22K ರೂ. 12,270, 18K ರೂ. 10,039
ದೆಹಲಿ: 24K ರೂ. 13,386, 22K ರೂ. 12,285, 18K ರೂ. 10,054
ಕೋಲ್ಕತ್ತಾ: 24K ರೂ. 13,386, 22K ರೂ. 12,270, 18K ರೂ. 10,039
ಬೆಂಗಳೂರು: 24K ರೂ. 13,386, 22K ರೂ. 12,270, 18K ರೂ. 10,039
ಹೈದರಾಬಾದ್: 24K ರೂ. 13,386, 22K ರೂ. 12,270, 18K ರೂ. 10,039
ಕೇರಳ: 24K ರೂ. 13,386, 22K ರೂ. 12,270, 18K ರೂ. 10,039
ಪುಣೆ: 24K ರೂ. 13,386, 22K ರೂ. 12,270, 18K ರೂ. 10,039
ವಡೋದರಾ: 24K ರೂ. 13,391, 22K ರೂ. 12,275, 18K ರೂ. 10,044
ಅಹಮದಾಬಾದ್: 24K ರೂ. 13,391, 22K ರೂ. 12,275, 18K ರೂ. 10,044
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ನಿನ್ನೆಯಷ್ಟೇ ಬೆಳ್ಳಿ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಅಲ್ಲದೇ ಬೆಳ್ಳಿ ಪ್ರಿಯರು ನಿಬ್ಬೆರಗಾಗಿದ್ದರು. ಆದ್ರೆ ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು 199.10 ರೂ. ಆಗಿದ್ದು, ನಿನ್ನೆ ₹203 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 3.90 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,592.80 ರೂ. ಆಗಿದೆ. ನಿನ್ನೆ ₹1,624 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 31.20 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹1,991 ರೂ. ಆಗಿದೆ. ಇನ್ನು 100 ಬೆಳ್ಳಿ ದರ ₹19,910 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,99,100 ರೂ. ಇಳಿಕೆ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 16ರ ರಾಯಿಟರ್ಸ್ ವರದಿಯ ಪ್ರಕಾರ, ಹೊಸ ವರ್ಷಕ್ಕೆ ಫೆಡರಲ್ ರಿಸರ್ವ್ ನೀತಿಯ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದರಿಂದ, ಯುಎಸ್ ಆರ್ಥಿಕ ವರದಿ ಬಿಡುಗಡೆಗೆ ಹೂಡಿಕೆದಾರರು ಕಾಯುತ್ತಿದ್ದರಿಂದ, ಡಾಲರ್ ಮೌಲ್ಯ ಕುಸಿತದೊಂದಿಗೆ ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ.
GMT 0230 ವೇಳೆಗೆ ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ 0.1% ಏರಿಕೆಯಾಗಿ, $4,311.64 ಕ್ಕೆ ತಲುಪಿದೆ. ಇದುೀ ವರ್ಷದಲ್ಲಿ 64% ನಷ್ಟು ಏರಿಕೆಯಾಗಿದೆ.
Credit: Goodreturns



Click it and Unblock the Notifications