Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
Duster: ಮಾರ್ಚ್ 17ಕ್ಕೆ ಹೊಸ ಹೈಬ್ರಿಡ್ SUV ಬಿಡುಗಡೆ: ದಶಕದ ಹಿಂದೆ ಮಿಂಚಿ ಮರೆಯಾಗಿದ್ದ ಕಾರಿದು
ರೆನಾಲ್ಟ್ ಡಸ್ಟರ್ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಎಸ್‌ಯುವಿ ಎಂದ ತಕ್ಷಣ ನೆನಪಾಗುವ ಮೊದಲ ಕಾರಾಗಿತ್ತು. ದಶಕದ ಹಿಂದೆ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ರೆನಾಲ್ಟ್ ಡಸ್ಟರ್ (Renault duster) ಅನ್ನು ಮೊದಲಿಗೆ 2012 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಆಗ ಇದರ ಡಿಸೈನ್ ಹಾಗೂ ಪರ್ಫಾಮೆನ್ಸ್‌ಗೆ ಜನ ಫಿದಾ ಆಗಿದ್ದರು, ನಂತರ ಇತರ ಬ್ರಾಂಡ್‌ಗಳ ಪೈಪೋಟಿ ಹಾಗೂ ವಿವಿಧ ಕಾರಣಾಂತರಗಳಿಂದ 2022 ರಲ್ಲಿ ಕಾರನ್ನು ಸ್ಥಗಿತಗೊಳಿಸಲಾಯಿತು. ಆದರೆ ಜನರಲ್ಲಿ ಇಂದಿಗೂ ಈ ಕಾರಿನ ಮೇಲೆ ಕ್ರೇಜ್ ಇರುವ ಕಾರಣ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಂತಹ ಡಿಸೈನ್, ಫೀಚರ್ಸ್ ಹಾಗೂ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.
ರೆನಾಲ್ಟ್ ಕಂಪನಿಯು ಈಗ ಡಸ್ಟರ್ ಅನ್ನು ಹೊಸ ಡಿಸೈನ್‌ನಲ್ಲಿ ಮರಳಿ ತರಲು ಸಜ್ಜಾಗಿದೆ. ಮುಂಬರುವ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿ ಸಖತ್ ರಗಡ್ ಹಾಗೂ ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ. ಜನವರಿ 26 ಗಣರಾಜ್ಯೋತ್ಸವದಂದು ಕಂಪನಿಯು ಇದನ್ನು ಅನಾವರಣಗೊಳಿಸಿ ಕಾರಿನ ವಿಶೇಷತೆಗಳನ್ನು ಹಂಚಿಕೊಂಡಿತ್ತು. ಇದೀಗ ಮಾರ್ಚ್ 17 ರಂದು ಬೆಲೆಗಳನ್ನು ಘೊಷಿಸಿ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಹೊಸ ರೆನಾಲ್ಟ್ ಡಸ್ಟರ್ CMF-B LS ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದು, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಹೊಸ ರೆನಾಲ್ಟ್ ಡಸ್ಟರ್ ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಹೈ-ಪರ್ಫಾಮೆನ್ಸ್‌ನೊಂದಿಗೆ ಬರಲಿದೆ ಎಂದು ರೆನಾಲ್ಟ್ ಇಂಡಿಯಾ ಸಿಇಒ ಸ್ಟೀಫನ್ ಡೆಬ್ಲೈಸ್ ಹೇಳಿದ್ದಾರೆ.
ಹೊಸ ಡಸ್ಟರ್ ವಿಶೇಷತೆಗಳು
ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಎಂಜಿನ್ ವಿಷಯಕ್ಕೆ ಬಂದರೆ 1.0-ಲೀಟರ್, 3-ಸಿಲಿಂಡರ್, ಟರ್ಬೊ - ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್, 4-ಸಿಲಿಂಡರ್, ಟರ್ಬೊ - ಪೆಟ್ರೋಲ್, ಡೈರೆಕ್ಟ್ - ಇಂಜೆಕ್ಷನ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಸಲಾದ 1.8-ಲೀಟರ್, 4-ಸಿಲಿಂಡರ್, ಡೈರೆಕ್ಟ್ - ಇಂಜೆಕ್ಷನ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.
ಮೂಲಗಳ ಪ್ರಕಾರ 2026ರ ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್‌ನ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಬಹುದು. ಆರಂಭಿಕ ಬೆಲೆ ರೂ. 10 ಲಕ್ಷ (ಎಕ್ಸ್-ಶೋರೂಂ)ಕ್ಕಿಂತ ಕಡಿಮೆ ಇರಬಹುದು ಎನ್ನಲಾಗಿದೆ. ಒಂದೆಡೆ ಮಾರ್ಚ್‌ನಲ್ಲಿ ಅಧಿಕೃತವಾಗಿ ಬಿಡುಗಡೆಗೆ ಸಜ್ಜಾಗಿದ್ದರೆ, ಮತ್ತೊಂದೆಡೆ ಹಲವು ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರಿಗಾಗಿ ಈ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕಾರಿನ ಮೇಲೆ ಕ್ರೇಜ್ ಹೆಚ್ಚಾಗಿದ್ದು, ಬಿಡುಗಡೆ ಬಳಿಕ ಯಾವ ಮಟ್ಟಿಗೆ ಸದ್ದು ಮಾಡಲಿದೆ ನೋಡಬೇಕಿದೆ.
ಈಗಾಗಲೇ ಹೊಸ ಡಸ್ಟರ್‌ಗಾಗಿ ಬುಕಿಂಗ್‌ಗಳು ಆರಂಭವಾಗಿದ್ದು, 21,000 ರೂ. ಪಾವತಿಸಿ ಬುಕ್ ಮಾಡಿಕೊಳ್ಳಬಹುದು. ಕೆಲ ವರದಿಗಳ ಪ್ರಕಾರ ಏಪ್ರಿಲ್‌ನಲ್ಲಿ ಡೆಲಿವರಿಗಳು ನೀಡಬಹುದು ಎಂದು ಹೇಳಲಾಗುತ್ತಿದೆ. ಒಮ್ಮೆ ಬಿಡುಗಡೆಯಾದ ಬಳಿಕ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಮತ್ತು ಈ ವಿಭಾಗದಲ್ಲಿನ ಇತರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ.
ಹೊಸ ರೆನಾಲ್ಟ್ ಡಸ್ಟರ್‌ನ ಒಳಾಂಗಣವು ಪನೋರಮಿಕ್ ಸನ್‌ರೂಫ್, ಪವರ್ಡ್ ಫ್ರಂಟ್ ಸೀಟುಗಳು, ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಆರ್ಮ್‌ರೆಸ್ಟ್, ಪವರ್ಡ್ ಟೈಲ್‌ಗೇಟ್ ಮತ್ತು 60:40 ಸ್ಪ್ಲಿಟ್ ರಿಯರ್ ಸೀಟುಗಳೊಂದಿಗೆ ಬರುತ್ತದೆ. ಜೊತೆಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಸ್ಕ್ರೀನ್ ಲೇಔಟ್, ಆಂಬಿಯೆಂಟ್ ಲೈಟಿಂಗ್, ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳ ಮೇಲೆ ಕಾರ್ಬನ್ ಫೈಬರ್ ಇನ್ಸರ್ಟ್‌ಗಳು ಇವೆ.
ಇವಿಷ್ಟೆ ಅಲ್ಲದೆ ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿದೆ. ಇತರ ಮುಖ್ಯಾಂಶಗಳಲ್ಲಿ ಅರ್ಕಾಮಿಸ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಇದರ ಪ್ರೀಮಿಯಂ ಆಕರ್ಷಣೆಯ ಸೇರ್ಪಡೆಯಾಗಿದ್ದು, ಡಸ್ಟರ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ.
Credit: Drivespark



Click it and Unblock the Notifications

